For Quick Alerts
ALLOW NOTIFICATIONS  
For Daily Alerts

ಟಾಟಾ ಡಿಜಿಟಲ್ ನಿಂದ ಕೇಂದ್ರದ ಗ್ರಾಮೀಣ್ ಇ- ಸ್ಟೋರ್ ನಲ್ಲಿ 10 ಕೋಟಿ ರು. ಹೂಡಿಕೆ

|

ಟಾಟಾ ಡಿಜಿಟಲ್ ನಿಂದ ಕೇಂದ್ರ ಸರ್ಕಾರದ ಇ- ಕಾಮರ್ಸ್ ಉದ್ಯಮವಾದ ಗ್ರಾಮೀಣ್ ಇ- ಸ್ಟೋರ್ ನಲ್ಲಿ 10 ಕೋಟಿ ರುಪಾಯಿ ಹೂಡಿಕೆ ಮಾಡಿದೆ. ಎಷ್ಟು ಪ್ರಮಾಣದ ಷೇರು ಖರೀದಿ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿಯನ್ನು ಬಹಿರಂಗ ಮಾಡಿಲ್ಲ. ಸಿಎಸ್ ಸಿ ಗ್ರಾಮೀಣ್ ಇ- ಸ್ಟೋರ್ಸ್ ಪ್ರೈವೇಟ್ ಲಿಮಿಟೆಡ್ ಮಂಡಳಿಯಲ್ಲಿ ಟಾಟಾ ಡಿಜಿಟಲ್ ಗೆ ಸ್ಥಾನ ಸಿಗಲಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಸಿಎಸ್ ಸಿ ಗ್ರಾಮೀಣ್ ಇ-ಸ್ಟೋರ್ ನಿಂದ ಎಚ್ ಡಿಎಫ್ ಸಿ ಬ್ಯಾಂಕ್ ಜತೆಗೂ ಷೇರು ಮಾರಾಟಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿದೆ ಎಂದು ವರದಿ ಆಗಿದೆ. ಅಂದಹಾಗೆ ಟಾಟಾದ ಇ ಕಾಮರ್ಸ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಸೂಪರ್ ಅಪ್ಲಿಕೇಷನ್ ರೂಪಿಸಲಾಗುತ್ತಿದೆ ಎಂಬ ಸುದ್ದಿ ಮಧ್ಯೆಯೇ ಈ ಹೂಡಿಕೆ ಮಾಹಿತಿ ಹೊರಬಿದ್ದಿದೆ.

 

8 ಲಕ್ಷ ಕೋಟಿ ಮೌಲ್ಯದ ಟಾಟಾ ಸಮೂಹದಿಂದ ಆಲ್-ಇನ್-ಒನ್ ಆಪ್ ಅಭಿವೃದ್ಧಿ

ಬಿಗ್ ಬ್ಯಾಸ್ಕೆಟ್ ಆನ್ ಲೈನ್ ದಿನಸಿ ಮಾರಾಟ ಪ್ಲಾಟ್ ಫಾರ್ಮ್ ನಲ್ಲೂ ಪ್ರಮುಖ ಷೇರು ಖರೀದಿಗೆ ಟಾಟಾ ಕಣ್ಣಿಟ್ಟಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಸಿಎಸ್ ಸಿ ಗ್ರಾಮೀಣ್ ಇ-ಸ್ಟೋರ್ ಎಂಬುದು ಹೈಪರ್ ಲೋಕಲ್ ಆನ್ ಲೈನ್ ಮಾರ್ಕೆಟ್ ಪ್ಲೇಸ್. ಪೆಪ್ಸಿಕೋ ಹಾಗೂ ಕೋಕಾ- ಕೋಲಾದ ಉತ್ಪನ್ನಗಳು ಇದರ ಮೂಲಕ ದೊರೆಯುತ್ತದೆ. ಲೇಸ್, ಕುರ್ ಕುರೆ, ಅಂಕಲ್ ಚಿಪ್ಸ್ ಮೊದಲಾದವು ಸಿಗುತ್ತವೆ.

ಗ್ರಾಮೀಣ್ ಇ- ಸ್ಟೋರ್ ನಲ್ಲಿ ಟಾಟಾ ಡಿಜಿಟಲ್  10 ಕೋಟಿ ಹೂಡಿಕೆ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಈ ಕಾಮನ್ ಸರ್ವೀಸ್ ಸೆಂಟರ್ (ಸಿಎಸ್ ಸಿ) ಬರಲಿದ್ದು, ಅದು ಈ ಆನ್ ಲೈನ್ ಪ್ಲಾಟ್ ಫಾರ್ಮ್ ನಡೆಸುತ್ತದೆ. ಗ್ರಾಮೀಣ್ ಇ-ಸ್ಟೋರ್ ಮತ್ತು ಎಚ್ ಡಿಎಫ್ ಸಿ ಮಧ್ಯೆ ಷೇರು ಮಾರಾಟಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.

ಎಚ್ ಡಿಎಫ್ ಸಿ ಬ್ಯಾಂಕ್ ಆಗಿರುವುದರಿಂದ ಹಲವಾರು ನಿಯಂತ್ರಕ ಸಂಸ್ಥೆಗಳ ಅನುಮತಿಯನ್ನು ಪಡೆಯಬೇಕಾಗುತ್ತದೆ ಎಂದು ವರದಿ ತಿಳಿಸಿದೆ. ಇನ್ನು ವರದಿಗಳ ಪ್ರಕಾರ, ಗ್ರಾಮೀಣ್ ಇ-ಸ್ಟೋರ್ 2020ರ ಏಪ್ರಿಲ್ ನಲ್ಲಿ ಆರಂಭವಾಗಿದ್ದು, ಈ ತನಕ 120 ಕೋಟಿ ರುಪಾಯಿ ವಹಿವಾಟು ನಡೆಸಿದೆ.

English summary

Tata Digital Invests Rs 10 Crore In Centre's Grameen E- Store

Tata digital has invested Rs 10 crore in central government e commerce market place Grameen e- store.
Company Search
COVID-19