For Quick Alerts
ALLOW NOTIFICATIONS  
For Daily Alerts

ಷೇರು ಮಾರ್ಕೆಟ್ ಗಳಿಕೆ: ಸೆನ್ಸೆಕ್ಸ್ 879 ಪಾಯಿಂಟ್, ನಿಫ್ಟಿ 245 ಪಾಯಿಂಟ್ ಏರಿಕೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೋಮವಾರದಂದು ಭರ್ಜರಿ ಏರಿಕೆ ದಾಖಲಿಸಿದವು. ಸೆನ್ಸೆಕ್ಸ್ 879 ಪಾಯಿಂಟ್ ಗಳ ಏರಿಕೆ ದಾಖಲಿಸಿದರೆ, ನಿಫ್ಟಿ 245 ಪಾಯಿಂಟ್ ಏರಿತು. ನಿಫ್ಟಿಯಲ್ಲಿ ಬಜಾಜ್ ಫೈನಾನ್ಸ್ ಮತ್ತು ಬಜಾಜ್ ಫೈನಾನ್ಸ್ ಸರ್ವೀಸ್ ಟಾಪ್ ಗೇಯ್ನರ್ ಗಳಾದವು. ಇನ್ನು ಬ್ಯಾಂಕಿಂಗ್ ಷೇರುಗಳು ಕೂಡ ಗಳಿಕೆ ಕಂಡವು.

 

ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಗಳಿಕೆಯಲ್ಲಿ ಮುಂಚೂಣಿಯಲ್ಲಿ ಇದ್ದವು. ಇನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಕೂಡ ಭರ್ಜರಿ ಏರಿಕೆ ದಾಖಲಿಸಿದವು. ಕೊರೊನಾ ಲಾಕ್ ಡೌನ್ ವಿಸ್ತರಣೆ ಜೂನ್ 30ನೇ ತಾರೀಕಿನ ತನಕ ಮಾಡಿದರೂ ವಿನಾಯಿತಿಗಳನ್ನು ಗಮನದಲ್ಲಿ ಇಟ್ಟುಕೊಂಡರೆ, ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದಂತೆ ಇದೆ. ಈ ಅಂಶಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಿವೆ.

ಸೆನ್ಸೆಕ್ಸ್ 879 ಪಾಯಿಂಟ್, ನಿಫ್ಟಿ 245 ಪಾಯಿಂಟ್ ಏರಿಕೆ

ಇನ್ನು ಈ ಬಾರಿ ಉತ್ತಮ ಮುಂಗಾರು ಮಳೆ ಆಗಬಹುದು ಎಂದು ಐಎಂಡಿ ಹೇಳಿರುವುದರಿಂದ ಇದು ಕೂಡ ಮಾರ್ಕೆಟ್ ನಲ್ಲಿ ಹೂಡಿಕೆದಾರರಿಗೆ ಚೈತನ್ಯ ತಂದಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮಾರ್ಕೆಟ್ ನಲ್ಲಿ ಅಷ್ಟಾಗಿ ತಲೆ ಕೆಡಿಸಿಕೊಂಡಂತೆ ಇಲ್ಲ. ಅಮರ್ ರಾಜಾ ಬ್ಯಾಟರೀಸ್ ಲಾಭದ ಪ್ರಮಾಣದಲ್ಲಿ ಏರಿಕೆ ಆಗಿರುವುದರಿಂದ ಅದು ಕೂಡ ಅದ್ಭುತ ಏರಿಕೆ ದಾಖಲಿಸಿದೆ.

English summary

Stock Market Gain: Sensex Increase By 879, Nifty 245 Points

Stock market index Sensex, Nifty increase on June 1st. Lock down relaxation push positive sentiment of investors.
Story first published: Monday, June 1, 2020, 16:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X