For Quick Alerts
ALLOW NOTIFICATIONS  
For Daily Alerts

ಇ-ಕಾಮರ್ಸ್ ವ್ಯಾಪಾರದಲ್ಲಿ ಬೃಹತ್ ಹೂಡಿಕೆ ಮಾಡುತ್ತಿದೆ ಟಾಟಾ !

By ರಂಗಸ್ವಾಮಿ ಮೂಕನಹಳ್ಳಿ
|

ಭಾರತದಲ್ಲಿ ಇ -ಕಾಮರ್ಸ್ ಬೆಳವಣಿಗೆ ಕಂಡ ವೇಗ ಎಂತವರನ್ನೂ ಕೂಡ ಅಚ್ಚರಿಗೆ ತಳ್ಳುತ್ತದೆ . ಕೋವಿಡ್ ಗೆ ಮೊದಲೇ ಭಾರತೀಯರಾದ ನಾವು ಬಹಳಷ್ಟು ವಸ್ತುಗಳನ್ನ ಆನ್ಲೈನ್ ಮೂಲಕ ತರಿಸಿ ಕೊಳ್ಳುವುದಕ್ಕೆ ಒಗ್ಗಿಕೊಂಡಿದ್ದೆವು . ಕೋವಿಡ್ ನಮ್ಮನ್ನ ಮನೆಯಿಂದ ಹೊರ ಹೋಗದೆ ಬೇಕಾದ ಎಲ್ಲಾ ವಸ್ತುಗಳನ್ನ ಮನೆಯ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನ ಸೃಷ್ಟಿಸಿದೆ. ಕೋವಿಡ್ ಕಾಲಘಟ್ಟದಲ್ಲಿ ಬೇರೆ ಬೇರೆ ಕ್ಷೇತ್ರಗಳು ಸಾಕಷ್ಟು ನಷ್ಟವನ್ನ ಅನುಭವಿಸಿದ್ದವು . ಆದರೆ ಇ -ಕಾಮರ್ಸ್ ಕ್ಷೇತ್ರ ಮಾತ್ರ ವೇಗವಾಗಿ ಬೆಳೆಯಿತು. ಅಮೆಜಾನ್ ಭಾರತದಲ್ಲಿ ಊರಿದ್ದ ಕಾಲು ಇನ್ನಷ್ಟು ಭದ್ರವಾಯ್ತು.

 

ಆಮೆರಿಕಾದ ಸಂಸ್ಥೆಯೊಂದು ಭಾರತದಲ್ಲಿ ಈ ಮಟ್ಟಿಗೆ ಮಾರುಕಟ್ಟೆ ಪಾರುಪತ್ಯವನ್ನ ಗಳಿಸಲು ಸಾಧ್ಯವಾದರೆ , ದೇಶಿ ಸಂಸ್ಥೆಗಳಿಂದ ಏಕೆ ಸಾಧ್ಯವಿಲ್ಲ ? ಈ ನಿಟ್ಟಿನಲ್ಲಿ ನೋಡಿದರೆ ಭಾರತದ ದೈತ್ಯ ಟಾಟಾ ಈ ಕ್ಷೇತ್ರಕ್ಕೆ ಹೊಸ ಆಟಗಾರ ಎನ್ನಬಹುದು. ಟಾಟಾ ಈ ಕ್ಷೇತ್ರಕ್ಕೆ ಏಕೆ ಹೆಚ್ಚಿನ ಒಲವು ತೋರಿಸಲಿಲ್ಲ ಎನ್ನುವುದು ಯಕ್ಷ ಪ್ರಶ್ನೆ. ನಿಧಾನವಾದರೂ ಸರಿಯೇ ಟಾಟಾ ಇದೀಗ ಇ ಕಾಮರ್ಸ್ ಕ್ಷೇತ್ರಕ್ಕೆ ಕಾಲಿಟ್ಟಿದೆ.

ಇ-ಕಾಮರ್ಸ್ ವ್ಯಾಪಾರದಲ್ಲಿ ಬೃಹತ್ ಹೂಡಿಕೆ ಮಾಡುತ್ತಿದೆ ಟಾಟಾ !

ಟಾಟಾ ಡಿಜಿಟಲ್ 5025 ಕೋಟಿ ರೂಪಾಯಿ ಹಣವನ್ನ ಹೂಡಿಕೆಯಾಗಿ ಪಡೆದಿದೆ. ಟಾಟಾ ಯುನಿಸ್ಟೋರ್ಸ್ 102 ಕೋಟಿ ರೂಪಾಯಿಯನ್ನ ಹೂಡಿಕೆ ರೂಪದಲ್ಲಿ ಪಡೆದುಕೊಂಡಿದೆ. ಟಾಟಾ ಡಿಜಿಟಲ್ ಮುಂಬರುವ ದಿನಗಳಲ್ಲಿ ಇ -ಗ್ರೋಸರ್ , ಬಿಗ್ ಬಾಸ್ಕೆಟ್ ಮತ್ತು ಡಿಜಿಟಲ್ ಹೆಲ್ತ್ ಕಂಪನಿ ಯಂತಹ ಸಂಸ್ಥೆಗಳ ಮೇಲಿನ ಹಿಡಿತ ಹೊಂದುವಷ್ಟು ಷೇರುಗಳನ್ನ ಖರೀದಿಸುವ ಸಿದ್ಧತೆಯಲ್ಲಿದೆ.

ಟಾಟಾ ಯುನಿಸ್ಟೋರ್ಸ್ ಒಟ್ಟು ಸಾವಿರ ಕೋಟಿ ರೂಪಾಯಿಯನ್ನ ಮಾರುಕಟ್ಟೆಯಿಂದ ಎತ್ತುವ ಉತ್ಸಾಹದಲ್ಲಿದೆ. ಉಪ್ಪಿನಿಂದ ಸಿಮೆಂಟು , ಸ್ಟೀಲ್ ನವರೆಗೆ , ಸಾಫ್ಟ್‌ವೇರ್‌ ನಿಂದ ಐಷಾರಾಮಿ ಜೀಪು , ಕಾರು ಮಾರುವವರೆಗೆ ಟಾಟಾ ಭಾರತದಲ್ಲಿ ಅತ್ಯಂತ ವಿಶ್ವಾಸ ಗಳಿಸಿರುವ ಬ್ರಾಂಡ್ . ಆದರೆ ಇ -ಕಾಮರ್ಸ್ ವಿಷಯದಲ್ಲಿ ಮಾತ್ರ ಅದೇಕೋ ತಮ್ಮ ಛಾಪನ್ನ ಒತ್ತುವುದರಲ್ಲಿ ಆಸಕ್ತಿ ತೋರಿಸಿರಲಿಲ್ಲ.

 

ಸೋನಿ ಇಂಡಿಯಾ ಜೊತೆಗೆ ವಿಲೀನಗೊಳ್ಳಲಿದೆ ಜೀ ಎಂಟರ್‌ಟೈನ್‌ಮೆಂಟ್: ಜೀ ಷೇರು 20% ಜಿಗಿತ

ಇದೀಗ ಐದು ಸಾವಿರ ಕೋಟಿಗೂ ಮೀರಿದ ಬಂಡವಾಳವನ್ನ ಇ-ಕಾಮರ್ಸ್ ಕ್ಷೇತ್ರದಲ್ಲಿ ಟಾಟಾ ಹೂಡಿಕೆ ಮಾಡಿರುವುದು ಎರಡು ವಿಷಯವನ್ನ ಸ್ಪಷ್ಟವಾಗಿಸಿದೆ. ಮೊದಲನೆಯದಾಗಿ ಇ -ಕಾಮರ್ಸ್ ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಭವಿಷ್ಯವಿದೆ, ಎರಡನೆಯದಾಗಿ ಟಾಟಾ ಈ ಕ್ಷೇತ್ರದಲ್ಲೂ ತನ್ನ ಗುರುತನ್ನ ಮೂಡಿಸಲು ಸಿದ್ಧವಾಗಿದೆ.

ಇದೆ ಏಪ್ರಿಲ್ 2021 ರಲ್ಲಿ ಟಾಟಾ ಡಿಜಿಟಲ್ ತನ್ನ ಆಥೋರೈಸ್ಡ್ ಶೇರ್ ಕ್ಯಾಪಿಟಲ್ 1000 ಕೋಟಿಯಿಂದ 11,000 ಕೋಟಿಗೆ ಏರಿಕೆಯನ್ನ ಮಾಡಿಸಿದೆ . ಟಾಟಾ ಯುನಿಸ್ಟೋರ್ ಕ್ಯಾಪಿಟಲ್ 1500 ರಿಂದ 5000 ಕೋಟಿಗೆ ಏರಿಕೆಯಾಗಿದೆ. ಟಾಟಾ ಇ -ಕಾಮರ್ಸ್ ಕ್ಷೇತ್ರವನ್ನ ಬಹಳ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಗ್ರಾಹಕನಿಗೆ ಇನ್ನಷ್ಟು ಆಯ್ಕೆಗಳು ಸಿಗಲಿವೆ.

English summary

Tatas invest Rs 5,025 crore into Tata Digital in FY22

The Tatas have pumped in Rs 5,025 crore till now this fiscal into its flagship ecommerce entity Tata Digital in FY 22, Know more.
Story first published: Thursday, September 23, 2021, 13:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X