For Quick Alerts
ALLOW NOTIFICATIONS  
For Daily Alerts

Closing Bell: ಷೇರುಪೇಟೆಯಲ್ಲಿ ಮುಂದುವರಿದ ಗೂಳಿ ಓಟ, ಸೆನ್ಸೆಕ್ಸ್‌, ನಿಫ್ಟಿ ಹೆಚ್ಚಳ

|

ಭಾರತೀಯ ಷೇರುಪೇಟೆ ಗುರುವಾರ ಸಾಕಷ್ಟು ಏರಿಳಿತಗಳೊಂದಿಗೆ ಹಸಿರು ಬಣ್ಣದೊಂದಿಗೆ ದಿನದ ವಹಿವಾಟು ಅಂತಿಮಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 84 ಪಾಯಿಂಟ್ಸ್‌ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 54.80 ಪಾಯಿಂಟ್ ಹೆಚ್ಚಳಗೊಂಡಿದೆ.

 

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.17ರಷ್ಟು ಅಥವಾ 84.45 ಪಾಯಿಂಟ್ಸ್‌ ಹೆಚ್ಚಳಗೊಂಡು 49,746.21 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.37ರಷ್ಟು ಅಥವಾ 54.80 ಪಾಯಿಂಟ್ ಏರಿಕೆಗೊಂಡು 14,873.80 ಪಾಯಿಂಟ್ಸ್‌ ತಲುಪಿದೆ.

ಷೇರುಪೇಟೆಯಲ್ಲಿ ಮುಂದುವರಿದ ಗೂಳಿ ಓಟ, ಸೆನ್ಸೆಕ್ಸ್‌, ನಿಫ್ಟಿ ಹೆಚ್ಚಳ

ಇಂದು ಸುಮಾರು 1,846 ಷೇರುಗಳು ಏರಿಕೆಗೊಂಡರೆ, 1,022 ಷೇರುಗಳು ಕುಸಿದವು, ಮತ್ತು 157 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ನಿಫ್ಟಿಯಲ್ಲಿ ಜೆಎಸ್‌ಡಬ್ಲ್ಯು ಸ್ಟೀಲ್, ಟಾಟಾ ಸ್ಟೀಲ್, ಶ್ರೀ ಸಿಮೆಂಟ್ಸ್, ಟೈಟಾನ್ ಕಂಪನಿ ಮತ್ತು ಹಿಂಡಾಲ್ಕೊ ಹೆಚ್ಚು ಲಾಭ ಗಳಿಸಿದವ ಷೇರುಗಳಾಗಿದ್ದು, ಇಂಡಸ್‌ಇಂಡ್ ಬ್ಯಾಂಕ್, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಸನ್ ಫಾರ್ಮಾ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಒಎನ್‌ಜಿಸಿ ಹೆಚ್ಚು ನಷ್ಟ ಅನುಭವಿಸಿವೆ.

ಲೋಹದ ಸೂಚ್ಯಂಕವು ಸುಮಾರು 4 ಪ್ರತಿಶತದಷ್ಟು ಏರಿದರೆ, ಇನ್ಫ್ರಾ ಮತ್ತು ಐಟಿ ಸೂಚ್ಯಂಕವು ತಲಾ ಶೇಕಡಾ 1ರಷ್ಟು ಏರಿಕೆಯಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 0.5 ಪ್ರತಿಶತಕ್ಕಿಂತ ಹೆಚ್ಚಾಗಿದೆ.

English summary

Sensex Gains, Nifty Ends Above 14,850

Sensex was up 84.45 points or 0.17% at 49,746.21, and the Nifty was up 54.80 points or 0.37% at 14,873.80.
Story first published: Thursday, April 8, 2021, 16:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X