ಷೇರುಪೇಟೆ ತಲ್ಲಣ: ಹೂಡಿಕೆದಾರರಿಗೆ 6.71 ಲಕ್ಷ ಕೋಟಿಗಿಂತ ಅಧಿಕ ನಷ್ಟ
ಜಾಗತಿಕ ಮಾರುಕಟ್ಟೆ ಕುಸಿತದ ನಡುವೆ ದೇಶೀಯ ಮಾನದಂಡ ಸೂಚ್ಯಂಕಗಳು ಕುಸಿದಿದ್ದರಿಂದ ಈಕ್ವಿಟಿ ಹೂಡಿಕೆದಾರರು ಗುರುವಾರ 6.71 ಲಕ್ಷ ಕೋಟಿ ರೂಪಾಯಿಗಿಂತ ಅಧಿಕ ನಷ್ಟವನ್ನು ಕಂಡಿದ್ದಾರೆ. ಈ ನಡುವೆ ಎಲ್ಐಸಿ ಹೂಡಿಕೆದಾರರು ಕೂಡಾ ಭಾರೀ ನಷ್ಟವನ್ನು ಕಂಡಿದ್ದಾರೆ.
30-ಷೇರುಗಳ ಬಿಎಸ್ಇ ಬೆಂಚ್ಮಾರ್ಕ್ ಸೆನ್ಸೆಕ್ಸ್ 1,416.30 ಪಾಯಿಂಟ್ಗಳು ಅಥವಾ 2.61 ಶೇಕಡಾ ಕುಸಿದು 52,792.23 ಕ್ಕೆ ವಹಿವಾಟು ಅಂತ್ಯ ಮಾಡಿದೆ. ಬಿಎಸ್ಇ-ಲಿಸ್ಟೆಡ್ ಸಂಸ್ಥೆಗಳ ಮಾರುಕಟ್ಟೆ ಬಂಡವಾಳವು 6,71,051.73 ಕೋಟಿ ರೂಪಾಯಿಗಳಷ್ಟು ಕುಸಿತ ಕಂಡು 2,49,06,394.08 ಕೋಟಿ ರೂಪಾಯಿಗೆ ತಲುಪಿದೆ.
ಷೇರು ಪೇಟೆ ತತ್ತರ: ಆರಂಭಿಕ ವಹಿವಾಟಿನಲ್ಲಿ 1,100 ಕುಸಿದ ಸೆನ್ಸೆಕ್ಸ್
ಐಟಿಸಿ, ಡಾ ರೆಡ್ಡೀಸ್ ಮತ್ತು ಪವರ್ ಗ್ರಿಡ್ ಮಾತ್ರ ಲಾಭ ಗಳಿಸಿದವು. ಶಾಂಘೈ ಹೊರತುಪಡಿಸಿ, ಇತರ ಏಷ್ಯಾದ ಮಾರುಕಟ್ಟೆಗಳು ಕೆಳಮಟ್ಟಕ್ಕೆ ಕೊನೆಗೊಂಡಿದೆ. ಸಿಯೋಲ್, ಹಾಂಗ್ ಕಾಂಗ್ ಮತ್ತು ಟೋಕಿಯೊ ಶೇಕಡಾ 2.54 ರಷ್ಟು ನಷ್ಟವನ್ನು ಅನುಭವಿಸಿದೆ. ಬುಧವಾರದಂದು ಅಮೆರಿಕದ ಷೇರು ಮಾರುಕಟ್ಟೆಗಳು ತೀವ್ರವಾಗಿ ಕುಸಿದಿದ್ದವು.

ಎಲ್ಐಸಿ ಹೂಡಿಕೆದಾರರಿಗೆ ಭಾರೀ ನಷ್ಟ
ಸ್ಟಾಕ್ ಎಕ್ಸ್ಚೇಂಜ್ಗಳಲ್ಲಿ ಮೊದಲ ದಿನವೇ ಭಾರೀ ನಷ್ಟವನ್ನು ಕಂಡ ಬಳಿಕ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ (ಎಲ್ಐಸಿ) ಷೇರುಗಳು ಗುರುವಾರ ಸುಮಾರು 4 ಪ್ರತಿಶತದಷ್ಟು ಕುಸಿದವು. ಇದರಿಂದಾಗಿ ಹೂಡಿಕೆದಾರರಿಗೆ ನಷ್ಟವು ಅಧಿಕವಾಗಿದೆ.
ಮಂಗಳವಾರ ಷೇರು ಮಾರುಕಟ್ಟೆಗ ಪಾದಾರ್ಪಣೆ ಮಾಡಿದ ನಂತರ ಎಲ್ಐಸಿ ಷೇರುಗಳು ತಮ್ಮ ಹಂಚಿಕೆ ಬೆಲೆಯಿಂದ ಶೇಕಡಾ 7.75 ರಷ್ಟು ಕಳೆದುಕೊಂಡಿದೆ. ಯಶಸ್ವಿ ವಿತರಣೆಯ ನಂತರ ಎಲ್ಐಸಿ ತಲಾ 949 ರೂಪಾಯಿಯಂತೆ ಷೇರುಗಳನ್ನು ಹಂಚಿಕೆ ಮಾಡಿದೆ. ಸರ್ಕಾರವು ಈ ಮೂಲಕ 20,557 ಕೋಟಿ ರೂಪಾಯಿ ಗಳಿಸಿದೆ. ಆದರೆ ಷೇರು ಪೇಟೆಗೆ ಎಂಟ್ರಿ ನೀಡಿದ ಮೊದಲ ದಿನವೇ ನಷ್ಟವನ್ನು ಅನುಭವಿಸಿದೆ.