ಕಳೆದ ವಾರ ಟಾಪ್ 10 ಕಂಪನಿಗಳ ಪೈಕಿ HDFC ಬ್ಯಾಂಕಿಗೆ ಹೆಚ್ಚಿನ ಲಾಭ
ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಏಳು ಕಂಪನಿಗಳು ಹೆಚ್ಚಿನ ಏರಿಳಿತ ಕಂಡಿವೆ. ಒಟ್ಟಾರೆ, ಮೂರು ಕಂಪನಿಗಳು 1,16,048.1 ಕೋಟಿ ರು ಮೌಲ್ಯ ಹೆಚ್ಚಿಸಿಕೊಂಡಿವೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆ ಏರಿಳಿತ ಕಾಣುತ್ತಿದ್ದು, ಆರ್ ಬಿಐ ರೆಪೋ ದರ ಏರಿಕೆ, ಜಾಗತಿಕವಾಗಿ ಅನೇಕ ದೇಶಗಳಲ್ಲಿನ ಬ್ಯಾಂಕ್ ಬಡ್ಡಿದರ ಏರಿಕೆ ಎಲ್ಲದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ಕಂಡಿವೆ. ಕಳೆದ ಎರಡು ವಾರದಿಂದ ರಿಲಯನ್ಸ್ ಭಾರಿ ಲಾಭ ಗಳಿಸಿತ್ತು. ಕಳೆದ ವಾರ ಎಚ್ ಡಿ ಎಫ್ ಸಿ ಬ್ಯಾಂಕ್ ಹೆಚ್ಚಿನ ಲಾಭ ಗಳಿಸಿದೆ.
ಜಾಗತಿಕ ವಿದ್ಯಮಾನ, ವಿದೇಶಿ ಫಂಡ್ ಹರಿವು, ಎಲ್ಐಸಿ ಐಪಿಒ, ಆರ್ ಬಿಐ ರೆಪೋ ದರ ಏರಿಕೆ ನಂತರದ ಬದಲಾವಣೆಗಳು ಹೆಚ್ಚಿನ ವಹಿವಾಟು ಕಾಣದಂತೆ ಮಾಡಿವೆ. ಕಳೆದ ವಾರ ಟಿಸಿಎಸ್, ಭಾರತೀಯ ಜೀವವಿಮಾ ನಿಗಮ (ಎಲ್ಐಸಿ) ಮಾತ್ರ ನಷ್ಟ ಅನುಭವಿಸಿವೆ.
ಕಳೆದ ವಾರ, ಬೆಂಚ್ಮಾರ್ಕ್ ಬಿಎಸ್ಇ ಸೆನ್ಸೆಕ್ಸ್ 558.27 ಪಾಯಿಂಟ್ಗಳು ಅಥವಾ 1.02 ಶೇಕಡಾ ಏರಿಕೆ ಕಂಡಿದೆ.
ಕಳೆದ ವಾರ ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ, ಎಸ್ ಬಿಐ, ಕೋಟಕ್ ಮಹೀಂದ್ರಾ ಬ್ಯಾಂಕ್ ಹಾಗೂ ಹಿಂದೂಸ್ತಾನ್ ಯೂನಿಲಿವರ್ ಭಾರಿ ಲಾಭ ಗಳಿಸಿದ್ದರೆ, ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..

ಎಚ್ಡಿಎಫ್ಸಿ ಬ್ಯಾಂಕ್ 39,358.5 ಕೋಟಿ ರು ಮೌಲ್ಯ ಏರಿಕೆ
ಎಚ್ಡಿಎಫ್ಸಿ ಬ್ಯಾಂಕ್ 39,358.5 ಕೋಟಿ ರು ಮೌಲ್ಯ ಏರಿಕೆ ಕಂಡು 7,72,514.65 ಕೋಟಿ ರು ತಲುಪಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 3,230.8 ಕೋಟಿ ರು ಏರಿಕೆ ಕಂಡು 3,86,264.80 ಕೋಟಿ ರು ತಲುಪಿದೆ.

ಎಚ್ಡಿಎಫ್ಸಿ ಸಂಸ್ಥೆಯ ಮೌಲ್ಯ
ಎಚ್ಡಿಎಫ್ಸಿ ಸಂಸ್ಥೆಯ ಮೌಲ್ಯ 23,141.7 ಕೋಟಿ ರು ಏರಿಕೆ ಕಂಡು 4,22,654.38 ಕೋಟಿ ರು ತಲುಪಿದೆ. ಐಸಿಐಸಿಐ ಬ್ಯಾಂಕ್ 21,047.06 ಕೋಟಿ ರು ಮೌಲ್ಯ ಹೆಚ್ಚಿಸಿಕೊಂಡು 5,14,298.92 ಕೋಟಿ ರು ಆಗಿದೆ.

ಅತಿ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಎಸ್ ಬಿಐ
ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಎಸ್ ಬಿಐ 5,801 ಕೋಟಿ ರು ಹೆಚ್ಚಳವಾಗಿದ್ದು, 4,18,564.28 ಕೋಟಿ ರು ತಲುಪಿದೆ. ದೇಶದ ಎರಡನೇ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ 2,341.24 ಕೋಟಿ ರು ಕುಸಿತ ಕಂಡು 6,14,644.50ಕೋಟಿ ರು ತಲುಪಿದೆ.

ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್
ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 1,127.8 ಕೋಟಿ ರು ಏರಿಕೆ ಕಂಡು 5,47,525.25 ಕೋಟಿ ರು ಮೌಲ್ಯ ಉಳಿಸಿಕೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 31,761.77 ಕೋಟಿ ರು ಏರಿಕೆಕೊಂಡು 17,42,128.01 ಕೋಟಿ ರು ಮೌಲ್ಯ ತಲುಪಿದೆ

ಇತ್ತೀಚಿನ ಷೇರುಪೇಟೆಗೆ ಎಂಟ್ರಿಕೊಟ್ಟ ಎಲ್ಐಸಿ
ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ 11,599.19 ಕೋಟಿ ರು ಕಳೆದುಕೊಂಡು 11,93,655.74 ಕೋಟಿ ರು ಮೌಲ್ಯಕ್ಕೆ ಕುಸಿದಿದೆ. ಇತ್ತೀಚಿನ ಷೇರುಪೇಟೆಗೆ ಎಂಟ್ರಿಕೊಟ್ಟ ಎಲ್ಐಸಿ ಹೆಚ್ಚಿನ ಸದ್ದು ಮಾಡದೆ ನಷ್ಟ ಅನುಭವಿಸಿದರೂ ಟಾಪ್ 10 ಪಟ್ಟಿಯಲ್ಲಿ 6ನೇ ಸ್ಥಾನ ಉಳಿಸಿಕೊಂಡಿದೆ.

ಟಾಪ್ 10 ಕಂಪನಿಗಳು
ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ಡಿಎಫ್ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಎಲ್ಐಸಿ, ಐಸಿಐಸಿಐ ಬ್ಯಾಂಕ್,ಎಚ್ಡಿಎಫ್ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಮಹೀಂದ್ರಾ ಬ್ಯಾಂಕ್