For Quick Alerts
ALLOW NOTIFICATIONS  
For Daily Alerts

ದೇಶದ ಅತ್ಯಂತ ಸುರಕ್ಷಿತ ಕಾರು ಟಾಟಾ ಪಂಚ್ ಭಾರತದಲ್ಲಿ ಬಿಡುಗಡೆ: ಬೆಲೆ 5.49 ಲಕ್ಷ ರೂಪಾಯಿ

|

ಬಿಡುಗಡೆಗೂ ಮುನ್ನವೇ ದೇಶದ ಅತ್ಯಂತ ಸುರಕ್ಷಿತ ಕಾರು ಎಂದು ಬಿರುದು ಪಡೆದಿರುವ ಟಾಟಾ ಪಂಚ್‌ ಭಾನುವಾರ (ಅ. 17) ಬಿಡುಗಡೆಗೊಂಡಿದೆ. ಇದನ್ನು ಆರಂಭಿಕ ಬೆಲೆ 5.49 ಲಕ್ಷ ರೂಪಾಯಿ ಬೆಲೆಯಲ್ಲಿ ತರಲಾಗಿದೆ. ಬಿಡುಗಡೆಗೂ ಮುನ್ನವೇ ಕಾರಿನ ಬುಕ್ಕಿಂಗ್ ಅನ್ನು ಆರಂಭಿಸಲಾಗಿತ್ತು.

 

5 ಸ್ಟಾರ್ ರೇಟಿಂಗ್ ಅನ್ನು ಹೊಂದಿರುವ ಟಾಟಾದ ಮತ್ತೊಂದು ಕಾರು ಇದಾಗಿದ್ದು, ಟಾಟಾ ಪಂಚ್ ಅನ್ನು ಹಲವು ವೈಶಿಷ್ಟ್ಯಗಳು ಮತ್ತು ಸಲಕರಣೆಗಳೊಂದಿಗೆ ತರಲಾಗಿದೆ. ಜೊತೆಗೆ ಮೈಕ್ರೋ ಎಸ್‌ಯುವಿಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಮೊದಲ ಕಾರು ಇದಾಗಿದೆ.

ನಾಲ್ಕು ರೂಪಾಂತರಗಳಲ್ಲಿ ಕಾರು ಬಿಡುಗಡೆ

ನಾಲ್ಕು ರೂಪಾಂತರಗಳಲ್ಲಿ ಕಾರು ಬಿಡುಗಡೆ

ಈ ಎಸ್‌ಯುವಿಯನ್ನು ಪ್ಯೂರ್, ಅಡ್ವೆಂಚರ್, ಅಕಂಪ್ಲಿಷ್ಡ್‌, ಕ್ರಿಯೆಟಿವ್ ಎಂದು ಒಟ್ಟು ನಾಲ್ಕು ರೂಪಾಂತರಗಳಲ್ಲಿ ತರಲಾಗಿದೆ. ಈ ಟ್ರಿಮ್‌ಗಳನ್ನು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಇದಲ್ಲದೇ, ಈ ಕಾರಿಗೆ ಎರಡು ಆಯ್ಕೆಗಳಾದ ರಿದಮ್ ಮತ್ತು ಡ್ಯಾzಲ್ ಅನ್ನು ಸಹ ನೀಡಲಾಗುವುದು. ಇದರ ಉನ್ನತ ರೂಪಾಂತರದ ಬೆಲೆಯನ್ನು 8.49 ಲಕ್ಷ ರೂಪಾಯಿಗಳಲ್ಲಿ ಇರಿಸಲಾಗಿದೆ.

ಕಾರಿನ ವೈಶಿಷ್ಟ್ಯತೆ ಏನು?

ಕಾರಿನ ವೈಶಿಷ್ಟ್ಯತೆ ಏನು?

ಟಾಟಾ ಪಂಚ್ ಮೈಕ್ರೋ-ಎಸ್‌ಯುವಿಯು ಕಂಪನಿಯ ಹೊಸ ಅಗೈಲ್ ಲೈಟ್ ಫ್ಲೆಕ್ಸಿಬಲ್ ಅಡ್ವಾನ್ಸ್ಡ್ (ALFA) ಆರ್ಕಿಟೆಕ್ಚರ್ ಅನ್ನು ಆಧರಿಸಿದೆ. ಗಾತ್ರಕ್ಕೆ ಸಂಬಂಧಿಸಿದಂತೆ, ಹೊಸ ಟಾಟಾ ಪಂಚ್ ಸಾಕಷ್ಟು ಚಿಕ್ಕದಾಗಿರುತ್ತದೆ. 3,827 ಮಿಮೀ ಉದ್ದ, 1,742 ಮಿಮೀ ಅಗಲ ಮತ್ತು 1,615 ಮಿಮೀ ಎತ್ತರ, 2,445 ಎಂಎಂ ವೀಲ್‌ಬೇಸ್ ಹೊಂದಿದ್ದು, 187 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 370 ಎಂಎಂ ನೀರು ಸಾಮರ್ಥ್ಯವನ್ನು ನೀಡಲಾಗಿದೆ.

ಸಿಗ್ನೇಚರ್ ಗ್ರಿಲ್
 

ಸಿಗ್ನೇಚರ್ ಗ್ರಿಲ್

ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದ್ರೆ, ಸಿಗ್ನೇಚರ್ ಗ್ರಿಲ್ ಅನ್ನು ಟಾಟಾ ಪಂಚ್‌ನಲ್ಲಿ ಕಾಣಬಹುದು. ಇದರಲ್ಲಿ ಟಾಟಾ ಲೋಗೋವನ್ನು ಮಧ್ಯದಲ್ಲಿ ಎಲ್ಇಡಿ ಡಿಆರ್‌ಎಲ್‌ಗಳಿಗೆ ಜೋಡಿಸಲಾಗಿದೆ. ಹೆಡ್‌ಲೈಟ್ ಅನ್ನು ಎರಡೂ ಬದಿಗಳಲ್ಲಿ ಇರಿಸಲಾಗಿದೆ ಮತ್ತು ಫಾಗ್ ಲ್ಯಾಂಪ್ ಅನ್ನು ಅದರ ಕೆಳಗೆ ಇರಿಸಲಾಗಿದೆ. ನಂಬರ್ ಪ್ಲೇಟ್ ಮತ್ತು ಸ್ಕಿಡ್ ಪ್ಲೇಟ್ ಅನ್ನು ಅದರ ಕೆಳಗೆ ಇರಿಸಲಾಗಿದೆ.

ಯಾವ ಕಾರಿನ ಬೆಲೆ ಎಷ್ಟಿದೆ?

ಯಾವ ಕಾರಿನ ಬೆಲೆ ಎಷ್ಟಿದೆ?

ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆಯಾಗಿರುವ ಟಾಟಾ ಪಂಚ್ ಆರಂಭಿಕ ಬೆಲೆಗಳು ಈ ಕೆಳಗಿನಂತಿದೆ

ಪ್ಯೂರ್: 5.49 ಲಕ್ಷ ರೂಪಾಯಿ

ಅಡ್ವೆಂಚರ್: 6.39 ಲಕ್ಷ ರೂಪಾಯಿ

ಅಕಂಪ್ಲಿಶ್ಡ್‌: 7.29 ಲಕ್ಷ ರೂಪಾಯಿ

ಕ್ರಿಯೆಟಿವ್: 8.49 ಲಕ್ಷ ರೂಪಾಯಿ

ಭಾರತದ ಅತ್ಯಂತ ಸುರಕ್ಷಿತ ಕಾರು ಟಾಟಾ ಪಂಚ್‌: NCAP ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್‌ ರೇಟಿಂಗ್

5 ಸ್ಟಾರ್ ರೇಟಿಂಗ್ ಪಡೆದಿರುವ ಕಂಪನಿಯ ಮೂರನೇ ಕಾರು

5 ಸ್ಟಾರ್ ರೇಟಿಂಗ್ ಪಡೆದಿರುವ ಕಂಪನಿಯ ಮೂರನೇ ಕಾರು

ಟಾಟಾ ಪಂಚ್ 5 ಸ್ಟಾರ್ ರೇಟಿಂಗ್ ಪಡೆದಿರುವ ಟಾಟಾ ಕಂಪನಿಯ ಮೂರನೇ ಕಾರು. ಈ ಮೊದಲು, ಆಲ್ಟ್ರೋಜ್ ಜನವರಿ 2020 ರಲ್ಲಿ 5 ಸ್ಟಾರ್ ಸುರಕ್ಷತೆ ರೇಟಿಂಗ್ ಮತ್ತು 2018 ರ ಡಿಸೆಂಬರ್‌ನಲ್ಲಿ ನೆಕ್ಸಾನ್ ಈ ಸ್ಥಾನ ಪಡೆದಿದೆ. ಈ ಚಿಕ್ಕ ಎಸ್‌ಯುವಿಯು ವಯಸ್ಕರ ಸುರಕ್ಷತೆಯಲ್ಲಿ 16.453 ಅಂಕಗಳನ್ನು ಮತ್ತು ಮಕ್ಕಳ ಸುರಕ್ಷತೆಗಾಗಿ 40.891 ಅಂಕಗಳನ್ನು ಪಡೆದುಕೊಂಡಿದೆ. ಈ ಕುರಿತು ಕಂಪನಿಯು ಸಂತೋಷವನ್ನು ವ್ಯಕ್ತಪಡಿಸಿತು ಮತ್ತು ಭಾರತದ ಆಟೋಮೋಟಿವ್ ಉದ್ಯಮವು ಗರಿಷ್ಠ ಸುರಕ್ಷತೆಯೊಂದಿಗೆ ವಾಹನಗಳನ್ನು ತಲುಪಿಸಬಲ್ಲದು ಎಂದು ಹೇಳಿದೆ.

ಕಾರು ಬುಕ್‌ ಮಾಡುವುದು ಹೇಗೆ?

ಕಾರು ಬುಕ್‌ ಮಾಡುವುದು ಹೇಗೆ?

ಕಾರನ್ನು ಕಂಪನಿಯ ವೆಬ್‌ಸೈಟ್‌ನಿಂದ ಅಥವಾ ಯಾವುದೇ ಅಧಿಕೃತ ಡೀಲರ್‌ಶಿಪ್‌ನಿಂದ ಮುಂಗಡ ಮೊತ್ತ 21,000 ರೂ. ಪಾವತಿಸಿ ಬುಕ್‌ ಮಾಡಬಹುದು. ಇನ್ನು ಇದರ ಬೆಲೆ 5.49 ಲಕ್ಷದಿಂದ 8.49 ಲಕ್ಷ ರೂಪಾಯಿಗಳವರೆಗೆ ವೇರಿಯೆಂಟ್ ಹೊಂದಿದೆ.

English summary

Tata Punch Micro SUV Launched In India; Check Price, Features and Specifications in Kannada

Tata Motors has officially introduced the Punch micro-SUV in the country, with prices starting at Rs 5.49 lakh (ex-showroom, Delhi).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X