For Quick Alerts
ALLOW NOTIFICATIONS  
For Daily Alerts

ಟಾಟಾ ಮೋಟಾರ್ಸ್‌ CEO ಮತ್ತು MD ಆಗಿ ಮಾರ್ಕ್ ಲಿಸ್ಟೊಸೆಲ್ಲಾ ಆಯ್ಕೆ

|

ದೇಶದ ಬಹುದೊಡ್ಡ ವಾಹನ ಉತ್ಪಾದಕ ಸಂಸ್ಥೆಗಳಲ್ಲಿ ಒಂದಾದ ಟಾಟಾ ಮೋಟಾರ್ಸ್ ಹೊಸ ಸಿಇಒ ಮತ್ತು ಎಂಡಿಯನ್ನು ಆಯ್ಕೆ ಮಾಡಿದೆ. ಆಟೊಮೊಬೈಲ್ ವಲಯದಲ್ಲಿ ಅತ್ಯಂತ ಅನುಭವ ವ್ಯಕ್ತಿಯಾಗಿರುವ ಮಾರ್ಕ್ ಲಿಸ್ಟೊಸೆಲ್ಲಾ ಜುಲೈ 1, 2021 ರಿಂದ ಜಾರಿಗೆ ಬರುವಂತೆ ಸಿಇಒ ಮತ್ತು ಎಂಡಿ ಆಗಿ ಅಧಿಕಾರ ವಹಿಸಲಿದ್ದಾರೆ ಎಂದು ಶುಕ್ರವಾರ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

''ಟಾಟಾ ಮೋಟಾರ್ಸ್‌ಗೆ ಮಾರ್ಕ್‌ನನ್ನು ಸ್ವಾಗತಿಸಲು ನನಗೆ ಸಂತೋಷವಾಗಿದೆ'' ಎಂದು ಟಾಟಾ ಮೋಟಾರ್ಸ್ ಲಿಮಿಟೆಡ್‌ನ ಅಧ್ಯಕ್ಷ ಎನ್ ಚಂದ್ರಶೇಖರನ್ ಹೇಳಿದ್ದಾರೆ.

ಟಾಟಾ ಮೋಟಾರ್ಸ್‌ CEO ಮತ್ತು MD ಆಗಿ ಮಾರ್ಕ್ ಲಿಸ್ಟೊಸೆಲ್ಲಾ ಆಯ್ಕೆ

 

"ಮಾರ್ಕ್ ಒಬ್ಬ ಅನುಭವಿ ಆಟೋಮೋಟಿವ್ ಉದ್ಯಮಿಯಾಗಿದ್ದು, ಅವರ ವೃತ್ತಿಜೀವನದಲ್ಲಿ ವಾಣಿಜ್ಯ ವಾಹನಗಳಲ್ಲಿ ಆಳವಾದ ಜ್ಞಾನ ಮತ್ತು ಪರಿಣಿತಿಯನ್ನು ಹೊಂದಿದ್ದಾರೆ ಮತ್ತು ಭಾರತದಲ್ಲಿ ವ್ಯಾಪಕ ಕಾರ್ಯಾಚರಣೆಯ ಅನುಭವವನ್ನು ಹೊಂದಿದ್ದಾರೆ" ಎಂದು ಚಂದ್ರಶೇಖರನ್ ಹೇಳಿದರು.

ಮಾರ್ಕ್ ಲಿಸೊಟ್ಸೆಲ್ಲಾ ಒಬ್ಬ ಅನುಭವಿ ಆಟೋಮೋಟಿವ್ ಎಕ್ಸಿಕ್ಯೂಟಿವ್ ಆಗಿದ್ದು, ಗ್ರೀನ್‌ಫೀಲ್ಡ್ ಯೋಜನೆಗಳು, ವಹಿವಾಟು ನಿರ್ವಹಣೆ ಮತ್ತು ಪ್ರಮುಖ ಸಂಸ್ಥೆಗಳಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸುದೀರ್ಘ ದಾಖಲೆಯನ್ನು ಹೊಂದಿದ್ದಾರೆ.

ಮಾರ್ಕ್ ಲಿಸ್ಟೊಸೆಲ್ಲಾ ಇತ್ತೀಚೆಗೆ ಫುಸೊ ಟ್ರಕ್ ಮತ್ತು ಬಸ್ ಕಾರ್ಪೊರೇಶನ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು, ಅಲ್ಲಿ ಅವರು ವ್ಯವಹಾರದ ಲಾಭದಾಯಕತೆ ಮತ್ತು ಮಾರಾಟ ಸಾಮರ್ಥ್ಯವನ್ನು ಸುಧಾರಿಸುವಲ್ಲಿ ಕೆಲಸ ಮಾಡಿದರು.

English summary

Tata Motors Appoints Marc Llistosella As New CEO & MD

Tata motors Limited said on Friday that it has appointed Marc Llistosella as chief executive officer and managing director effective 1 July 2021
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X