For Quick Alerts
ALLOW NOTIFICATIONS  
For Daily Alerts

ಟಾಟಾ ಮೋಟಾರ್ಸ್ ತ್ರೈಮಾಸಿಕ ಲಾಭ ಶೇಕಡಾ 67ರಷ್ಟು ಏರಿಕೆ

|

ನವದೆಹಲಿ, ಜನವರಿ 30: ಭಾರತದ ಪ್ರಮುಖ ವಾಹನ ತಯಾರಕ ಟಾಟಾ ಮೋಟಾರ್ಸ್ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭರ್ಜರಿ ಲಾಭ ದಾಖಲಿಸಿದೆ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ ಶೇ 67 ರಷ್ಟು ಏರಿಕೆ ಕಂಡಿದ್ದು, ಹೆಚ್ಚಿನ ಮಾರಾಟ ಮತ್ತು ಉಳಿತಾಯ ಕ್ರಮಗಳಿಂದ 2,906 ಕೋಟಿ ರೂ. ಗಳಿಸಿದೆ.

ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಆದಾಯವು ಶೇಕಡಾ 5.5ರಷ್ಟು ಏರಿಕೆಯಾಗಿ 75,654 ಕೋಟಿ ರೂ.ಗೆ ತಲುಪಿದೆ. ಆದರೆ ಇಬಿಐಟಿಡಿಎ (ಬಡ್ಡಿ, ತೆರಿಗೆ, ಸವಕಳಿ ) ಅಂಚು 540 ಬೇಸಿಸ್ ಪಾಯಿಂಟ್‌ಗಳನ್ನು ಹೊಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 14.8 ಕ್ಕೆ ವಿಸ್ತರಿಸಿದೆ.

ಟಾಟಾ ಮೋಟಾರ್ಸ್ ತ್ರೈಮಾಸಿಕ ಲಾಭ ಶೇಕಡಾ 67ರಷ್ಟು ಏರಿಕೆ

 

ಟಾಟಾ ಮೋಟಾರ್ಸ್ ಅಂಗಸಂಸ್ಥೆಯಾದ ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್ಆರ್) ಕಳೆದ ತ್ರೈಮಾಸಿಕದಲ್ಲಿ ಬ್ರಿಟನ್ ಹೊರತುಪಡಿಸಿ ಎಲ್ಲಾ ಮಾರುಕಟ್ಟೆಗಳಲ್ಲಿ ಬಲವಾದ ಚೇತರಿಕೆ ಕಂಡಿದೆ, ಅದರ ನಿವ್ವಳ ಆದಾಯವು ವರ್ಷದಿಂದ ವರ್ಷಕ್ಕೆ ಶೇ 6.5 ರಷ್ಟು ಇಳಿದು 5,982 ಮಿಲಿಯನ್ ಪೌಂಡ್‌ಗಳಿಗೆ ತಲುಪಿದೆ. ಆದಾಗ್ಯೂ, ತೆರಿಗೆಗೆ ಮುಂಚಿನ ಲಾಭವು ಶೇಕಡಾ 38.1 ರಷ್ಟು ಏರಿಕೆಯಾಗಿ 439 ಮಿಲಿಯನ್ ಪೌಂಡ್‌ಗಳಿಗೆ ತಲುಪಿದೆ.

"ಮೂರನೇ ತ್ರೈಮಾಸಿಕದಲ್ಲಿ ಮಾರಾಟವು 1,28,469 ವಾಹನಗಳಾಗಿದ್ದು, ದ್ವಿತೀಯ ತ್ರೈಮಾಸಿಕದಿಂದ ಶೇ. 13.1 ರಷ್ಟು ಏರಿಕೆಯಾಗಿದೆ. ಆದರೆ ಒಂದು ವರ್ಷದ ಹಿಂದೆ ಕೋವಿಡ್ ಪೂರ್ವ ಮಟ್ಟಕ್ಕಿಂತ ಶೇಕಡಾ 9ರಷ್ಟು ಕಡಿಮೆಯಾಗಿದೆ. ಚೀನಾದಲ್ಲಿ ಮಾರಾಟವು ಹಿಂದಿನ ತ್ರೈಮಾಸಿಕದಲ್ಲಿ ಶೇಕಡಾ 20.2 ರಷ್ಟು ಮತ್ತು 19.1 ಶೇಕಡಾ ಏರಿಕೆಯಾಗಿದೆ "ಎಂದು ಟಾಟಾ ಮೋಟಾರ್ಸ್ ಹೇಳಿದೆ.

ಜೆಎಲ್ಆರ್ ಡಿಸೆಂಬರ್ ತ್ರೈಮಾಸಿಕದಲ್ಲಿ ದಾಖಲೆಯ 562 ಮಿಲಿಯನ್ ಪೌಂಡ್‌ಗಳ ಸಕಾರಾತ್ಮಕ ಹಣದ ಹರಿವನ್ನು ಸೃಷ್ಟಿಸಿದೆ.

English summary

Tata Motors Q3 Report: Net Profit Rises 67 Percent

Tata Motors on Friday reported a 67 per cent year-on-year rise in its condsolidated net profit for October-December quarter
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X