For Quick Alerts
ALLOW NOTIFICATIONS  
For Daily Alerts

ಟಿಸಿಎಸ್ ಉದ್ಯೋಗಿಗಳಿಗೆ ವೇತನ ಹೆಚ್ಚಳ: 6 ತಿಂಗಳಲ್ಲಿ ಎರಡನೇ ಬಾರಿ!

|

ಭಾರತದ ಅತಿದೊಡ್ಡ ಐಟಿ ಸೇವಾ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಿಸುವುದಾಗಿ ಶುಕ್ರವಾರ ಘೋಷಿಸಿದೆ. ವೇತನ ಹೆಚ್ಚಳವು ಏಪ್ರಿಲ್ 1, 2021ರಿಂದ ಅನ್ವಯವಾಗಲಿದೆ ಎಂದು ಕಂಪನಿ ತಿಳಿಸಿದೆ.

 

ಏಪ್ರಿಲ್ 2021ರಿಂದ ನಮ್ಮ ಮಾನದಂಡಗಳಿಗೆ ಅನುಗುಣವಾಗಿ ಪ್ರಪಂಚದಾದ್ಯಂತ ನಮ್ಮ ಸಹವರ್ತಿಗಳಿಗೆ ವೇತನ ಹೆಚ್ಚಳವನ್ನು ನೀಡುವ ಹಾದಿಯಲ್ಲಿದ್ದೇವೆ'' ಎಂದು ಟಿಸಿಎಸ್‌ ವಕ್ತಾರರು ಮಿಂಟ್‌ಗೆ ದೃಢಪಡಿಸಿದ್ದಾರೆ.

ಟಿಸಿಎಸ್ ಉದ್ಯೋಗಿಗಳಿಗೆ ವೇತನ ಹೆಚ್ಚಳ: 6 ತಿಂಗಳಲ್ಲಿ ಎರಡನೇ ಬಾರಿ!

ಹಣಕಾಸು ವರ್ಷ 2021-22ರಲ್ಲಿ ವೇತನ ಹೆಚ್ಚಳವನ್ನು ಘೋಷಿಸಿದ ಮೊದಲ ಐಟಿ ಕಂಪನಿ ಎಂಬ ಹೆಗ್ಗಳಿಕೆಗೆ ಟಿಸಿಎಸ್ ಪಾತ್ರವಾಗಿದೆ. ಮುಂಬೈ ಮೂಲದ ಈ ಐಟಿ ಕಂಪನಿಯಲ್ಲಿ 4.7 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿದ್ದು ಕಂಪನಿ ನಿರ್ಧಾರದಿಂದ ಅವರಿಗೆ ಅನುಕೂಲವಾಗಲಿದೆ.

ಟಿಸಿಎಸ್ ಕಳೆದ ವರ್ಷದ ಅಕ್ಟೋಬರ್ 1ರಿಂದ ಜಾರಿಯಾಗುವಂತೆ ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಳ ಮಾಡಿತ್ತು. ಕಳೆದ ಡಿಸೆಂಬರ್ ತ್ರೈಮಾಸಿಕದಲ್ಲಿ ಟಿಸಿಎಸ್‌ ಶೇಕಡಾ 7ರಷ್ಟು ಹೆಚ್ಚಿಗೆ ನಿವ್ವಳ ಲಾಭ ಪಡೆದು 8,701 ಕೋಟಿ ರೂಪಾಯಿಯನ್ನು ದಾಖಲಿಸಿದೆ. ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲೂ ಟಿಸಿಎಸ್‌ ಉತ್ತಮ ಬೇಡಿಕೆ ಪಡೆದು ಲಾಭಗಳಿಸಿದೆ.

English summary

TCS Announces Salary Hike For Employees: 2nd Hike In 6 Months

India's largest software services firm Tata Consultancy Services (TCS) has Friday announced salary hikes for all its employees. It Would be effective from April 1.
Story first published: Saturday, March 20, 2021, 8:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X