For Quick Alerts
ALLOW NOTIFICATIONS  
For Daily Alerts

Closing Bell: ಸೆನ್ಸೆಕ್ಸ್ 638 ಪಾಯಿಂಟ್ಸ್‌ ಜಿಗಿತ, ನಿಫ್ಟಿ 15800 ಮಟ್ಟಕ್ಕಿಂತ ಎತ್ತರ

|

ಭಾರತೀಯ ಷೇರುಪೇಟೆ ಗುರುವಾರ ಭರ್ಜರಿಯಾದ ಏರಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 638 ಪಾಯಿಂಟ್ಸ್‌ ಜಿಗಿತಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 191 ಪಾಯಿಂಟ್ಸ್ ಹೆಚ್ಚಾಗಿ 15,800 ಮಟ್ಟಕ್ಕಿಂತ ಏರಿಕೆಯಾಗಿದೆ.

 

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 1.22ರಷ್ಟು ಅಥವಾ 638.70 ಪಾಯಿಂಟ್ಸ್ ಹೆಚ್ಚಾಗಿ 52,837.21 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 1.23ರಷ್ಟು ಅಥವಾ 191.90 ಪಾಯಿಂಟ್ಸ್ ಏರಿಕೆಗೊಂಡು 15,824 ಪಾಯಿಂಟ್ಸ್ ಮುಟ್ಟಿದೆ.

Closing Bell: ಸೆನ್ಸೆಕ್ಸ್ 638 ಪಾಯಿಂಟ್ಸ್‌ ಜಿಗಿತ

ದಿನದ ವಹಿವಾಟು ಅಂತ್ಯಕ್ಕೆ 2131 ಷೇರುಗಳು ಏರಿಕೆಗೊಂಡರೆ, 1054 ಷೇರುಗಳು ಕುಸಿದರೆ, 128 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಜೆಎಸ್‌ಡಬ್ಲ್ಯು ಸ್ಟೀಲ್, ಟೆಕ್ ಮಹೀಂದ್ರಾ, ಬಜಾಜ್ ಫೈನಾನ್ಸ್, ಭಾರ್ತಿ ಏರ್‌ಟೆಲ್ ಮತ್ತು ಬಜಾಜ್ ಫಿನ್‌ಸರ್ವ್ ನಿಫ್ಟಿಯಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ. ಜೊತೆಗೆ ಎಚ್‌ಯುಎಲ್, ಏಷ್ಯನ್ ಪೇಂಟ್ಸ್, ಬಜಾಜ್ ಆಟೋ, ಸಿಪ್ಲಾ ಮತ್ತು ಬ್ರಿಟಾನಿಯಾ ಕೂಡ ಏರಿಕೆಯಾಗಿದೆ.

ಎಫ್‌ಎಂಸಿಜಿಯನ್ನು ಹೊರತುಪಡಿಸಿ, ಇತರ ಎಲ್ಲ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ ಶೇಕಡಾ 1.5ರಷ್ಟು ಏರಿಕೆಯಾಗಿದೆ.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಮೌಲ್ಯ 15 ಡಾಲರ್ ಏರಿಕೆಯೊಂದಿಗೆ ಪ್ರತಿ ಡಾಲರ್‌ಗೆ 74.46 ಕ್ಕೆ ತಲುಪಿದೆ.

English summary

Sensex Jumps Over 638 Points: Nifty Ends Above 15800

Sensex was up 638.70 points or 1.22% at 52,837.21, and the Nifty was up 191.90 points or 1.23% at 15,824.
Story first published: Thursday, July 22, 2021, 16:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X