For Quick Alerts
ALLOW NOTIFICATIONS  
For Daily Alerts

ಷೇರುಪೇಟೆ: ಕುಸಿದಿದ್ದ ಸೆನ್ಸೆಕ್ಸ್ 900 ಪಾಯಿಂಟ್ಸ್‌ ಜಿಗಿತ

|

ಭಾರತೀಯ ಷೇರುಪೇಟೆ ಸೋಮವಾರ (ಮಾ.01) ಬಹಳ ವೇಗದಿಂದ ಪ್ರಾರಂಭವಾಗಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 900ಕ್ಕೂ ಅಧಿಕ ಪಾಯಿಂಟ್ಸ್ ಏರಿಕೆ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 265 ಪಾಯಿಂಟ್ಸ್ ಹೆಚ್ಚಳಗೊಂಡಿದೆ.

ಬೆಳಿಗ್ಗೆ 10.40ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 1.89ರಷ್ಟು ಅಥವಾ 927 ಪಾಯಿಂಟ್ಸ್ ಏರಿಕೆಗೊಂಡು 50,027.92 ಪಾಯಿಂಟ್ಸ್ ಹೆಚ್ಚಳಗೊಂಡರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 263 ಪಾಯಿಂಟ್ಸ್ ಅಥವಾ ಶೇಕಡಾ 1.81ರಷ್ಟು ಹೆಚ್ಚಾಗಿ 14,800 ಪಾಯಿಂಟ್ಸ್‌ ತಲುಪಿದೆ.

ಷೇರುಪೇಟೆ: ಕುಸಿದಿದ್ದ ಸೆನ್ಸೆಕ್ಸ್ 900 ಪಾಯಿಂಟ್ಸ್‌ ಜಿಗಿತ

 

ಅಪೊಲೊ ಟೈಯರ್ಸ್, ಬಿಹೆಚ್‌ಇಎಲ್‌, ಐಒಸಿ, ಏಷ್ಯನ್‌ ಪೈಂಟ್ಸ್, ಅಶೋಕ್ ಲೇಲ್ಯಾಂಡ್, ಬಾಷ್, ಹೆಚ್‌ಸಿಎಲ್‌ ಟೆಕ್‌, ಭಾರತ್ ಎಲೆಕ್ಟ್ರಾನಿಕ್ಸ್‌ ಷೇರುಗಳು ಏರಿಕೆ ಸಾಧಿಸಿದ್ದು, ಭಾರ್ತಿ ಏರ್‌ಟೆಲ್, ಬ್ಯಾಂಕ್ ಆಫ್ ಬರೋಡಾ, ಎಸ್ಕಾರ್ಟ್ಸ್, ಕೋಲ್ಗೇಟ್‌ ಷೇರುಗಳು ತೀವ್ರ ಕುಸಿತ ಸಾಧಿಸಿವೆ.

ಮಾರ್ಚ್ 1 ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಕುಸಿದಿದೆ. ಇದು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ, ಹಿಂದಿನ 73.46 ಕ್ಕೆ ಹೋಲಿಸಿದರೆ ಪ್ರತಿ ಡಾಲರ್‌ಗೆ 31 ಪೈಸೆ ಇಳಿಕೆಗೊಂಡು 73.77 ಡಾಲರ್‌ಗೆ ತಲುಪಿದೆ.

English summary

Sensex Up 900 Points: Nifty Rises 270 Points

India's Share market Sensex and Nifty Rises On Monday. Sensex Up 1.89% and Nifty Rises 1.81%
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X