For Quick Alerts
ALLOW NOTIFICATIONS  
For Daily Alerts

ಕೊರೊನಾ ವಾರಿಯರ್ಸ್‌ಗೆ ಟಾಟಾ ಮೋಟಾರ್ಸ್ ಆಫರ್

|

ಭಾರತದ ಪ್ರಮುಖ ವಾಹನ ತಯಾರಿಕಾ ಕಂಪನಿ, ಟಾಟಾ ಮೋಟಾರ್ಸ್‌ ತನ್ನ ಗ್ರಾಹಕರಿಗೆ ಹಲವು ಆಫರ್‌ಗಳನ್ನು ನೀಡಿದೆ. ದೀರ್ಘಾವಧಿಯ ಸಾಲ, ಕಡಿಮೆ ಮಾಸಿಕ ಕಂತುಗಳು, ಹಾಗೆಯೇ ಸದ್ಯ ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೊಲೀಸರಿಗೆಲ್ಲ ಬಂಪರ್ ಆಫರ್ ಘೋಷಿಸಿದೆ.

 

ಕೊರೊನಾ ವಾರಿಯರ್ ಟಾಟಾ ಟಿಯಾಗೊ ಕೊಂಡರೆ, (5 ಲಕ್ಷ ರುಪಾಯಿ ಸಾಲ ಎಂದುಕೊಂಡರೆ) ಆರಂಭದ 6 ತಿಂಗಳು ತಲಾ 5,000 ರುಪಾಯಿ ಮಾತ್ರ ಕಟ್ಟಿದರೆ ಸಾಕು. ಮುಂದಿನ ತಿಂಗಳಲ್ಲಿ ಅದು ಏರುತ್ತಾ ಹೋಗುತ್ತದೆ. ಒಂದು ವೇಳೆ ಆರ್ಥಿಕ ಮುಗ್ಗಟ್ಟು ಎದುರಾದರೆ, ವಾಹನವನ್ನು ಟಾಟಾ ಮೋಟಾರ್ಸ್‌ ಫೈನಾನ್ಸ್‌ಗೆ ಹಿಂದಿರುಗಿಸಬಹುದು. ಕೋವಿಡ್ ಯೋಧರಿಗೆ 45,000 ರುಪಾಯಿವರೆಗೆ ಲಾಭಗಳನ್ನು ನೀಡಲಾಗುತ್ತದೆ.

ಕೊರೊನಾ ವಾರಿಯರ್ಸ್‌ಗೆ ಟಾಟಾ ಮೋಟಾರ್ಸ್ ಆಫರ್

ಅಲ್ಲದೆ, ತನ್ನ ಸಂಪೂರ್ಣ ಶ್ರೇಣಿಯ ಕಾರುಗಳು ಮತ್ತು ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳಲ್ಲಿ ಕಂಪನಿಯು 100 ಪರ್ಸೆಂಟ್ ಆನ್-ರೋಡ್ ಫಂಡಿಂಗ್ ನೀಡುತ್ತಿದೆ ಎಂದು ಟಾಟಾ ಮೋಟಾರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

"ಪ್ರಸ್ತುತ ಕಾಲದಲ್ಲಿ, ಸುರಕ್ಷತೆಯೊಂದಿಗೆ ಮೊದಲ ಆದ್ಯತೆಯಾಗಿ, ಗ್ರಾಹಕರು ಕೈಗೆಟುಕುವ ಮತ್ತು ಪಡೆಯಲು ಅನುಕೂಲಕರವಾದ ವೈಯಕ್ತಿಕ ಚಲನಶೀಲತೆ ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ಅದರ ಪ್ರಕಾರ, ಆಯ್ಕೆಯನ್ನು ನೀಡಲು ಮತ್ತು ನಮ್ಮ ಸಂಪೂರ್ಣ ಶ್ರೇಣಿಯನ್ನು ಹೊಂದುವ ಮತ್ತು ಕಾರುಗಳು ಮತ್ತು ಎಸ್‌ಯುವಿಗಳನ್ನು ಚಾಲನೆ ಮಾಡುವ ಅವರ ಸಂಪೂರ್ಣ ಅನುಭವವನ್ನು ಹೆಚ್ಚಿಸಲು ನಾವು ಈ ಪ್ಯಾಕೇಜ್ ಅನ್ನು ವಿನ್ಯಾಸಗೊಳಿಸಿದ್ದೇವೆ. "ಎಂದು ಟಾಟಾ ಮೋಟಾರ್ಸ್‌ನ ಮಾರ್ಕೆಟಿಂಗ್ ಮುಖ್ಯಸ್ಥ (ಪ್ರಯಾಣಿಕರ ವಾಹನಗಳ ವ್ಯಾಪಾರ ಘಟಕ) ವಿವೇಕ್ ಶ್ರೀವತ್ಸ ಹೇಳಿದರು.

ಹೆಚ್ಚುವರಿ ಪ್ರಯೋಜನವಾಗಿ, ಗ್ರಾಹಕರು ತಮ್ಮ ಅಂತಿಮ ಇಎಂಐ ಪಾವತಿಸುವಾಗ ಮೂರು ಮೌಲ್ಯವರ್ಧನೆ ಆಯ್ಕೆಗಳಿಂದ ಆಯ್ಕೆ ಮಾಡಬಹುದು ಎಂದು ಕಂಪನಿ ತಿಳಿಸಿದೆ.

English summary

Tata Motors Offers Special Benefits For Covid-19 Warriors

Tata Motors on Monday announced affordable EMIs with long-tenure loans and special offers for frontline warriors
Story first published: Wednesday, May 20, 2020, 17:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X