For Quick Alerts
ALLOW NOTIFICATIONS  
For Daily Alerts

70 ದಿನಗಳ ನಂತರ ಟಾಟಾ ಮೋಟರ್ಸ್‌ ಉದ್ಯಮ ಘಟಕಗಳು ಪುನಾರಂಭ

|

ನವದೆಹಲಿ, ಜೂನ್ 3: ಕೋವಿಡ್ ಲಾಕ್‌ಡೌನ್ ಪರಿಣಾಮವಾಗಿ ದೇಶದ ಅನೇಕ ದೊಡ್ಡ ದೊಡ್ಡ ಕೈಗಾರಿಕಾ ಘಟಕಗಳೇ 60 ದಿನಗಳಿಗೂ ಹೆಚ್ಚು ದಿನ ಬಾಗಿಲು ಮುಚ್ಚಿದ್ದವು.

 

70 ದಿನಗಳ ನಂತರ ನಾಲ್ಕನೇ ಹಂತದ ಲಾಕ್‌ಡೌನ್ ಮುಗಿದು, ಐದನೇ ಹಂತದ ಲಾಕ್‌ಡೌನ್‌ನಲ್ಲಿ ಎಲ್ಲ ಕೈಗಾರಿಕಾ ಚಟುವಟಿಕೆಗಳಿಗೆ ಕಾರ್ಯಾರಂಭ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ಬೆನ್ನಲ್ಲೇ ಉದ್ಯಮ ದಿಗ್ಗಜ ಟಾಟಾ ಮೋಟರ್ಸ್ ದೇಶದಲ್ಲಿನ ತನ್ನ ಎಲ್ಲ ಘಟಕಗಳಲ್ಲಿ ಕೆಲಸ ಆರಂಭಿಸುವುದಾಗಿ ಹೇಳಿದೆ.

ಮಂಗಳವಾರ ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಟಾಟಾ ಮೋಟಾರ್ಸ್ ತನ್ನ ಎಲ್ಲಾ ಉತ್ಪಾದನಾ ಘಟಕಗಳಲ್ಲಿ ಜೂನ್ 1 ರಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಹೇಳಿದೆ. ಜೇಮಶೆಡ್‌ಪುರ್‌ ಘಟಕವು ಮೇ 27 ರಂದು ಕಾರ್ಯಾಚರಣೆ ಪ್ರಾರಂಭಿಸಲು ಅನುಮೋದನೆ ಪಡೆದಿತ್ತು ಎಂದು ತಿಳಿಸಿದೆ.

ಶೇ 59 ರಷ್ಟು ಶೋ ರೂಂಗಳು ಪುನರಾರಂಭ

ಶೇ 59 ರಷ್ಟು ಶೋ ರೂಂಗಳು ಪುನರಾರಂಭ

ಪ್ರಯಾಣಿಕರ ವಾಹನಗಳ ವಿಭಾಗದಲ್ಲಿ, ಶೇ 59 ರಷ್ಟು ಶೋ ರೂಂಗಳು ಪುನರಾರಂಭಗೊಂಡಿವೆ. ಚಿಲ್ಲರೆ ಮಾರುಕಟ್ಟೆ ಶೇ 69 ರಷ್ಟು ತೆರೆದುಕೊಂಡಿದೆ. ವಾಣಿಜ್ಯ ವಾಹನಗಳ (ಸಿವಿ) ವಿಭಾಗದಲ್ಲಿ, 3 ಎಸ್ (ಶೋ ರೂಂ, ಮಾರಾಟ ಮತ್ತು ಸೇವೆ) ಮಳಿಗೆ ಶೇ 70, 1 ಎಸ್ ಮಳಿಗೆ ಶೇ 43 ತೆರೆಯಲಾಗಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.

80 ಪ್ರತಿ ಶತದಷ್ಟು ಬುಸಿನೆಸ್ ವರ್ಕಶಾಪ್ ಪ್ರಾರಂಭ

80 ಪ್ರತಿ ಶತದಷ್ಟು ಬುಸಿನೆಸ್ ವರ್ಕಶಾಪ್ ಪ್ರಾರಂಭ

ಸುಮಾರು 80 ಪ್ರತಿ ಶತದಷ್ಟು ಬುಸಿನೆಸ್ ವರ್ಕಶಾಪ್‌ಗಳು ಪ್ರಾರಂಭವಾಗಿದ್ದು, ವಾಣಿಜ್ಯ ವಾಹನ ವಿಭಾಗದಲ್ಲಿ ಮತ್ತು ಪ್ರಯಾಣಿಕರ ವಾಹನ ವಿಭಾಗದಲ್ಲಿ ಟಾಟಾ ಅಧಿಕೃತ ಸೇವಾ ಕೇಂದ್ರಗಳು ಶೇ 69 ರಷ್ಟು ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಟಾಟಾ ಮೋಟರ್ಸ್ ಹೇಳಿದೆ.

ಬೇಡಿಕೆ ಕ್ರಮೇಣ ಸುಧಾರಿಸುತ್ತಿದೆ
 

ಬೇಡಿಕೆ ಕ್ರಮೇಣ ಸುಧಾರಿಸುತ್ತಿದೆ

ನೆಲಕಚ್ಚಿದ್ದ ವಾಹನ ಉದ್ಯಮದಲ್ಲಿ ಬೇಡಿಕೆ ಕ್ರಮೇಣ ಸುಧಾರಿಸಲು ಪ್ರಾರಂಭವಾಗಿದೆ ಎಂದು ಹೇಳಿರುವ ಟಾಟಾ ಮೋಟಾರ್ಸ್ ಶೇ 90 ರಷ್ಟು ವಾಣಿಜ್ಯ ವಾಹನಗಳ ಪೂರೈಕೆದಾರರು ಕಾರ್ಯಾಚರಣೆ ಪ್ರಾರಂಭಿಸಲು ಸ್ಥಳೀಯ ಸರ್ಕಾರಗಳಿಂದ ಅನುಮತಿ ಪಡೆದಿದ್ದಾರೆ. ಈ ಪೈಕಿ ಶೇ 80 ರಷ್ಟು ಪೂರೈಕೆದಾರರು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ವಾಣಿಜ್ಯ ವಾಹನಗಳ ವಿಭಾಗದಲ್ಲಿ, ಶೇ 98 ರಷ್ಟು ಪೂರೈಕೆದಾರರು ಕಾರ್ಯಾಚರಣೆ ಆರಂಭಿಸಲು ಅನುಮತಿ ಪಡೆದಿದ್ದಾರೆ ಎಂದು ಟಾಟಾ ಮೋಟರ್ಸ್ ತಿಳಿಸಿದೆ.

ಚೀನಾದಲ್ಲಿ ಕೆಲಸ ಪ್ರಾರಂಭವಾಗಿದೆ

ಚೀನಾದಲ್ಲಿ ಕೆಲಸ ಪ್ರಾರಂಭವಾಗಿದೆ

ಟಾಟಾ ಮೋಟರ್ಸ್‌ನ ಚೀನಾದ ಘಟಕಗಳು ಮಾರ್ಚ್‌ನಿಂದಲೇ ಕಾರ್ಯಾರಂಭ ಮಾಡಿದ್ದು, ಯರೋಪ್‌ನಲ್ಲಿರುವ ಕೆಲ ಘಟಕಗಳು ಕೋವಿಡ್ ಹಾವಳಿಯ ಪರಿಣಾಮ ಇನ್ನೂ ಕಾರ್ಯಾರಂಭ ಮಾಡಿಲ್ಲ ಎಂದು ಟಾಟಾ ಮೋಟರ್ಸ್‌ ತಿಳಿಸಿದ್ದು, ಗ್ರಾಹಕರು ಶೋ ರೂಮ್‌ಗಳಿಗೆ ಬರುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಆಶಾಭಾವನೆ ವ್ಯಕ್ತಪಡಿಸಿದೆ.

English summary

Tata Motors Reopen Manufacturing Plants Across The India

Tata Motors Reopen Manufacturing Plants Across The India. From June 1st tata Motors Plants workings starts. last 70 days closed all plants ahead of coronavirus lockdown.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X