For Quick Alerts
ALLOW NOTIFICATIONS  
For Daily Alerts

ಮಾರುತಿ ಸುಜುಕಿ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಕಾರು ಬಿಡುಗಡೆ

By ಅನಿಲ್ ಆಚಾರ್
|

ಸ್ವಿಫ್ಟ್ ವಿಶೇಷ ಎಡಿಷನ್ ಬಿಡುಗಡೆ ಮಾಡಿರುವುದಾಗಿ ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪೆನಿಯು ಮಾರುತಿ ಸುಜುಕಿ ಇಂಡಿಯಾ (MSI) ಸೋಮವಾರದಂದು ಹೇಳಿದೆ. ಸ್ವಿಫ್ಟ್ ಕಾರಿನ ಇತರ ಅವತರಣಿಕೆಗಳಿಗಿಂತ 24,999 ರುಪಾಯಿ ಬೆಲೆ ಹೆಚ್ಚಾಗಲಿದೆ. 5.19 ಲಕ್ಷದಿಂದ 8.02 ಲಕ್ಷದ (ದೆಹಲ್ ಎಕ್ಸ್ ಶೋ ರೂಂ ಬೆಲೆ) ಮಧ್ಯೆ ದರ ಇರಲಿದೆ.

ಕಾರು ಸಾಲದ ಮೇಲಿನ ಬಡ್ಡಿ ದರ ಯಾವ ಬ್ಯಾಂಕ್ ನಲ್ಲಿ ಎಷ್ಟು?

ಸ್ವಿಫ್ಟ್ ಸ್ಪೆಷಲ್ ಎಡಿಷನ್ ನಲ್ಲಿ ಕಪ್ಪು ಥೀಮ್ ಇರಲಿದೆ. ಗ್ಲಾಸಿ ಕಪ್ಪು ಬಾಡಿ ಕಿಟ್, ಸ್ಪಾಯಿಲರ್, ಬಾಡಿ ಸೈಡ್ ಮೌಲ್ಡಿಂಗ್, ಡೋರ್ ವಿಸರ್, ಫಾಗ್ ಲ್ಯಾಂಪ್ ಮತ್ತಿತರ ಫೀಚರ್ ಗಳನ್ನು ಈ ಸ್ಪೆಷಲ್ ಎಡಿಷನ್ ಹೊಂದಿರಲಿದೆ. ಸ್ವಿಫ್ಟ್ ಕಾರಿನ ಮಾಡೆಲ್ ನಿರಂತರವಾಗಿ ಬದಲಾವಣೆಗಳನ್ನು ಮಾಡಿಕೊಂಡು ಬರುತ್ತಿದೆ. ಭಾರತದ ಗ್ರಾಹಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಈ ಬದಲಾವಣೆ ಮಾಡಿಕೊಂಡು ಬರಲಾಗುತ್ತಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಕಾರು ಬಿಡುಗಡೆ

 

24,990 ರುಪಾಯಿ ಹೆಚ್ಚು ಬೆಲೆಗೆ ಸ್ವಿಫ್ಟ್ ವಿಶೇಷ ಎಡಿಷನ್ ಕಾರು ಕಂಪೆನಿಯ ಎಲ್ಲ ಡೀಲರ್ ಶಿಪ್ ಗಳಲ್ಲಿಯೂ ದೊರೆಯಲಿದೆ. ಅಂದ ಹಾಗೆ ಸ್ವಿಫ್ಟ್ ಕಾರು ಬಿಡುಗಡೆ ಮಾಡಿದಾಗಿನಿಂದ ಇಲ್ಲಿಯ ತನಕ 23 ಲಕ್ಷಕ್ಕೂ ಹೆಚ್ಚು ಯೂನಿಟ್ ಗಳನ್ನು ಮಾರುತಿ ಸುಜುಕಿ ಇಂಡಿಯಾದಿಂದ ಮಾರಾಟ ಮಾಡಲಾಗಿದೆ.

English summary

Swift Special Edition Car Launched By Maruti Suzuki India

Maruti Suzuki India (MSI) launched Swift special edition car with additional price of 24,990 rupees.
Company Search
COVID-19