For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 400ಕ್ಕೂ ಹೆಚ್ಚು ಪಾಯಿಂಟ್ ಗಳ ಏರಿಕೆ; ಬ್ಯಾಂಕಿಂಗ್ ಷೇರುಗಳು ಮಿಂಚು

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೋಮವಾರದ (ಅಕ್ಟೋಬರ್ 19, 2020) ಬೆಳಗಿನ ವಹಿವಾಟಿನಲ್ಲಿ ಭರ್ಜರಿ ಏರಿಕೆ ಕಂಡವು. ಬೆಳಗ್ಗೆ 11.10ರ ಸುಮಾರಿಗೆ ಸೆನ್ಸೆಕ್ಸ್ ಸೂಚ್ಯಂಕವು 431.03 ಪಾಯಿಂಟ್ ಹೆಚ್ಚಳವಾಗಿ, 40,414.01 ಪಾಯಿಂಟ್ ನೊಂದಿಗೆ ವ್ಯವಹಾರ ನಡೆಸಿದರೆ, ನಿಫ್ಟಿ ಸೂಚ್ಯಂಕವು 106.9 ಪಾಯಿಂಟ್ ಏರಿಕೆಯಾಗಿ 11,869.35 ಅಂಶದೊಂದಿಗೆ ವ್ಯವಹಾರ ನಡೆಸಿತು.

ಅತ್ಯಂತ ಮೌಲ್ಯಯುತ 6 ಕಂಪೆನಿಗಳ 1.02 ಲಕ್ಷ ಕೋಟಿ ಮೌಲ್ಯ ಐದು ದಿನದಲ್ಲಿ ಕುಸಿತ

ನಿಫ್ಟಿಯಲ್ಲಿನ ಬ್ಯಾಂಕ್ ಸೂಚ್ಯಂಕವು 2% ಏರಿಕೆ ಕಂಡರೆ, ಎನರ್ಜಿ 1% ಹೆಚ್ಚಳ ಆಯಿತು. ಬಿಎಸ್ ಇ ಸ್ಮಾಲ್ ಕ್ಯಾಪ್ ಹಾಗೂ ಮಿಡ್ ಕ್ಯಾಪ್ ಸೂಚ್ಯಂಕಗಳು ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡವು. ಜಾಗತಿಕ ಮಟ್ಟದ ಮಾರುಕಟ್ಟೆಗಳ ಪ್ರಭಾವ, ಯುಎಸ್ ನಲ್ಲಿ ಆರ್ಥಿಕ ಪ್ಯಾಕೇಜ್ ಬಗ್ಗೆ ಭರವಸೆ ಇತ್ಯಾದಿ ಅಂಶಗಳು ಏರಿಕೆಗೆ ಪುಷ್ಟಿ ನೀಡಿದವು.

Stock Market News:ಸೆನ್ಸೆಕ್ಸ್ 400ಕ್ಕೂ ಹೆಚ್ಚು ಪಾಯಿಂಟ್ ಗಳ ಏರಿಕೆ

 

ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್ ಡಿಎಫ್ ಸಿ, ಒಎನ್ ಜಿಸಿ ಹಾಗೂ ಗೇಲ್ ಷೇರುಗಳು ನಿಫ್ಟಿಯಲ್ಲಿ ಪ್ರಮುಖವಾಗಿ ಏರಿಕೆ ದಾಖಲಿಸಿದವು. 2.50%ಗೂ ಹೆಚ್ಚು ಮೇಲಕ್ಕೆ ಏರಿದವು. ಇನ್ನು ಯುಪಿಎಲ್, ಐಷರ್ ಮೋಟಾರ್ಸ್, ಹೀರೋ ಮೋಟೋಕಾರ್ಪ್, ಡಿವೀಸ್ ಲ್ಯಾಬ್ಸ್ ಹಾಗೂ ಸಿಪ್ಲಾ ಷೇರುಗಳು ಇಳಿಕೆ ಕಂಡವು.

English summary

Sensex Surge More Than 400 Points In Early Trade; Banking Stocks Rally On October 19, 2020

Indian stock market index sensex surge more than 400 points in early trade on Monday, October 19, 2020. Banking stocks rally.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X