For Quick Alerts
ALLOW NOTIFICATIONS  
For Daily Alerts

ಷೇರು ಮಾರ್ಕೆಟ್ ಕುಸಿತದ ಮಧ್ಯೆಯೂ ಏರಿಕೆ ಕಂಡ ಮಾರುತಿ ಸುಜುಕಿ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಶುಕ್ರವಾರ (ಸೆಪ್ಟೆಂಬರ್ 4, 2020) ಕುಸಿತ ಕಂಡಿವೆ. ಸೆನ್ಸೆಕ್ಸ್ 633 ಅಂಶಗಳ ಇಳಿಕೆಯಾಗಿ, ದಿನಾಂತ್ಯಕ್ಕೆ 38,357 ಅಂಶದೊಂದಿಗೆ ವ್ಯವಹಾರ ಮುಗಿಸಿದೆ. ಇನ್ನು ನಿಫ್ಟಿ ಸೂಚ್ಯಂಕವು 194 ಅಂಶಗಳ ಕುಸಿತದೊಂದಿಗೆ ವಹಿವಾಟು ಚುಕ್ತಾ ಮಾಡಿದೆ.

 

ಯುರೋಪ್ ಮಾರ್ಕೆಟ್ ನಲ್ಲಿನ ಪಾಸಿಟಿವ್ ಟ್ರೆಂಡ್ ಹಾಗೂ ಡೌ ಫ್ಯೂಚರ್ಸ್ ನಲ್ಲಿನ ಚೇತರಿಕೆ ಹೊರತಾಗಿಯೂ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ತೀಕ್ಷ್ಣ ಕುಸಿತ ಕಂಡಿವೆ. ಭಾರತ- ಚೀನಾ ಗಡಿಯಲ್ಲಿ ಹೆಚ್ಚುತ್ತಿದ್ದು, ವಾರಾಂತ್ಯದ ಹಿನ್ನೆಲೆಯಲ್ಲಿ ಖರೀದಿಯನ್ನು ಮುಂದುವರಿಸಿಲ್ಲ.

ಟ್ರೇಡಿಂಗ್ ವ್ಯವಹಾರ ಸೆ. 1ರಿಂದಲೇ ಬದಲು; ಸೆಬಿಯಿಂದ ಹೊಸ ನಿಯಮಾವಳಿ

ಜೆಎಸ್ ಡಬ್ಲ್ಯು ಸ್ಟೀಲ್, ಟಾಟಾ ಸ್ಟೀಲ್, ಅದಾನಿ ಪೋರ್ಟ್ಸ್ ಹಾಗೂ ಎನ್ ಟಿಪಿಸಿ ಕಂಪೆನಿಯ ಷೇರುಗಳು ನಿಫ್ಟಿಯಲ್ಲಿ ಪ್ರಮುಖವಾಗಿ ಇಳಿಕೆ ಕಂಡವು. ಇಂಥ ಕುಸಿತದ ಮಧ್ಯೆಯೂ ಮಾರುತಿ ಸುಜುಕಿ ಕಂಪೆನಿ ಷೇರು ಏರಿಕೆ ಕಂಡಿತು.

ಷೇರು ಮಾರ್ಕೆಟ್ ಕುಸಿತದ ಮಧ್ಯೆಯೂ ಏರಿಕೆ ಕಂಡ ಮಾರುತಿ ಸುಜುಕಿ

ಲೋಹದ ವಲಯದ ಷೇರುಗಳ ವಹಿವಾಟು ದುರ್ಬಲವಾಗಿದ್ದವು. ಬ್ಯಾಂಕಿಂಗ್ ಷೇರುಗಳು ಅದನ್ನು ಅನುಸರಿಸಿದವು. ಈ ದಿನ ನಿಫ್ಟಿ ಬ್ಯಾಂಕ್ ಹಾಗೂ ಲೋಹ ಅತಿ ದೊಡ್ಡ ನಷ್ಟ ಕಂಡವು. ಬ್ಯಾಂಕಿಂಗ್ ಷೇರುಗಳಲ್ಲಿ ಆಕ್ಸಿಸ್ ಬ್ಯಾಂಕ್, ಎಸ್ ಬಿಐ, ಐಸಿಐಸಿಐ ಬ್ಯಾಂಕ್ ಭಾರೀ ನಷ್ಟ ಕಷ್ಟ ಕಂಡವು.

English summary

Sensex, Nifty Index Tanks In Stock Market; Maruti Suzuki Gain

Indian stock market index sensex and nifty nifty tank on September 4, 2020. Maruti Suzuki share gain.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X