For Quick Alerts
ALLOW NOTIFICATIONS  
For Daily Alerts

ಸುಮಾರು 5,550 ಕೋಟಿ ರು ಡಿವಿಡೆಂಡ್ ಘೋಷಿಸಿದ ಟಿಸಿಎಸ್

|

ಭಾರತದ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) 2022ನೇ ಸಾಲಿನ ಆರ್ಥಿಕ ವರ್ಷಕ್ಕೆ ಸುಮಾರು 5,550 ಕೋಟಿ ರು ಡಿವಿಡೆಂಡ್ ಘೋಷಿಸಿದೆ. ಟಾಟಾ ಸಮೂಹ ಸಂಸ್ಥೆಯ ಅತ್ಯಧಿಕ ಷೇರುದಾರರಾದ ಟಾಟಾ ಸನ್ಸ್ ಪಾಲಿಗೆ ಶೇ 70ರಷ್ಟು ಡಿವಿಡೆಂಡ್ ಸಿಗಲಿದೆ.

 

2021ರ ಆರ್ಥಿಕ ವರ್ಷದಲ್ಲಿ ಟಿಸಿಎಸ್ ತನ್ನ ಷೇರುದಾರರಿಗೆ 30, 664 ಕೋಟಿರು ರು ರಿಟರ್ನ್ಸ್ ನೀಡಿದೆ. ಐಟಿ ಸರ್ವೀಸ್ ನಲ್ಲಿ ಹೆಚ್ಚಿನ ಪಾಲು ಹೊಂದಿರುವ ಟಾಟಾ ಸನ್ಸ್‌ಗೆ ಲಾಭ, ಆದಾಯಕ್ಕೂ ಟಿಸಿಎಸ್ ಹೆಚ್ಚಿನ ಕೊಡುಗೆ ನೀಡಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಏಪ್ರಿಲ್ 12ರಂದು ತನ್ನ ನಾಲ್ಕನೇ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದೆ. ಜೊತೆಗೆ ಅಂತಿಮ ಡಿವಿಡೆಂಡ್ 15 ರು ಪ್ರತಿ ಷೇರಿನಂತೆ ಘೋಷಿಸಿದೆ. ಕಳೆದ ಮೂರು ತ್ರೈಮಾಸಿಕದಲ್ಲಿ 5ರು ಪ್ರತಿ ಷೇರು, 12 ರು ಹಾಗೂ 6 ರು ಪ್ರತಿ ಷೇರಿನಂತೆ ಡಿವಿಡೆಂಡ್ ಘೋಷಿಸಿತ್ತು.

ಸುಮಾರು 5,550 ಕೋಟಿ ರು ಡಿವಿಡೆಂಡ್ ಘೋಷಿಸಿದ ಟಿಸಿಎಸ್

4ನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ನಿವ್ವಳಲಾಭದಲ್ಲಿ ಶೇ 14.9 ರಷ್ಟು ಏರಿಕೆ ಕಂಡು 9,246 ಕೋಟಿ ರೂ. ಬಂದಿದೆ. ಕಂಪನಿಯ ಆದಾಯ ಶೇ 9.4 ರಷ್ಟು ಏರಿಕೆ ಕಂಡು 43,705 ಕೋಟಿ ರೂ ಆಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ 19,388 ಹೊಸ ನೇಮಕಾತಿಯನ್ನು ಸಂಸ್ಥೆ ಸಾಧಿಸಿದೆ. ಒಟ್ಟಾರೆ, 4.88 ಲಕ್ಷ ಸಿಬ್ಬಂದಿ ಹೊಂದಿದ್ದು, ಶೀಘ್ರದಲ್ಲೇ 5 ಲಕ್ಷ ಉದ್ಯೋಗಿಗಳನ್ನು ಹೊಂದುವ ನಿರೀಕ್ಷೆಯಿದೆ ಎಂದು ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಡ್ ಹೇಳಿದ್ದಾರೆ.

English summary

TCS to pay Rs 5,550 cr dividend in FY22

Tata Consultancy Services (TCS) will pay a Rs 5,550-crore dividend, of which more than 70% will go to its largest shareholder Tata Sons.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X