77.92 ಲಕ್ಷ ತೆರಿಗೆದಾರರಿಗೆ 1.02 ಲಕ್ಷ ಕೋಟಿ ರೂ. ತೆರಿಗೆ ಮರುಪಾವತಿ ಮಾಡಿದ ಸಿಬಿಡಿಟಿ
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) 77.92 ಲಕ್ಷ ತೆರಿಗೆದಾರರಿಗೆ 1.02 ಲಕ್ಷ ಕೋಟಿ ರೂಪಾಯಿಗಳ ತೆರಿಗೆ ಮರುಪಾವತಿಯನ್ನು ಮಾಡಿದೆ ಎಂದು ಆದಾಯ ತೆರಿಗೆ ಇಲಾಖೆ ಅಕ್ಟೋಬರ್ 27 ರ ಬುಧವಾರ ಮಾಹಿತಿ ನೀಡಿದೆ. ಈ ತೆರಿಗೆ ಮರುಪಾವತಿಯು ಈ ವರ್ಷದ ಏಪ್ರಿಲ್ 1 ರಿಂದ ಅಕ್ಟೋಬರ್ 25 ರ ನಡುವಿನ ಅವಧಿಯದ್ದು ಆಗಿದೆ.
ಈ ಮೊತ್ತವು 46 ಲಕ್ಷಕ್ಕೂ ಹೆಚ್ಚು ತೆರಿಗೆದಾರರಿಗೆ 6,657.40 ಕೋಟಿ ರೂಪಾಯಿಗಳ ತೆರಿಗೆ ಮರುಪಾವತಿಯನ್ನು ಒಳಗೊಂಡಿದೆ. ಇದು ಮೌಲ್ಯಮಾಪನ ವರ್ಷ 2021-22ಕ್ಕೆ ಸೇರಿದ್ದು ಆಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
24 ಲಕ್ಷ ತೆರಿಗೆದಾರರಿಗೆ ರಿಫಂಡ್ ಘೋಷಿಸಿದ ಸಿಬಿಡಿಟಿ: ವಿವರ ಚೆಕ್ ಮಾಡುವುದು ಹೇಗೆ?
ಈ ಬಗ್ಗೆ ಆದಾಯ ತೆರಿಗೆ ಇಲಾಖೆಯು ಟ್ವೀಟ್ ಮಾಡಿದೆ. "ಸಿಬಿಡಿಟಿ 1ನೇ ಏಪ್ರಿಲ್, 2021 ರಿಂದ 25ನೇ ಅಕ್ಟೋಬರ್, 2021 ರವರೆಗೆ 77.92 ಲಕ್ಷಕ್ಕೂ ಹೆಚ್ಚು ತೆರಿಗೆದಾರರಿಗೆ 1,02,952 ಕೋಟಿ ರೂ.ಗಳ ಮರುಪಾವತಿಯನ್ನು ನೀಡುತ್ತದೆ. ಆದಾಯ ತೆರಿಗೆ ಮರುಪಾವತಿಯ 76,21,956 ಪ್ರಕರಣಗಳಲ್ಲಿ 27,965 ಕೋಟಿ ರೂಪಾಯಿಯನ್ನು ಮರುಪಾವತಿ ಮಾಡಲಾಗಿದೆ ಹಾಗೂ 1,70,424 ಕಾರ್ಪೊರೇಟ್ ತೆರಿಗೆ ಮರುಪಾವತಿ ಪ್ರಕರಣಗಳಲ್ಲಿ 74,987 ಕೋಟಿ ರೂಪಾಯಿ ವಿತರಣೆ ಮಾಡಲಾಗಿದೆ ಎಂದು ಟ್ವೀಟ್ ಮೂಲಕ ಆದಾಯ ತೆರಿಗೆ ಇಲಾಖೆಯು ತಿಳಿಸಿದೆ.

ಎಪ್ರಿಲ್ 1 ರಿಂದ ಅಕ್ಟೋಬರ್ 18 ರವರೆಗಿನ ಆದಾಯ ತೆರಿಗೆ ಮರುಪಾವತಿಯು 92,961 ಕೋಟಿ ಆಗಲಿದೆ ಎಂದು ಸಿಬಿಡಿಟಿ ಹೇಳಿದ ಕೆಲವೇ ದಿನಗಳ ನಂತರ ಆದಾಯ ತೆರಿಗೆ ಇಲಾಖೆಯು ಈ ಐಟಿ ರಿಟರ್ನ್ ನೀಡಿರುವ ಬಗ್ಗೆ ತಿಳಿಸಿದೆ. ಭಾರತದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ತೆರಿಗೆದಾರರಿಗೆ 92,961 ಕೋಟಿ ರೂಪಾಯಿಗಳಿಗಿಂತ ಅಧಿಕ ಮೌಲ್ಯದ ತೆರಿಗೆ ಮರುಪಾವತಿಯನ್ನು ನೀಡಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಕಳೆದ ಗುರುವಾರ ಹೇಳಿದೆ.
ಸಿಬಿಡಿಟಿ ಒದಗಿಸಿರುವ ಈ ಅಂಕಿ ಅಂಶಗಳ ಪ್ರಕಾರ, 61,53,231 ಪ್ರಕರಣಗಳಲ್ಲಿ 23,026 ಕೋಟಿ ರೂಪಾಯಿಗಳ ಆದಾಯ ತೆರಿಗೆ ಮರುಪಾವತಿ ಮತ್ತು 1,69,355 ಪ್ರಕರಣಗಳಲ್ಲಿ 69,934 ಕೋಟಿ ರೂಪಾಯಿಗಳ ಕಾರ್ಪೊರೇಟ್ ತೆರಿಗೆ ಮರುಪಾವತಿಗಳನ್ನು ಮಾಡಲಾಗಿದೆ ಎಂದು ಅಧಿಕೃತ ಟ್ವಿಟರ್ ಪೋಸ್ಟ್ ತಿಳಿಸಲಾಗಿತ್ತು.
ಭಾರತ: 92,961 ಕೋಟಿ ರೂ. ತೆರಿಗೆ ಮರುಪಾವತಿ ನೀಡಿದ ಸಿಬಿಡಿಟಿ
ಇನ್ನು ಇದಕ್ಕೂ ಮುನ್ನ ಸುಮಾರು 23.99 ಲಕ್ಷಕ್ಕೂ ಅಧಿಕ ತೆರಿಗೆ ಪಾವತಿದಾರರಿಗೆ ಏಪ್ರಿಲ್ 1, 2021 ಮತ್ತು ಆಗಸ್ಟ್ 30, 2021 ರ ನಡುವೆ ಸುಮಾರು 67,401 ರೂಪಾಯಿ ಕೋಟಿ ಹಣವನ್ನು ರಿಫಂಡ್ ಮಾಡಲು ಆರಂಭ ಮಾಡಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಹೇಳಿತ್ತು.
ಐಟಿಆರ್ನಲ್ಲಿ ರಿಫಂಡ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
* ಮೊದಲು ನೀವು ಆದಾಯ ತೆರಿಗೆ ಇಲಾಖೆಯ ದಾಖಲು ಮಾಡುವ ಪೋರ್ಟಲ್ಗೆ ಲಾಗ್ ಇನ್ ಆಗಬೇಕು.
* View Returns/ Forms ಅನ್ನು ಆಯ್ಕೆ ಮಾಡಿಕೊಳ್ಳಬೇಕು
* My Account ಟಾಬ್ಗೆ ಹೋಗಿ Income Tax Returns ಆಯ್ಕೆ ಮಾಡಿಕೊಳ್ಳಿ
* ಬಳಿಕ submit ಮಾಡಿ
* ಬಳಿಕ ಸ್ವೀಕೃತಿ ಸಂಖ್ಯೆ ( acknowledgement number) ಮೇಲೆ ಕ್ಲಿಕ್ ಮಾಡಿ
* ಈ ಸಂದರ್ಭದಲ್ಲಿ ನಿಮ್ಮ ಆದಾಯ ತೆರಿಗೆ ಮರುಪಾವತಿಯ ವಿವರಗಳು ನಿಮಗೆ ಲಭಿಸಲಿದೆ.