For Quick Alerts
ALLOW NOTIFICATIONS  
For Daily Alerts

ಬಿಗ್‌ಬಾಸ್ಕೆಟ್‌ ಸ್ವಾಧೀನಪಡಿಸಿಕೊಳ್ಳಲು ಟಾಟಾ ಡಿಜಿಟಲ್‌ಗೆ ಸಿಸಿಐ ಅನುಮೋದನೆ

|

ಆನ್‌ಲೈನ್ ಪ್ಲಾಟ್‌ಫಾರ್ಮ್ ಬಿಗ್‌ಬಾಸ್ಕೆಟ್‌ ಅನ್ನು ಸ್ವಾಧೀನಪಡಿಸಿಕೊಳ್ಳಲು ಟಾಟಾ ಡಿಜಿಟಲ್‌ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಅನುಮೋದನೆ ನೀಡಿದೆ. ಈ ಮೂಲಕ ಬಿಗ್‌ಬಾಸ್ಕೆಟ್‌ನಲ್ಲಿ ಟಾಟಾ ಡಿಜಿಟಲ್ ಲಿಮಿಟೆಡ್ ಶೇಕಡಾ 64.3ರಷ್ಟು ಪಾಲನ್ನು ಪಡೆದುಕೊಳ್ಳಲಿದೆ.

 

ಬಹುತೇಕ ಎಲ್ಲಾ ವಲಯಗಳ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಟಾಟಾ ಗ್ರೂಪ್, ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಇ-ಕಾಮರ್ಸ್ ಬಿಗ್‌ಬಾಸ್ಕೆಟ್‌ನಲ್ಲಿ ಗರಿಷ್ಠ ಪಾಲುದಾರಿಕೆ ಪಡೆದಿದೆ. ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ ಬಿಗ್‌ಬಾಸ್ಕೆಟ್‌ನೊಂದಿಗೆ ಈ ಒಪ್ಪಂದಕ್ಕೆ ಮಾಡಿಕೊಳ್ಳಲಾಗಿದ್ದು, ಸುಮಾರು 1.2 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ.

ಬಿಗ್‌ಬಾಸ್ಕೆಟ್‌ ಸ್ವಾಧೀನಪಡಿಸಿಕೊಳ್ಳಲು ಟಾಟಾಗೆ ಸಿಸಿಐ ಅನುಮೋದನೆ

ಆನ್‌ಲೈನ್ ದಿನಸಿ ವಸ್ತುಗಳ ಪೂರೈಸುವ ಬಿಗ್‌ಬಾಸ್ಕೆಟ್‌ ಸುಮಾರು 13,500 ಕೋಟಿ ರೂ. (ಸುಮಾರು 1.85 ಬಿಲಿಯನ್ ಡಾಲರ್) ಮೌಲ್ಯವಿದೆ. ಹರಿ ಮೆನನ್ ನೇತೃತ್ವದ ಬೆಂಗಳೂರು ಕಂಪನಿಯು ಯುನಿಕಾರ್ನ್ ಕ್ಲಬ್‌ಗೆ ಪ್ರವೇಶಿಸಿದ ಸುಮಾರು 20 ತಿಂಗಳ ನಂತರ ಈ ಒಪ್ಪಂದಕ್ಕೆ ಬರಲಾಗಿದೆ.

ಜೊಮ್ಯಾಟೊ ಐಪಿಒ: 8,250 ಕೋಟಿ ರೂಪಾಯಿ ಸಂಗ್ರಹದ ಗುರಿ

ಟಾಟಾ ಗ್ರೂಪ್ ಹಾಗೂ ಬಿಗ್‌ ಬಾಸ್ಕೆಟ್‌ ನಡುವಿನ ಈ ಒಪ್ಪಂದದಿಂದಾಗಿ ಜಾಕ್‌ ಮಾ ನಿಯಂತ್ರಿತ ಅಲಿಬಾಬಾ ಮತ್ತು ಅಬ್ರಾಜ್‌ ಗ್ರೂಪ್ ಬಿಗ್‌ ಬಾಸ್ಕೆಟ್‌ನಿಂದ ಹೂಡಿಕೆಯನ್ನು ಹಿಂಪಡೆಯಬೇಕಿದೆ.

ಇನ್ನು ಈ ವಹಿವಾಟಿನ ಎರಡೂ ಕಂಪನಿಗಳು ಪ್ರತಿಕ್ರಿಯಿಸಲು ನಿರಾಕರಿಸಿದವು. ಬಿಗ್‌ಬಾಸ್ಕೆಟ್ ಪ್ರತ್ಯೇಕ ಘಟಕವಾಗಿ ಮುಂದುವರಿಯಲಿದೆ ಮತ್ತು ಸಹ-ಸಂಸ್ಥಾಪಕ ಮತ್ತು ಸಿಇಒ ಹರಿ ಮೆನನ್ ನೇತೃತ್ವದಲ್ಲಿಯೇ ಅದರ ಪ್ರಸ್ತುತ ನಿರ್ವಹಣೆ ಮುಂದುವರಿಯಲಿದೆ ಎಂದು ಮೂಲಗಳು ಮನಿಕಂಟ್ರೋಲ್‌ಗೆ ತಿಳಿಸಿವೆ.

English summary

Tata Gets CCI Nod To Acquire BigBasket

The Competition Commission of India (CCI) has cleared the acquisition of online grocery firm BigBasket by Tata Digital, a subsidiary of the Tata Group.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X