For Quick Alerts
ALLOW NOTIFICATIONS  
For Daily Alerts

ಕೊರೊನಾ ಎಫೆಕ್ಟ್‌: ಟಾಟಾ ಕಾರುಗಳ ವಾರೆಂಟಿ, ಫ್ರೀ ಸರ್ವೀಸ್ ಅವಧಿ ವಿಸ್ತರಣೆ

|

ದೇಶಾದ್ಯಂತ ಕೊರೊನಾವೈರಸ್ ಎರಡನೇ ಅಲೆಯಿಂದಾಗಿ ದೇಶದ ಅನೇಕ ಸ್ಥಳಗಳಲ್ಲಿ ಲಾಕ್‌ಡೌನ್‌ ವಿಧಿಸಲಾಗಿದೆ. ಈ ಕಾರಣದಿಂದಾಗಿ ಅನೇಕ ವಾಹನ ಕಂಪನಿಗಳು ಈಗಾಗಲೇ ತಮ್ಮ ಉತ್ಪಾದನಾ ಕೇಂದ್ರವನ್ನು, ಮಾರಾಟ ಮಳಿಗೆಗಳನ್ನು ಮುಚ್ಚಿವೆ.

 

ಹೀಗಿರುವಾಗ ಟಾಟಾ ಮೋಟಾರ್ಸ್ ಕಾರುಗಳ ಮೇಲಿನ ವಾರೆಂಟಿ ಮತ್ತು ಉಚಿತ ಸೇವಾ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲು ನಿರ್ಧರಿಸಿದೆ. ಇದು ಏಪ್ರಿಲ್ 1 ಮತ್ತು ಮೇ 31ರ ನಡುವೆ ಅವಧಿಯ ಮುಕ್ತಾಯವಾಗುವ ಕಾರುಗಳಿಗೆ ಸಿಕ್ಕ ಅವಕಾಶವಾಗಿದೆ.

ಟಾಟಾ ಕಾರುಗಳ ವಾರೆಂಟಿ, ಫ್ರೀ ಸರ್ವೀಸ್ ಅವಧಿ ವಿಸ್ತರಣೆ

ಪ್ರಸ್ತುತ ಲಾಕ್‌ಡೌನ್ ಆಗಿರುವುದರಿಂದ, ಅನೇಕ ಗ್ರಾಹಕರಿಗೆ ನಿಗದಿತ ಸಮಯದಲ್ಲಿ ವಾಹನವನ್ನು ಸರ್ವೀಸ್ ಮಾಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಟಾಟಾ ಮೋಟಾರ್ಸ್ ವಾರೆಂಟಿ ಮತ್ತು ಉಚಿತ ಸೇವಾ ಅವಧಿಯನ್ನು ವಿಸ್ತರಿಸಲು ನಿರ್ಧರಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕಂಪನಿಯ ಅಧಿಕಾರಿ ಡಿಂಪಲ್ ಮೆಹ್ತಾ, "ಕೋವಿಡ್ 19 ರ ಕಾರಣದಿಂದಾಗಿ ವಾಹನಗಳ ಸೇವೆಯನ್ನು ನಿಲ್ಲಿಸಲಾಗಿದೆ ಮತ್ತು ದೇಶಾದ್ಯಂತದ ಗ್ರಾಹಕರು ತಮ್ಮ ವಾಹನಗಳನ್ನು ನಿರ್ವಹಣೆಗಾಗಿ ಅಧಿಕೃತ ಸೇವಾ ಕೇಂದ್ರಕ್ಕೆ ತರಲು ಅಥವಾ ಕಳುಹಿಸಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ.

"ಇಂತಹ ಲಾಕ್‌ಡೌನ್ ಸಮಯದಲ್ಲಿ ವಾರೆಂಟಿ ಮತ್ತು ಉಚಿತ ಸೇವಾ ಅವಧಿ ಮುಕ್ತಾಯವಾಗುವುದು ಒಂದು ಸವಾಲಾಗಿದೆ. ಈ ಕಷ್ಟದ ಸಮಯದಲ್ಲಿ ಗ್ರಾಹಕರಿಗೆ ಸಂಪೂರ್ಣ ಬೆಂಬಲವನ್ನು ನೀಡಲು ನಾವು ಬದ್ಧರಾಗಿದ್ದೇವೆ, ಅಂತಹ ಪರಿಸ್ಥಿತಿಯಲ್ಲಿ, ನಾವು ವಾರೆಂಟಿಯನ್ನು ಉಳಿಸಿಕೊಳ್ಳುತ್ತೇವೆ ಮತ್ತು ಜೂನ್ 30, 2021 ರವರೆಗೆ ಉಚಿತ ಸೇವಾ ಅವಧಿ ಹೆಚ್ಚುತ್ತಿದೆ.

ಟಾಟಾ ಮೋಟಾರ್ಸ್ ಇತ್ತೀಚೆಗಷ್ಟೇ ತನ್ನ ಪ್ರಯಾಣಿಕ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಮೇ 8ರಿಂದ ಅನ್ವಯವಾಗುವಂತೆ ಕಂಪನಿಯು ತನ್ನ ಎಲ್ಲಾ ಪ್ರಯಾಣಿಕ ಕಾರುಗಳ ಬೆಲೆಯನ್ನು ಶೇಕಡಾ 1.8ರಷ್ಟು ಹೆಚ್ಚಿಸುವುದಾಗಿ ಪ್ರಕಟಿಸಿದೆ.

English summary

COVID-19 impact: Tata Motors Extends Warranty And Free Service Period

Tata Motors on Tuesday announced that the firm will extend the warranty and free service period for its passenger vehicle owners.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X