For Quick Alerts
ALLOW NOTIFICATIONS  
For Daily Alerts

Closing Bell: ಸೆನ್ಸೆಕ್ಸ್‌ 296 ಪಾಯಿಂಟ್ಸ್ ಜಿಗಿತ, 14900 ಗಡಿ ದಾಟಿದ ನಿಫ್ಟಿ

|

ಭಾರತೀಯ ಷೇರುಪೇಟೆಯು ಸೋಮವಾರ ಭರ್ಜರಿ ಆರಂಭದ ಜೊತೆಗೆ ಹಸಿರು ಬಣ್ಣದಲ್ಲಿಯೇ ದಿನದ ವಹಿವಾಟು ಕೊನೆಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 296 ಪಾಯಿಂಟ್ಸ್‌ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 14900 ಮಟ್ಟಕ್ಕಿಂತ ಹೆಚ್ಚಾಗಿದೆ.

 

ಗೂಗಲ್ ಫೋಟೋಸ್ ಇನ್ಮುಂದೆ ಉಚಿತವಿಲ್ಲ: ಸ್ಟೋರೇಜ್‌ಗೆ ಹಣ ಪಾವತಿಸಬೇಕು!

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡಾ 0.60ರಷ್ಟು ಅಥವಾ 295.94 ಪಾಯಿಂಟ್ಸ್‌ ಹೆಚ್ಚಾಗಿ 49502.41 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.80ರಷ್ಟು ಅಥವಾ 119.20 ಪಾಯಿಂಟ್ಸ್‌ ಏರಿಕೆಗೊಂಡು 14,942.40 ಪಾಯಿಂಟ್ಸ್‌ ಮುಟ್ಟಿದೆ.

Closing Bell: ಸೆನ್ಸೆಕ್ಸ್‌ 296 ಪಾಯಿಂಟ್ಸ್ ಜಿಗಿತ

ಇಂದು ಸುಮಾರು 2034 ಷೇರುಗಳು ಏರಿಕೆಗೊಂಡರೆ, 1004 ಷೇರುಗಳು ಕುಸಿತಗೊಂಡಿವೆ ಮತ್ತು 220 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಕೋಲ್ ಇಂಡಿಯಾ, ಯುಪಿಎಲ್, ಹಿಂಡಾಲ್ಕೊ ಇಂಡಸ್ಟ್ರೀಸ್, ಐಒಸಿ ಮತ್ತು ಟಾಟಾ ಮೋಟಾರ್ಸ್ ನಿಫ್ಟಿಯಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿದ್ದು, ಶ್ರೀ ಸಿಮೆಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್, ಬ್ರಿಟಾನಿಯಾ ಇಂಡಸ್ಟ್ರೀಸ್, ಇನ್ಫೋಸಿಸ್ ಮತ್ತು ಹೀರೋ ಮೊಟೊಕಾರ್ಪ್ ನಷ್ಟ ಅನುಭವಿಸಿವೆ.

ಇನ್ನು ಭಾರತೀಯ ರೂಪಾಯಿ ಆರಂಭಿಕ ನಷ್ಟವನ್ನು ಅಳಿಸಿಹಾಕಿತು ಮತ್ತು ದಿನದ ಗರಿಷ್ಠ 73.34 ಡಾಲರ್‌ಗೆ ಕೊನೆಗೊಂಡಿತು.

English summary

Sensex Up 296 Points: Nifty Ends Above 14900

Sensex was up 295.94 points or 0.60% at 49,502.41, and the Nifty was up 119.20 points or 0.80% at 14,942.40.
Story first published: Monday, May 10, 2021, 16:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X