For Quick Alerts
ALLOW NOTIFICATIONS  
For Daily Alerts

ರಾಷ್ಟ್ರವ್ಯಾಪಿ ಲಾಕ್‌ಡೌನ್ : ಸುಕೋ ಬ್ಯಾಂಕ್‌ನಿಂದ ಕಡಿಮೆ ಬಡ್ಡಿ ದರದಲ್ಲಿ ವಿಶೇಷ ಸಾಲ ಸೌಲಭ್ಯ

|

ಕೋವಿಡ್ - 19 (ಕೊರೋನಾ ವೈರಸ್)ನಿಂದ ಆರ್ಥಿಕ ವ್ಯವಸ್ಥೆಯೇ ತಲ್ಲಣಗೊಳ್ಳುತ್ತಿದು, ಸಂಕಷ್ಟಕ್ಕೀಡಾದ ವ್ಯಾಪಾರಿಗಳ ಚೇತರಿಕೆಗೆ ನೆರವಾಗಲು ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್ ಶೇ. 10.5 ರ ಬಡ್ಡಿದರದಲ್ಲಿ ಸಾಲ ವಿತರಣೆ ಮಾಡಲಿದೆ.

 

ಸುಕೋ ಬ್ಯಾಂಕ್‌ನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದು, ರಾಜ್ಯದ 12 ಜಿಲ್ಲೆಗಳಲ್ಲಿ ಇರುವ 28 ಶಾಖೆಗಳಲ್ಲಿ ಈ ವಿಶೇಷ ತುರ್ತು ಸಾಲದ ಸೌಲಭ್ಯವನ್ನು ಶೇ. 10.5ರ ಬಡ್ಡಿದರದಲ್ಲಿ, ಸಂಸ್ಕರಣ ಶುಲ್ಕ ರಹಿತವಾಗಿ ಸಾಲ ಬಿಡುಗಡೆ ಮಾಡಲಿದೆ.

ಸುಕೋ ಬ್ಯಾಂಕ್‌ನಿಂದ ಕಡಿಮೆ ಬಡ್ಡಿ ದರದಲ್ಲಿ ವಿಶೇಷ ಸಾಲ ಸೌಲಭ್ಯ

ಈ ಯೋಜನೆ ತಾತ್ಕಾಲಿಕವಾಗಿದ್ದು, ಒಂದು ವರ್ಷದ ಅವಧಿಯಲ್ಲಿ ಸುಲಭವಾದ ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡಲು ಅವಕಾಶವಿದೆ. ಆಸಕ್ತರು ಬ್ಯಾಂಕ್‌ನ ಯಾವುದೇ ಶಾಖೆಯ ಮೊಬೈಲ್‌ಗೆ ಕರೆ ಮಾಡುವ ಮೂಲಕ ಸಂಪರ್ಕ ಮಾಡಿದಲ್ಲಿ, ಆನ್‍ಲೈನ್‌ನಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡಿ, ತಕ್ಷಣವೇ ಸಾಲ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸಾಲದ ವಿವರಗಳಿಗಾಗಿ ಮೊಬೈಲ್ ಸಂಖ್ಯೆ: 8073492590ಗೆ ಸಂಪರ್ಕಿಸಿ.

ಸುಕೋ ಬ್ಯಾಂಕ್‌ನಿಂದ ಕಡಿಮೆ ಬಡ್ಡಿ ದರದಲ್ಲಿ ವಿಶೇಷ ಸಾಲ ಸೌಲಭ್ಯ

ಕ್ವಿಕ್ ರೆಸ್ಪಾನ್ಸ್ ಟೀಂ'

ಭಾರತೀಯ ರಿಸರ್ವ್ರ್ವ್‍ ಬ್ಯಾಂಕ್‌ನ ನಿರ್ದೇಶನದ ಮೇರೆಗೆ ಕ್ವಿಕ್ ರೆಸ್ಪಾನ್ಸ್ ಟೀಂ' ಅನ್ನು ಸುಕೋ ಬ್ಯಾಂಕ್ ರಚಿಸಿದ್ದು, ಸುಕೋ ಬ್ಯಾಂಕ್‌ನ ಗ್ರಾಹಕರ ವೈದ್ಯಕೀಯ ತುರ್ತು ಅಗತ್ಯಗಳಿಗಾಗಿ ಎಟಿಎಂ/ಮೊಬೈಲ್ ಬ್ಯಾಂಕಿಂಗ್ ಸೇವೆಯಲ್ಲಿ ಸಕಾಲದಲ್ಲಿ ಹಣ ಸಿಗದೇ ಇದ್ದಲ್ಲಿ, ಅವರ ಮನೆ ಬಾಗಿಲಲ್ಲೇ 10,000 ರುಪಾಯಿವರೆಗೆ ನಗದು ಹಣವನ್ನು ಅವರ ಖಾತೆಯಿಂದ ನೀಡಲಾಗುತ್ತದೆ.

ಈ ಸೇವೆಯು ಬ್ಯಾಂಕ್‌ನ ವ್ಯವಹಾರದ ಅವಧಿಯ ಹೊರತಾಗಿ ನಿರ್ವಹಿಸಲ್ಪಡುತ್ತದೆ. ಆಸಕ್ತ ಗ್ರಾಹಕರು: 9916009426, 9886091274 ಮತ್ತು 9071259468 ಗೆ ಸಂಪರ್ಕಿಸಿ.

English summary

Suco Bank Will Give Loan In Low Interest Rate

Suco Bank says it gives loan in low interest rate for Customers, Just in A Call
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X