For Quick Alerts
ALLOW NOTIFICATIONS  
For Daily Alerts

ಭಾರತ ಸಾಫ್ಟ್ ವೇರ್ ಕ್ಷೇತ್ರದ ಪಿತಾಮಹ ಫಖಿರ್ ಚಂದ್ ಕೊಹ್ಲಿ ನಿಧನ

By ಅನಿಲ್ ಆಚಾರ್
|

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸಂಸ್ಥಾಪಕ ಹಾಗೂ ಮೊದಲ ಸಿಇಒ ಫಖಿರ್ ಚಂದ್ ಕೊಹ್ಲಿ (96) ನವೆಂಬರ್ 26ರಂದು ನಿಧನರಾಗಿದ್ದಾರೆ. ಕೊಹ್ಲಿ ಅವರನ್ನು ಭಾರತದ ಐ.ಟಿ. (ಮಾಹಿತಿ ಮತ್ತು ತಂತ್ರಜ್ಞಾನ) ಕ್ಷೇತ್ರದ ಪಿತಾಮಹ ಅಂತಲೇ ಕರೆಯಲಾಗುತ್ತದೆ. ಟಾಟಾ- ಐಬಿಎಂ ಭಾಗವಾಗಿ 1991ರಲ್ಲಿ ಐಬಿಎಂ ಅನ್ನು ಭಾರತಕ್ಕೆ ಕರೆತರುವಲ್ಲಿ ಕೊಹ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

 

ಆಕ್ಸೆಂಚರ್ ಕಂಪೆನಿಯನ್ನು ಪಕ್ಕಕ್ಕೆ ಸರಿಸಿ ಟಿಸಿಎಸ್ ಬರೆದ ಆ ಹೊಸ ದಾಖಲೆ ಏನು ಗೊತ್ತಾ?

ಅದು ಹಾರ್ಡ್ ವೇರ್ ಉತ್ಪಾದಕ ಮತ್ತು ಸಪೋರ್ಟ್ ಭಾರತದಲ್ಲಿ ಜಂಟಿ ಕಾರ್ಯಾಚರಣೆ ಆರಂಭಿಸುವುದರ ಭಾಗವಾಗಿತ್ತು. ಭಾರತದಲ್ಲಿನ ತಂತ್ರಜ್ಞಾನ ಕ್ರಾಂತಿಗೆ ನಾಂದಿ ಹಾಡಿದ ಎಫ್.ಸಿ. ಕೊಹ್ಲಿ ಅವರನ್ನು ಸಾಫ್ಟ್ ವೇರ್ ಕ್ಷೇತ್ರದ ಪಿತಾಮಹ ಎಂದು ಕರೆಯಲಾಗುತ್ತದೆ. ಟಿಸಿಎಸ್ ಮೊದಲ ಸಿಇಒ ಆಗಿ ಕಾರ್ಯ ನಿರ್ವಹಿಸಿದ ಅವರು, ಭಾರತದಲ್ಲಿ ನೂರು ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಐಟಿ ಕ್ಷೇತ್ರ ಬೆಳೆಯಲು ಕಾರಣರಾದರು.

ಭಾರತ  ಸಾಫ್ಟ್ ವೇರ್ ಕ್ಷೇತ್ರದ ಪಿತಾಮಹ ಫಖಿರ್ ಚಂದ್ ಕೊಹ್ಲಿ ನಿಧನ

ನಿವೃತ್ತಿ ಪಡೆದ ನಂತರ ಕೊಹ್ಲಿ ಅವರು ವಯಸ್ಕರರ ಶಿಕ್ಷಣ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕೊಹ್ಲಿ ಅವರು 1951ರಲ್ಲಿ ಟಾಟಾ ಎಲೆಕ್ಟ್ರಿಕ್ ಕಂಪೆನೀಸ್ ಸೇರಿದರು. ಆ ನಂತರ 1970ನೇ ಇಸವಿಯಲ್ಲಿ ಕಂಪೆನಿಯ ನಿರ್ದೇಶಕರಾದರು. ಅದಾದ ಮೇಲೆ ಟಿಸಿಎಸ್ ಗೆ ಮೊದಲ ಸಿಇಒ ಆಗಿ ನೇಮಕ ಆದರು. 1999ನೇ ಇಸವಿಯಲ್ಲಿ ತಮ್ಮ 75ನೇ ವಯಸ್ಸಿನಲ್ಲಿ ನಿವೃತ್ತರಾದರು.

English summary

TCS Founder And First CEO Faqir Chand Kohli Passed Away

Father of Indian IT industry, TCS Founder And First CEO Faqir Chand Kohli (96) passed away on November 26, 2020.
Story first published: Thursday, November 26, 2020, 20:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X