For Quick Alerts
ALLOW NOTIFICATIONS  
For Daily Alerts

ಸ್ನ್ಯಾಪ್ ಡೀಲ್ ನಿಂದ ಅಕ್ಟೋಬರ್ 16ರಿಂದ 20ರ ತನಕ ಹಬ್ಬದ ಸೀಸನ್ ಮಾರಾಟ

|

ಇ- ಕಾಮರ್ಸ್ ಮಾರ್ಕೆಟ್ ಪ್ಲೇಸ್ ಸ್ನ್ಯಾಪ್ ಡೀಲ್ ನಿಂದ ಅಕ್ಟೋಬರ್ 16ರಿಂದ 20ನೇ ತಾರೀಕಿನ ತನಕ ಹಬ್ಬಗಳ ಋತುವಿನ ಮೊದಲ ಮಾರಾಟ ನಡೆಸಲಾಗುತ್ತದೆ ಎಂದು ಗುರುವಾರ ಘೋಷಣೆ ಮಾಡಲಾಗಿದೆ. ಇನ್ನು ಸ್ನ್ಯಾಪ್ ಡೀಪ್ ಗೆ ಅತಿ ದೊಡ್ಡ ಪ್ರತಿಸ್ಪರ್ಧಿ ಆಗಿರುವ ವಾಲ್ ಮಾರ್ಟ್ ಒಡೆತನದ ಫ್ಲಿಪ್ ಕಾರ್ಟ್ ನಿಂದ ಅಕ್ಟೋಬರ್ 16ರಿಂದ 21ರ ವರೆಗೆ 'ಬಿಗ್ ಬಿಲಿಯನ್ ಡೇಸ್' ವಾರ್ಷಿಕ ಮಾರಾಟ ನಡೆಯಲಿದೆ.

ಅಮೆಜಾನ್ ನಿಂದ 'ಗ್ರೇಟ್ ಇಂಡಿಯನ್ ಫೆಸ್ಟಿವಲ್' ಅನ್ನು ಅಕ್ಟೋಬರ್ 17ರಿಂದ ಆರಂಭಿಸಲಾಗುವುದು. Myntraದಿಂದ 'ಬಿಗ್ ಫ್ಯಾಷನ್ ಫೆಸ್ಟಿವಲ್' ಅನ್ನು ಅಕ್ಟೋಬರ್ 16ರಿಂದ 22ರ ತನಕ ನಡೆಸಲಾಗುತ್ತದೆ. ಸ್ನ್ಯಾಪ್ ಡೀಲ್ ನ "Kum Me Dum" ಮಾರಾಟದಲ್ಲಿ 92 ನಗರಗಳ 1.25 ಲಕ್ಷಕ್ಕೂ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

 

ಫ್ಲಿಪ್ ಕಾರ್ಟ್ ನಿಂದ ಬಿಗ್ ಬಿಲಿಯನ್ ಡೇಸ್ ಅಕ್ಟೋಬರ್ 16ರಿಂದ 21ರ ತನಕ

ಕಂಪೆನಿಯಿಂದ ಅಕ್ಟೋಬರ್ ಕೊನೆಗೆ ಹಾಗೂ ನವೆಂಬರ್ ಆರಂಭದಲ್ಲಿ ಹೆಚ್ಚೆಚ್ಚು ಮಾರಾಟ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಲಾಗಿದೆ. ಕಳೆದ ವರ್ಷಕ್ಕಿಂತ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಬೇಕು ಎಂಬ ಕಾರಣಕ್ಕೆ ಉತ್ಪಾದಕರ ಜತೆ ಸೇರಿ ಕೆಲಸ ಮಾಡುತ್ತಿದ್ದೇವೆ ಎಂದು ಸ್ನ್ಯಾಪ್ ಡೀಲ್ ಹೇಳಿಕೊಂಡಿದೆ. ತನ್ನ ಬಳಿಯ ಸರಕನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಕಾರಣಕ್ಕೆ 10 ಸಾವಿರಕ್ಕೂ ಹೆಚ್ಚು ಮಾರಾಟಗಾರರನ್ನು ಸೇರ್ಪಡೆ ಮಾಡಿಕೊಂಡಿದ್ದಾಗಿ ತಿಳಿಸಿದೆ.

ಖರ್ಚಿಗೆ ಹೆಚ್ಚಿನ ಮೌಲ್ಯ ಸಿಗಲಿದೆ

ಖರ್ಚಿಗೆ ಹೆಚ್ಚಿನ ಮೌಲ್ಯ ಸಿಗಲಿದೆ

ದೀಪಾವಳಿ ಖರೀದಿಗೆ ಏನು ಬೇಕೋ ಅದರ ಕಡೆಗೆ ಸ್ನ್ಯಾಪ್ ಡೀಲ್ ಗಮನ ಹರಿಸಲಿದೆ. ಈ ಹಬ್ಬದ ಕೊಡುಗೆಯಾಗಿ ನಮ್ಮ ಮಾರಾಟಗಾರರು ಸಹ ಹಲವು ಡೀಲ್ ಗಳನ್ನು ನೀಡುತ್ತಿದ್ದು, ಗ್ರಾಹಕರು ಮಾಡುವ ಖರ್ಚಿಗೆ ಹೆಚ್ಚಿನ ಮೌಲ್ಯ ಸಿಗಲಿದೆ ಎಂದು ಸ್ನ್ಯಾಪ್ ಡೀಲ್ ನಿಂದ ಹೇಳಿಕೊಳ್ಳಲಾಗಿದೆ.

ಹಬ್ಬಕ್ಕೆ ತಕ್ಕಂತೆ ವಿಷಯಾಧಾರಿತ ಮಾರಾಟ

ಹಬ್ಬಕ್ಕೆ ತಕ್ಕಂತೆ ವಿಷಯಾಧಾರಿತ ಮಾರಾಟ

ನವರಾತ್ರಿ, ಕರ್ವ ಚೌತ್. ಧನ್ ತೆರಾಸ್ ಮತ್ತಿತರ ಸಂದರ್ಭಗಳಿಗೆ ಅನುಗುಣವಾಗಿ ನಿರ್ದಿಷ್ಟ ವಿಷಯಾಧಾರಿತ ಇ ಸ್ಟೋರ್ಸ್ ಗಳನ್ನು ಆರಂಭಿಸಲಾಗುಬುದು ಹಾಗು ಇದರಿಂದ ಹಬ್ಬದ ಶಾಪಿಂಗ್ ಗೆ ಅನುಕೂಲ ಆಗಲಿದೆ. ಇನ್ನು ಸಾಗಣೆ ಜಾಲವನ್ನು ಸಹ ವಿಸ್ತರಿಸಿದ್ದು, ಇಪ್ಪತ್ತೈದು ಹೊಸ ಕೇಂದ್ರಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಮುಂದಿನ ವಾರಗಳಲ್ಲಿ ಇನ್ನಷ್ಟು ಸೇರಿಸಿಕೊಳ್ಳುವ ಯೋಜನೆ ಇದೆ ಎಂದು ಹೇಳಿದೆ.

ಸಾಮರ್ಥ್ಯ ವಿಸ್ತರಣೆಗೆ ಹೂಡಿಕೆ
 

ಸಾಮರ್ಥ್ಯ ವಿಸ್ತರಣೆಗೆ ಹೂಡಿಕೆ

ಹಬ್ಬಗಳ ಋತುವಿನಲ್ಲಿ ಇ ಕಾಮರ್ಸ್ ಕಂಪೆನಿಗಳಿಗೆ ದೊಡ್ಡ ಮಟ್ಟದಲ್ಲಿ ವ್ಯವಹಾರಗಳು ಬರುತ್ತಿವೆ. ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದಕ್ಕೆ ಮಹತ್ತರವಾದ ಹೂಡಿಕೆ ಸಹ ಮಾಡುತ್ತಿವೆ. ದಸರಾ, ದೀಪಾವಳಿ ಸಂದರ್ಭದಲ್ಲಿ ಇ ಕಾಮರ್ಸ್ ಕಂಪೆನಿಗಳು ಹಲವು ಮಾರಾಟ ಮೇಳಗಳನ್ನು ಆಯೋಜಿಸುತ್ತಿವೆ.

English summary

Snapdeal Festival Sale Start From October 16

E commerce market place Snapdeal announced on Thursday that, it will start festival season sale from October 16.
Company Search
COVID-19