For Quick Alerts
ALLOW NOTIFICATIONS  
For Daily Alerts

ಟಾಟಾ ಟಿಯಾಗೊ NRG ಹೊಸ ಕಾರು ಬಿಡುಗಡೆ: ಬೆಲೆ, ಫೀಚರ್ಸ್ ಮಾಹಿತಿ ಇಲ್ಲಿದೆ

|

ಭಾರತದ ಪ್ರಮುಖ ವಾಹನ ತಯಾರಕರಲ್ಲಿ ಒಂದಾದ ಟಾಟಾ ಮೋಟಾರ್ಸ್‌ ಟಾಟಾ ಟಿಯಾಗೊ ಹೊಸ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಮಾದರಿಯ ಟಾಟಾ ಟಿಯಾಗೊ NRG ಆರಂಭಿಕ ಬೆಲೆ 6.57 ಲಕ್ಷ ರೂಪಾಯಿನಷ್ಟಿದೆ.

 

ಟಾಟಾ ಟಿಯಾಗೊ ಎನ್‌ಆರ್‌ಜಿಯಲ್ಲಿ ಹಲವು ಹೆಚ್ಚುವರಿ ಬದಲಾವಣೆಗಳನ್ನು ಮಾಡಲಾಗಿದ್ದು, ಇದು ಸಂಪೂರ್ಣ ವಿಶೇಷವಾಗಿದೆ. ಟಿಯಾಗೋ ಎನ್‌ಆರ್‌ಜಿಯನ್ನು ನಾಲ್ಕು ಬಣ್ಣಗಳ ಆಯ್ಕೆಗಳೊಂದಿಗೆ 1.2 ಲೀಟರ್ ಎಂಜಿನ್‌ನೊಂದಿಗೆ ತರಲಾಗಿದೆ.

ಟಾಟಾ ಟಿಯಾಗೊ ಎನ್‌ಆರ್‌ಜಿ 85 ಬಿಹೆಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುವ ಬಿಎಸ್ 6 , 1.2 ಎಲ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದರಲ್ಲಿ ಮ್ಯಾನುಯಲ್ (6.57 ಲಕ್ಷ ರೂ.) ಮತ್ತು ಎಎಂಟಿ (7.09 ಲಕ್ಷ ರೂ.) ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

ಇತ್ತೀಚೆಗಷ್ಟೇ ಟಾಟಾ ಟಿಯಾಗೊ ಟೀಸರ್ ಬಿಡುಗಡೆಯಾಯಿತು, ಟಿಯಾಗೊ ಈಗ ಹೊಸ ಅವತಾರದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ, ಈ ಕಾರಣದಿಂದಾಗಿ ಇದು ಮೊದಲಿಗಿಂತ ಆಕರ್ಷಕವಾಗಿ ಕಾಣುತ್ತದೆ.

ಈಗಾಗಲೇ ಶೋರೂಂಗಳಲ್ಲಿ ಈ ಕಾರು ಲಭ್ಯವಿದೆ ಮತ್ತು ಗ್ರಾಹಕರು ಇಂದಿನಿಂದ ಕಾರನ್ನು ಬುಕ್ ಮಾಡಬಹುದು ಮತ್ತು ಖರೀದಿಸಬಹುದು.

ಟಾಟಾ ಟಿಯಾಗೊ NRG ಬೆಲೆ ಎಷ್ಟು?

ಟಾಟಾ ಟಿಯಾಗೊ NRG ಬೆಲೆ ಎಷ್ಟು?

ಟಾಟಾ ಟಿಯಾಗೊ NRG 6,57,400 ರೂಪಾಯಿ (ಎಕ್ಸ್-ಶೋರೂಂ) ಬೆಲೆಯಲ್ಲಿ ಲಭ್ಯವಿರುತ್ತದೆ. ಅದೇ ಪೆಟ್ರೋಲ್ ಎಎಂಟಿ ರೂಪಾಂತರವು 7,09,400 (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ.

ರೈಲ್ವೆ ಟಿಕೆಟ್ ಬುಕ್ ಮಾಡುವ ಮುನ್ನ ಇಲ್ಲಿ ಗಮನಿಸಿ: 1 ಲಕ್ಷ ರೂಪಾಯಿ ಗೆಲ್ಲುವ ಅವಕಾಶ!

ಟಾಟಾ ಟಿಯಾಗೊ NRG ಕಾರುಗಳ ಬಣ್ಣ

ಟಾಟಾ ಟಿಯಾಗೊ NRG ಕಾರುಗಳ ಬಣ್ಣ

ಟಾಟಾ ಟಿಯಾಗೊ ಹೊಸ ರೂಪಾಂತರವು ನಾಲ್ಕು ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಟಾಟಾ ಮೋಟಾರ್ಸ್ ನಾಲ್ಕು ವಿಭಿನ್ನ ಬಣ್ಣಗಳ ಸಂಯೋಜನೆಯಲ್ಲಿ ಕಾರನ್ನು ಬಿಡುಗಡೆ ಮಾಡಲಿದೆ. ಈ ಕಾರು ಫಾರೆಸ್ಟಾ ಗ್ರೀನ್, ಸ್ನೋ ವೈಟ್, ಫೈರ್ ರೆಡ್, ಕ್ಲೌಡಿ ಗ್ರೇಯಲ್ಲಿ ಲಭ್ಯವಿರುತ್ತದೆ.

OFFER: ಟಾಟಾ ಕಾರುಗಳಿಗೆ ರಿಯಾಯಿತಿ: ಎಷ್ಟು ಎಂದು ತಿಳಿಯಿರಿ..

ಟಾಟಾ ಟಿಯಾಗೊ NRG ವಿನ್ಯಾಸ:
 

ಟಾಟಾ ಟಿಯಾಗೊ NRG ವಿನ್ಯಾಸ:

ಟಿಯಾಗೊ ಎನ್‌ಆರ್‌ಜಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ, ಇದು ಕಾರಿನ ಸುತ್ತಲೂ ಕಂಡುಬರುತ್ತದೆ. ಇದರೊಂದಿಗೆ, ಆಫ್-ರೋಡ್ ಸಾಮರ್ಥ್ಯವನ್ನು ಸುಧಾರಿಸಲು ಕಂಪನಿಯು ಸುಧಾರಣೆಯನ್ನು ತಂದಿದೆ.

ಇದನ್ನು ಡ್ಯುಯಲ್ ಟೋನ್ ಸ್ಕೀಮ್‌ನಲ್ಲಿ ಇರಿಸಲಾಗಿದೆ. ಮೇಲ್ಭಾಗ ಮತ್ತು ORVM ಗಳನ್ನು ಕಪ್ಪು ಬಣ್ಣದಲ್ಲಿ ಇರಿಸಲಾಗಿದೆ. ಇದರೊಂದಿಗೆ, ಟಿಯಾಗೋಗೆ ವಿಶೇಷ ವಿನ್ಯಾಸದ ಮಿಶ್ರಲೋಹದ ಚಕ್ರಗಳು, ಕಪ್ಪು ಮುಂಭಾಗದ ಗ್ರಿಲ್, ಕಪ್ಪು ಡೋರ್ ಹ್ಯಾಂಡಲ್‌ಗಳು, ಸ್ಪೋರ್ಟಿ ಕಪ್ಪು ಕ್ಲಾಡಿಂಗ್, ಹಿಂಭಾಗದ ಟೈಲ್‌ಲೈಟ್ ನೀಡಲಾಗಿದೆ. ಇದಲ್ಲದೇ, ಫಾಕ್ಸ್ ಸ್ಕಿಡ್ ಪ್ಲೇಟ್‌ಗಳನ್ನು ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಲ್ಲಿ ನೀಡಲಾಗಿದೆ, ಇದು ಕಾರಿಗೆ ಅಗ್ರೆಸ್ಸಿವ್ ಲುಕ್ ನೀಡುತ್ತದೆ.

ಎಲೆಕ್ಟ್ರಿಕ್ ಕಾರುಗಳಿಗೆ ಸಬ್ಸಿಡಿ ಹೇಗೆ ಸಿಗುತ್ತದೆ? ಯಾವ ದೇಶದಲ್ಲಿ ಹೆಚ್ಚಿನ ಪ್ರೋತ್ಸಾಹ?

ಟಿಯಾಗೊ ಇತರ ವೈಶಿಷ್ಟ್ಯಗಳೇನು?

ಟಿಯಾಗೊ ಇತರ ವೈಶಿಷ್ಟ್ಯಗಳೇನು?

5 ಇಂಚಿನ ಮಿಶ್ರಲೋಹದ ನಾಲ್ಕು ಚಕ್ರಗಳು, 181 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ರೂಫ್ ರೇಲ್, ಉದ್ದ 3793 ಎಂಎಂ, ಅಗಲ 1665 ಎಂಎಂ, ಎತ್ತರ 1587 ಎಂಎಂ ಮತ್ತು ವೀಲ್ ಬೇಸ್ 2400 ಎಂಎಂ ನಲ್ಲಿ ಇಡಲಾಗಿದೆ. ಇದರ ಗ್ರೌಂಡ್ ಕ್ಲಿಯರೆನ್ಸ್ ಅನ್ನು 10 ಮಿ.ಮೀ ಹೆಚ್ಚಿಸಲಾಗಿದೆ.

ಟಾಟಾ ಟಿಯಾಗೊ NRG ಸುರಕ್ಷತಾ ವೈಶಿಷ್ಟ್ಯಗಳು

ಟಾಟಾ ಟಿಯಾಗೊ NRG ಸುರಕ್ಷತಾ ವೈಶಿಷ್ಟ್ಯಗಳು

ಕಾರು ಎಬಿಎಸ್, ಇಬಿಡಿ ಮತ್ತು ಸಿಎಸ್‌ಸಿಯೊಂದಿಗೆ ಡ್ಯುಯಲ್ ಫ್ರಂಟ್ ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಹೆಚ್ಚುವರಿಯಾಗಿ, ಜಾಗತಿಕ NCAP ಕ್ರ್ಯಾಶ್ ಪರೀಕ್ಷೆಯಲ್ಲಿ ಈ ಕಾರು 4-ಸ್ಟಾರ್ ರೇಟಿಂಗ್ ಪಡೆದಿದೆ.

English summary

Tata Motors Launches New Tiago NRG 2021: Price Starts From Rs 6.57 Lakh

Tata motors has launched the all-new Tiago NRG. Price, Features other details In Kannada
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X