ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
ಟಾಟಾ ಮೋಟಾರ್ಸ್ ಷೇರು ಬುಧವಾರ (ಜನವರಿ 20, 2021) ಇಂಟ್ರಾಡೇ ವಹಿವಾಟಿನಲ್ಲಿ 7 ಪರ್ಸೆಂಟ್ ಏರಿಕೆ ಕಂಡು, 28 ತಿಂಗಳ ಗರಿಷ್ಠ ಮಟ್ಟವಾದ 278 ರುಪಾಯಿ ಮುಟ್ಟಿತು. ಭಾರೀ ಪ್ರಮಾಣದಲ್ಲಿ ಖರೀದಿ ಕಂಡುಬಂದಿದ್ದು ಸಹ ಈ ಬೆಲೆ ಏರಿಕೆಗೆ ಬೆಂಬಲ ನೀಡಿತು. 2018ರ ಸೆಪ್ಟೆಂಬರ್ ನಂತರ ಟಾಟಾ ಸಮೂಹದ ವಾಣಿಜ್ಯ ವಾಹನಗಳ ಕಂಪೆನಿಯ ಷೇರು ದರ ಗರಿಷ್ಠ ಮಟ್ಟದಲ್ಲಿದೆ.
ಭಾರತದಲ್ಲಿ ಟೆಸ್ಲಾ ಕಂಪೆನಿ ಪ್ರವೇಶಿಸುತ್ತಿದ್ದು, ಟಾಟಾ ಮೋಟಾರ್ಸ್ ಜತೆ ಸಹಯೋಗ ವಹಿಸಲಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಕಳೆದ ಏಳು ದಿನದಲ್ಲಿ ಷೇರಿನ ದರ 26% ಹೆಚ್ಚಳವಾಗಿದೆ. ಆದರೆ ಟೆಸ್ಲಾ ವಿಚಾರದಲ್ಲಿ ಹಬ್ಬಿರುವ ಸುದ್ದಿಯನ್ನು ಟಾಟಾ ಮೋಟಾರ್ಸ್ ಈಗಾಗಲೇ ನಿರಾಕರಿಸಿದೆ.
ಸೆನ್ಸೆಕ್ಸ್, ನಿಫ್ಟಿ ಹೊಸ ದಾಖಲೆ; ಟಾಟಾ ಮೋಟಾರ್ಸ್ 6% ಗಳಿಕೆ
ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನ ವ್ಯವಹಾರಕ್ಕೆ ಅದ್ಭುತ ಪ್ರತಿಕ್ರಿಯೆ ಬಂದಿದೆ. ಇನ್ನು ಕಂಪೆನಿಯಿಂದ FY21Q3ರಲ್ಲಿ 1253 ಎಲೆಕ್ಟ್ರಿಕ್ ವಾಹನಗಳ ಹೋಲ್ ಸೇಲ್ ಮಾರಾಟ ಆಗಿದೆ. 2020ರ ಡಿಸೆಂಬರ್ ನಲ್ಲಿ 418 ಯೂನಿಟ್ ಮಾರಾಟ ಆಗಿದೆ.
ಅಂದ ಹಾಗೆ ಟಾಟಾ ಮೋಟಾರ್ಸ್ ಷೇರು 2021ರ ಜನವರಿ 1ರಂದು ದಿನದ ಕೊನೆಗೆ ರು. 186.45 ಮುಕ್ತಾಯ ಆಗಿತ್ತು. ಜನವರಿ 20ರಂದು ದಿನದ ಕೊನೆಗೆ ರು. 274.90 ವಹಿವಾಟು ಮುಗಿಸಿದೆ. ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡಿದೆ.