For Quick Alerts
ALLOW NOTIFICATIONS  
For Daily Alerts

ಸ್ವಯಂ ಉದ್ಯೋಗಿಗಳಿಗೆ ಕಾರು ಖರೀದಿ ತುಂಬಾ ಸುಲಭ: ಟಾಟಾ ಮೋಟಾರ್ಸ್ ಆಫರ್

|

ಯಾವುದೇ ಕಂಪನಿಯ ಉದ್ಯೋಗಿಗಳಾಗಿಲ್ಲದೆ ಸ್ವಯಂ ಉದ್ಯೋಗಿಗಳಿಗೆ ಕಾರು ಖರೀದಿಸಲು ಹೊಸ ಹಣಕಾಸು ಯೋಜನೆಯನ್ನ ನೀಡಲು ಟಾಟಾ ಮೋಟಾರ್ಸ್ ಕೋಟಕ್ ಮಹೀಂದ್ರಾ ಪ್ರೈಮ್ ಜೊತೆಗೆ ಕೈಜೋಡಿಸಿದೆ.

 

ಈ ಸಹಭಾಗಿತ್ವದಲ್ಲಿ, ನಗರ ಮತ್ತು ಗ್ರಾಮೀಣ ಗ್ರಾಹಕರಿಗೆ ರೆಡ್ ಕಾರ್ಪೆಟ್, ಪ್ರೈಮ್ ವಿಶ್ವಾಸ್ ಪ್ರಾಡಕ್ಟ್‌ ಮತ್ತು ಸಾಲ ಇಎಂಐ ಸೇರಿದಂತೆ ಮೂರು ಹಣಕಾಸು ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಗಳು ಆದಾಯ ಪುರಾವೆ ಇಲ್ಲದ ಸ್ವಯಂ ಉದ್ಯೋಗಿಗಳಿಗೆ ನೆರವಾಗುತ್ತದೆ. ಈ ಮೂರು ಯೋಜನೆಗಳ ಕುರಿತು ಮಾಹಿತಿ ತಿಳಿಯಿರಿ.

ರೆಡ್ ಕಾರ್ಪೆಟ್ ಪ್ರಾಡಕ್ಟ್‌

ರೆಡ್ ಕಾರ್ಪೆಟ್ ಪ್ರಾಡಕ್ಟ್‌

ಆದಾಯ ಪುರಾವೆ ಹೊಂದಿರುವ ಗ್ರಾಹಕರಿಗೆ ರೆಡ್ ಕಾರ್ಪೆಟ್ ಪ್ರಾಡಕ್ಟ್‌ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯಡಿ, ಅಂತಹ ಗ್ರಾಹಕರಿಗೆ 90 ಪ್ರತಿಶತದಷ್ಟು ಆನ್-ರೋಡ್ ಹಣವನ್ನು ಒದಗಿಸಲಾಗುವುದು. ಈ ಯೋಜನೆಯಡಿ ಗ್ರಾಹಕರಿಗೆ 11 ಲಕ್ಷ ರೂ.ವರೆಗಿನ ಸಾಲಗಳನ್ನ ನೀಡಲಾಗುವುದು. ರೆಡ್ ಕಾರ್ಪೆಟ್ ಉತ್ಪನ್ನ ಯೋಜನೆಯಡಿ ಸಾಲದ ಅವಧಿ ಏಳು ವರ್ಷಗಳವರೆಗೆ ಇರಬಹುದು. ಪೂರ್ವ ಮತ್ತು ಭಾಗಶಃ ಪಾವತಿಗೆ ಈ ಯೋಜನೆ ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತದೆ.

ಆದಾಯ ಪುರಾವೆ ಹೊಂದಿಲ್ಲದವರಿಗೆ ಯೋಜನೆ

ಆದಾಯ ಪುರಾವೆ ಹೊಂದಿಲ್ಲದವರಿಗೆ ಯೋಜನೆ

ಆದಾಯ ಪುರಾವೆ ಇಲ್ಲದ ಗ್ರಾಹಕರು ಪ್ರೈಮ್ ವಿಶ್ವಾಸ್ ಪ್ರಾಡಕ್ಟ್‌ ಯೋಜನೆಯನ್ನು ಆರಿಸಿಕೊಳ್ಳಬಹುದು. ಈ ಯೋಜನೆಯಡಿ, ಗ್ರಾಹಕರಿಗೆ ವಾಹನದ ಎಕ್ಸ್ ಶೋರೂಂ ಬೆಲೆಯ 90 ಪ್ರತಿಶತದವರೆಗೆ ಹಣವನ್ನು ನೀಡಲಾಗುವುದು. ಸಾಲದ ಮೌಲ್ಯಮಾಪನ ಮಾನದಂಡಗಳು ಕೃಷಿ ಭೂಮಿ ಅಥವಾ ಆಸ್ತಿ ಮಾಲೀಕತ್ವದ ಮಾನದಂಡಗಳನ್ನು ಆಧರಿಸಿವೆ. ಈ ಯೋಜನೆಯಲ್ಲಿ ಸಾಲವನ್ನು ಐದು ವರ್ಷಗಳವರೆಗೆ ತೆಗೆದುಕೊಳ್ಳಬಹುದು.

ಕಡಿಮೆ ಇಎಂಐ ಯೋಜನೆ
 

ಕಡಿಮೆ ಇಎಂಐ ಯೋಜನೆ

ಮೂರನೆಯ ಹಣಕಾಸು ಯೋಜನೆ ಮುಖ್ಯವಾಗಿ ಸ್ವಯಂ ಉದ್ಯೋಗಿ ಮತ್ತು ಸಂಬಳ ಪಡೆಯುವ ಗ್ರಾಹಕರಿಗೆ ಕಡಿಮೆ ಇಎಂಐ ಯೋಜನೆಯಾಗಿದೆ. ವಾಹನ ಖರೀದಿದಾರರಿಗೆ ಮೊದಲ ಮೂರು ತಿಂಗಳವರೆಗೆ ಶೇಕಡಾ 50 ರಷ್ಟು ಕಡಿಮೆ ಇಎಂಐ ಲಾಭ ಸಿಗುತ್ತದೆ. ಆರಂಭಿಕ ಮೂರು ತಿಂಗಳವರೆಗೆ ಪ್ರತಿ ಲಕ್ಷಕ್ಕೆ 999 ರೂ.ಗಳಿಂದ ಪ್ರಾರಂಭವಾಗುವ ಇಎಂಐಗಳೊಂದಿಗೆ ಆನ್-ರೋಡ್ ಬೆಲೆಯ ಶೇಕಡಾ 80 ರಷ್ಟು ಹಣವನ್ನು ಅವರಿಗೆ ವ್ಯವಸ್ಥೆ ಮಾಡಬಹುದು.

ಯೋಜನೆಯ ಲಾಭ ಹೇಗೆ ?

ಯೋಜನೆಯ ಲಾಭ ಹೇಗೆ ?

ಟಾಟಾ ಮೋಟಾರ್ಸ್‌ನ ಈ ವಿವಿಧ ಹಣಕಾಸು ಯೋಜನೆಗಳನ್ನು ಪಡೆಯಲು, ಗ್ರಾಹಕರು ತಮ್ಮ ಹತ್ತಿರದ ಟಾಟಾ ಮೋಟಾರ್ಸ್ ಶೋರೂಂ ಅಥವಾ ಕೊಟಕ್ ಮಹೀಂದ್ರಾ ಪ್ರೈಮ್ ಶಾಖೆಯ ಮೂಲಕ ಸಂಪರ್ಕಿಸಬಹುದು ಅಥವಾ ಟಾಟಾ ಕಾರು ಖರೀದಿಸುವ ಆಸಕ್ತಿಯನ್ನು ನೋಂದಾಯಿಸಲು ತಮ್ಮ ವೆಬ್‌ಸೈಟ್ primeloans.kotak.com ಗೆ ಭೇಟಿ ನೀಡಬಹುದು.

ಇನ್ನಷ್ಟು ತಿಳಿದುಕೊಳ್ಳಲು ಗ್ರಾಹಕರು car.tatamotors.com/ ಗೆ ಭೇಟಿ ನೀಡಬಹುದು. 'ಕ್ಲಿಕ್ ಟು ಡ್ರೈವ್' ಮೂಲಕ ನಿಮ್ಮ ಮನೆಯ ಬಳಿ ಟೆಸ್ಟ್ ಡ್ರೈವ್‌ಗಳಿಗಾಗಿ ವಿನಂತಿಸಬಹುದು, ಬುಕ್ ಮಾಡಬಹುದು ಮತ್ತು ನಿಮ್ಮ ಆದ್ಯತೆಯ ಹಣಕಾಸು ಯೋಜನೆಯನ್ನು ಆಯ್ಕೆ ಮಾಡಬಹುದು, ಟಾಟಾ ಮೋಟಾರ್ಸ್‌ನ ಎಂಡ್-ಟು-ಎಂಡ್ ಆನ್‌ಲೈನ್ ಪ್ಲಾಟ್‌ಫಾರ್ಮ್ ಆಯ್ಕೆ ಮಾಡಬಹುದು.

Read more about: tata motors car ಕಾರು
English summary

Tata Motors Collaborate With Kotak Mahindra Bank: Finance Schemes For Customers

Tata Motors has joined hands with Kotak Mahindra Prime to introduce finance schemes for prospective buyers. The partnership has rolled out three finance programs namely Red Carpet, Prime Vishwas Product, and Low EMI for urban and rural customer
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X