For Quick Alerts
ALLOW NOTIFICATIONS  
For Daily Alerts

ಟಾಟಾ ಮೋಟಾರ್ಸ್ ಷೇರಿನ ಟಾರ್ಗೆಟ್ 646 ರೂಪಾಯಿ: ICICI ಸೆಕ್ಯುರಿಟೀಸ್

|

ಏರುಮುಖದಲ್ಲೇ ಸಾಗಿರುವ ಟಾಟಾ ಮೋಟಾರ್ಸ್‌ ಷೇರಿನ ಹೂಡಿಕೆದಾರರಿಗೆ ಇದೀಗ ಮತ್ತಷ್ಟು ಬೂಸ್ಟ್ ನೀಡುವ ಸುದ್ದಿ ಹೊರಬಿದ್ದಿದೆ. ಐಸಿಐಸಿಐ ಸೆಕ್ಯುರಿಟೀಸ್ ಟಾಟಾ ಮೋಟಾರ್ಸ್ ನಲ್ಲಿ ಖರೀದಿ (BUY) ಕರೆ ನೀಡಿದ್ದು, ಎನ್‌ಎಸ್ಇನಲ್ಲಿ ಶೇಕಡಾ 1.83ರಷ್ಟು ಗುರಿಯ ಬೆಲೆಯೊಂದಿಗೆ 646 ರೂಪಾಯಿ ಟಾರ್ಗೆಟ್ ನೀಡಿದೆ.

 

ಈ ಷೇರಿನಲ್ಲಿ 20 ವರ್ಷದ ಹಿಂದೆ 50,000 ಹೂಡಿಕೆ ಮಾಡಿದ್ರೆ, ಈಗ 5 ಕೋಟಿ ರೂಪಾಯಿ!

ಟಾಟಾ ಮೋಟಾರ್ಸ್ ಲಿಮಿಟೆಡ್ ಬೆಲೆ ನಿಗದಿಪಡಿಸಿದ ಗುರಿಯನ್ನು ತಲುಪಲು ವಿಶ್ಲೇಷಕರು ನೀಡಿದ ಸಮಯ ಒಂದು ವರ್ಷವಾಗಿದೆ. ಟಾಟಾ ಮೋಟಾರ್ಸ್ ಲಿಮಿಟೆಡ್, 1945 ರಲ್ಲಿ ಸಂಯೋಜಿಸಲ್ಪಟ್ಟು, ಕಾರ್ಯನಿರ್ವಹಿಸುತ್ತಿರುವ ಒಂದು ದೊಡ್ಡ ಮಾರುಕಟ್ಟೆ ಕ್ಯಾಪ್ ಕಂಪನಿಯಾಗಿದೆ. ಈ ಕಂಪನಿಯು 1,68,306.40 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.

ಟಾಟಾ ಮೋಟಾರ್ಸ್ ಲಿಮಿಟೆಡ್ ಪ್ರಮುಖ ಉತ್ಪನ್ನಗಳೆಂದರೆ ಮೋಟಾರ್ ವಾಹನಗಳು, ಬಿಡಿಭಾಗಗಳು ಮತ್ತು ಇತರೆ ಸರಕುಗಳ ಮೂಲಕ ಆದಾಯ ಮತ್ತು ಸೇವೆಗಳಿಂದ ಪಡೆಯುತ್ತದೆ.

ಟಾಟಾ ಮೋಟಾರ್ಸ್ ಷೇರಿನ ಟಾರ್ಗೆಟ್ 646 ರೂಪಾಯಿ: ICICI ಸೆಕ್ಯುರಿಟೀಸ್

ಟಾಟಾ ಮೋಟಾರ್ಸ್ ತ್ರೈಮಾಸಿಕ ವರದಿ
ಜೂನ್ 2021ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು 66,988.05 ಕೋಟಿ ರೂಪಾಯಿಗಳಷ್ಟು ಒಟ್ಟು ಆದಾಯವನ್ನು ವರದಿ ಮಾಡಿದೆ. ಕಳೆದ ತ್ರೈಮಾಸಿಕದ 89,319.34 ಕೋಟಿ ರೂಪಾಯಿಗೆ ಹೋಲಿಸಿದರೆ ಒಟ್ಟು ಆದಾಯದಲ್ಲಿ -25.00 % ಇಳಿಕೆಗೊಂಡರೆ, ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಒಟ್ಟು ಆದಾಯ 52589.59 ಕೋಟಿ ರೂಪಾಯಿನಷ್ಟಿದೆ. ಇತ್ತೀಚಿನ ತ್ರೈಮಾಸಿಕದಲ್ಲಿ ಕಂಪನಿಯು ತೆರಿಗೆ ನಂತರ ನಿವ್ವಳ ಲಾಭವನ್ನು ರೂ -4320.60 ಕೋಟಿಗೆ ವರದಿ ಮಾಡಿದೆ.

30 ಜೂನ್ 2021 ರ ಹೊತ್ತಿಗೆ ಪ್ರಮೋಟರ್ಸ್ ಕಂಪನಿಯಲ್ಲಿ ಶೇ. 46.41 ರಷ್ಟು ಪಾಲನ್ನು ಹೊಂದಿದ್ದರೆ, ಎಫ್ಐಐಗಳು ಶೇಕಡಾ 14.28ರಷ್ಟು, ಡಿಐಐಗಳು ಶೇಕಡ 11.48ರಷ್ಟು ಪಾಲು ಹೊಂದಿವೆ.

English summary

Tata Motors Target Price Rs 646: ICICI Securities

ICICI Securities has buy call on Tata Motors With The Target Price of Rs 646
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X