For Quick Alerts
ALLOW NOTIFICATIONS  
For Daily Alerts

Closing Bell: ಸೆನ್ಸೆಕ್ಸ್‌ 228 ಪಾಯಿಂಟ್ಸ್‌ ಜಿಗಿತ, ನಿಫ್ಟಿ 81 ಪಾಯಿಂಟ್ಸ್ ಏರಿಕೆ

|

ಭಾರತೀಯ ಷೇರುಪೇಟೆಯು ಸೋಮವಾರ ಸಕಾರಾತ್ಮಕವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 228 ಪಾಯಿಂಟ್ಸ್ ಏರಿಕೆಗೊಂಡಿದ್ದು, ನಿಫ್ಟಿ 81 ಪಾಯಿಂಟ್ಸ್‌ ಜಿಗಿದಿದೆ.

 

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.44ರಷ್ಟು ಅಥವಾ 228.46 ಪಾಯಿಂಟ್ಸ್‌ ಏರಿಕೆಗೊಂಡು 52328.51 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇ.0.52ರಷ್ಟು ಅಥವಾ 81.4 ಪಾಯಿಂಟ್ಸ್‌ ಹೆಚ್ಚಾಗಿ 15751.70 ಪಾಯಿಂಟ್ಸ್‌ ಮುಟ್ಟಿದೆ.

ದಿನದ ವಹಿವಾಟು ಅಂತ್ಯಕ್ಕೆ ಸುಮಾರು 2284 ಷೇರುಗಳು ಏರಿಕೆಗೊಂಡರೆ, 961 ಷೇರುಗಳು ಕುಸಿದವು, ಮತ್ತು 156 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಸೆನ್ಸೆಕ್ಸ್‌ 228 ಪಾಯಿಂಟ್ಸ್‌ ಜಿಗಿತ, ನಿಫ್ಟಿ 81 ಪಾಯಿಂಟ್ಸ್ ಏರಿಕೆ

ನಿಫ್ಟಿಯಲ್ಲಿ ಅದಾನಿ ಪೋರ್ಟ್ಸ್, ಪವರ್ ಗ್ರಿಡ್ ಕಾರ್ಪ್, ಎನ್‌ಟಿಪಿಸಿ, ಶ್ರೀ ಸಿಮೆಂಟ್ಸ್ ಮತ್ತು ಟಾಟಾ ಮೋಟಾರ್ಸ್ ಪ್ರಮುಖವಾಗಿ ಏರಿಕೆಗೊಂಡ ಷೇರುಗಳಾಗಿದ್ದು, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್, ಎಚ್‌ಡಿಎಫ್‌ಸಿ, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಡಿವಿಸ್ ಲ್ಯಾಬ್ಸ್ ಕುಸಿದಿವೆ.

ಮೆಟಲ್ ಮತ್ತು ಫಾರ್ಮಾ ಸೂಚ್ಯಂಕಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದರೆ, ಇತರ ಎಲ್ಲಾ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.7 ರಿಂದ 1.4 ರಷ್ಟು ಏರಿಕೆಯಾಗಿದೆ.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ 19 ಪೈಸೆ ಏರಿಕೆ ಕಂಡು ಪ್ರತಿ ಡಾಲರ್‌ಗೆ 72.84 ಕ್ಕೆ ತಲುಪಿದೆ.

English summary

Sensex Up 228 Points: Nifty Hold Above 15700

Sensex was up 228.46 points or 0.44% at 52328.51, and the Nifty was up 81.40 points or 0.52% at 15751.70.
Story first published: Monday, June 7, 2021, 15:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X