For Quick Alerts
ALLOW NOTIFICATIONS  
For Daily Alerts

ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕಿನ ಗ್ರಾಹಕರಿಗೆ ಸಿಹಿ ಸುದ್ದಿ !!

By ರಂಗಸ್ವಾಮಿ ಮೂಕನಹಳ್ಳಿ
|

ಕೋ ಆಪರೇಟಿವ್ ಸೊಸೈಟಿ , ಕೋ ಆಪರೇಟಿವ್ ಬ್ಯಾಂಕ್ ಗಳು ಮುಖ್ಯವಾಹಿನಿಯಲ್ಲಿ ಸಹಾಯ ಸಿಗದ ಬಹಳಷ್ಟು ಜನರಿಗೆ ಆಸರೆಯಾಗಿದ್ದವು . ಅವುಗಳ ಉಗಮದ ಹಿಂದಿನ ಆಶಯವೂ ಕೂಡ ಅದೇ ! . ಎಲ್ಲರಿಂದ ಎಲ್ಲರಿಗಾಗಿ ಎನ್ನುವ ತತ್ವ ಇವುಗಳದ್ದು . ಅರ್ಥ ಯಾವುದೇ ಇಂತಹ ಸಂಸ್ಥೆಯಲ್ಲಿ ಸದ್ಯಸರಾದರೆ ಮತ್ತು ಅಲ್ಲಿನ ಉದ್ದೇಶಕ್ಕೆ ಬದ್ದವಾಗಿದ್ದರೆ ಅಂತಹ ಎಲ್ಲಾ ಸದಸ್ಯರ ಒಳಿತಿಗಾಗಿ ಶ್ರಮಿಸುವುದು ಮತ್ತು ಮೂಲ ಉದ್ದೇಶ 'ಲಾಭ' ಕ್ಕಾಗಿ ಅಲ್ಲದೆ ಸಮುದಾಯದ ಒಳಿತಿಗಾಗಿ ದುಡಿಯುವುದು ಈ ಸಂಸ್ಥೆಗಳ ಪ್ರಮುಖ ಲಕ್ಷಣ .

 

ಬ್ಯಾಂಕ್ ಆಫ್ ಇಂಡಿಯಾ ಎಫ್‌ಡಿಯ ಮೇಲಿನ ಬಡ್ಡಿದರ ಪರಿಷ್ಕರಣೆ: ಪ್ರಸ್ತುತ ದರವೆಷ್ಟು?

ಇವತ್ತು ಆರ್ಥಿಕವಾಗಿ ಒಂದಷ್ಟು ಸವಾಲಿನ ದಿನಗಳನ್ನ ಭಾರತೀಯ ವಿತ್ತ ಜಗತ್ತು ಮತ್ತು ಜಗತ್ತಿನ ಇತರ ದೇಶಗಳು ಕೂಡ ಕಾಣುತ್ತಿವೆ . ಎಲ್ಲಕ್ಕೂ ಮುಖ್ಯವಾಗಿ ಹಣದ ಹರಿವು ಕಡಿಮೆಯಾಗಿದೆ . ಭಾರತದಲ್ಲಿ ಬಹುಮುಖ್ಯವಾಗಿ ಮುಖ್ಯವಾಹಿನಿ ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳು ತಮ್ಮ ಸೇವೆಯನ್ನ ಹಳ್ಳಿ ಪ್ರದೇಶಗಳಲ್ಲಿ ಒದಗಿಸಲು ವಿಫಲವಾಗಿದ್ದಾಗ ಇಂತಹ ಸೊಸೈಟಿಗಳು ವರದಾನದಂತೆ ಕಾರ್ಯ ನಿರ್ವಹಿಸಿವೆ. ಅವುಗಳು ಅದರಲ್ಲಿ ಬಹಳಷ್ಟು ಯಶಸ್ವೀ ಕೂಡ ಆಗಿದ್ದವು . ಇತ್ತೀಚಿಗೆ ಮಹಾರಾಷ್ಟ್ರ ಮೂಲದ ಪಿಎಂಸಿ (ಪಂಜಾಬ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ ) ಕುಸಿತ ಮತ್ತು ಕರ್ನಾಟಕದ ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ನ ಕುಸಿತ ಕೋ ಆಪರೇಟಿವ್ ಬ್ಯಾಂಕ್‌ಗಳ ಮೇಲಿನ ನಂಬಿಕೆಯನ್ನ ಕಡಿಮೆ ಮಾಡಿವೆ

ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್‌ ಗ್ರಾಹಕರಿಗೆ ಸಿಹಿ ಸುದ್ದಿ !

ಪಿಎಂಸಿ ಬ್ಯಾಂಕ್ 36 ವರ್ಷ ಹಳೆಯದು . 137 ಶಾಖೆಗಳನ್ನ ಹೊಂದಿದೆ . ಕರ್ನಾಟಕದಲ್ಲೂ ಈ ಬ್ಯಾಂಕಿನ 15 ಶಾಖೆಗಳಿವೆ . ಹೆಸರಿಗೆ ಇದು ಮಹಾರಾಷ್ಟ್ರ ಮತ್ತು ಪಂಜಾಬ್ ಕೋ ಆಪರೇಟಿವ್ ಬ್ಯಾಂಕ್ , ಆದರೆ ಇದು ಆರು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ . ಹಾಗೆಯೇ ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಕೂಡ 20 ವರ್ಷ ಹಳೆಯದು . 1566 ಕೋಟಿ ರೂಪಾಯಿ ಠೇವಣಿ ಹೊಂದಿದೆ . ಇದರ ಅರ್ಥ ಕುಸಿದಿರುವುವು ಅತಿ ಸಣ್ಣ ಅಥವಾ ನಿನ್ನೆ ಮೊನ್ನೆ ಸ್ವಹಿತಾಸಕ್ತಿಗೆ ಹುಟ್ಟುಹಾಕಿದ ಸಂಸ್ಥೆಗಳಲ್ಲ . ಅವು ಸೊಸೈಟಿಗಳ ಆಶಯಕ್ಕೆ ತಕ್ಕಂತೆ ಸೃಷ್ಟಿಯಾದ ಸಂಸ್ಥೆಗಳು . ಆದರೂ ಇಲ್ಲಿ ಕೂಡ ಅವ್ಯವಹಾರ ನಡೆದದ್ದು ಮತ್ತು ಗ್ರಾಹಕರ ಠೇವಣಿಯನ್ನ ಆರ್‌ಬಿಐ ತನ್ನ ನಿಗಾದಲ್ಲಿ ಇಟ್ಟು ಕೊಂಡದ್ದು ಮತ್ತು ಅದನ್ನ ಗ್ರಾಹಕ ಮರಳಿ ಪಡೆಯಲು ಸಾಧ್ಯವಾಗದೆ ಇದ್ದದ್ದು ತಿಳಿದ ವಿಷಯ, ಇದೀಗ ಇಂತಹ ಠೇವಣಿ ಇಟ್ಟಿದ್ದ ಗ್ರಾಹಕರಿಗೆ ಸಿಹಿ ಸುದ್ದಿ .

ಚಿನ್ನದ ಬೆಲೆ ಇಳಿಕೆ: ಸೆ. 13ರಂದು ಯಾವ ನಗರದಲ್ಲಿ ಎಷ್ಟಿದೆ ತಿಳಿದುಕೊಳ್ಳಿ..

ನವೆಂಬರ್ 2021 ರ ಅಂತ್ಯದ ವೇಳೆಗೆ ಗುರು ರಾಘವೇಂದ್ರ ಮತ್ತು ಪಿಎಂಸಿ ಬ್ಯಾಂಕಿನ ಒಟ್ಟು ಹತ್ತು ಸಾವಿರ ಕೋಟಿ ರೂಪಾಯಿ ಹಣವನ್ನ ಹಿಂತಿರುಗಿಸುವಂತೆ ಡೆಪಾಸಿಟ್ ಇನ್ಶೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಶನ್ ಆದೇಶವನ್ನ ನೀಡಿದೆ. ಈ ಆದೇಶದ ಮೇರೆಗೆ ಗ್ರಾಹಕರಿಗೆ ಹಣ ಮರಳಿಸಿಗುವುದು ಗ್ಯಾರಂಟಿಯಾಗಿದೆ. ಆದರೆ ಈ ಹತ್ತು ಸಾವಿರದಲ್ಲಿ ಯಾವ ಖಾತೆ ಅಥವಾ ಯಾವೆಲ್ಲ ಗ್ರಾಹಕರು ಸೇರಿರುತ್ತಾರೆ ಎನ್ನುವುದರ ಪಟ್ಟಿಯನ್ನ ತಯಾರು ಮಾಡುವುದು ಆಯಾ ಬ್ಯಾಂಕಿನ ಕೆಲಸವಾಗಿದೆ. ಪ್ರಥಮ ಐದು ಲಕ್ಷ ಹಣವಂತೂ ಗ್ಯಾರಂಟಿ ಇರುವುದರಿಂದ ಸಿಗುತ್ತದೆ. ಹೆಚ್ಚಿನ ಮೊತ್ತ ಇಟ್ಟವರು ಇನ್ನಷ್ಟು ಸಮಯ ಕಾಯಬೇಕಾಗಬಹುದು.

English summary

Sri Guru Raghavendra Co Operative Bank Scam: DICGC order to return Bank's Rs 10000 cr

Bengaluru: Sri Guru Raghavendra Co Operative Bank Scam: Deposit Insurance and Credit Guarantee Corporation (DICGC) order to return Bank's Rs 10000 cr money. Know more.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X