For Quick Alerts
ALLOW NOTIFICATIONS  
For Daily Alerts

ಟೆಸ್ಲಾ ಕಾರುಗಳನ್ನು ಬಿಟ್‌ಕಾಯಿನ್ ಮೂಲಕ ಖರೀದಿಸಬಹುದು: ಎಲೋನ್ ಮಸ್ಕ್‌

|

ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾ ಕಂಪನಿಯು ದೊಡ್ಡ ಕೊಡುಗೆಯನ್ನು ಘೋಷಿಸಿದೆ. ಟೆಸ್ಲಾ ವಾಹನಗಳನ್ನು ಕ್ರಿಪ್ಟೋಕರೆನ್ಸಿಯಾದ ಬಿಟ್‌ಕಾಯಿನ್ ಮೂಲಕ ಖರೀದಿಸಬಹುದು ಎಂದು ಟೆಸ್ಲಾ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್‌ ಹೇಳಿದ್ದಾರೆ.

 

ಮಾರ್ಚ್‌ 25ರ ಬಿಟ್‌ಕಾಯಿನ್‌ ರೇಟ್‌ ಎಷ್ಟಿದೆ?

ಕಳೆದ ಕೆಲವು ವಾರಗಳ ಹಿಂದೆ ಬಿಟ್‌ಕಾಯಿನ್‌ನಲ್ಲಿ 1.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿರುವ ಟೆಸ್ಲಾ ಕಂಪನಿಯು ಪ್ರಕಟಿಸಿತ್ತು. ಇದಾದ ಬಳಿಕ ಬಿಟ್‌ಕಾಯಿನ್‌ ರೇಟ್‌ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು.

ಟೆಸ್ಲಾ ಕಾರುಗಳನ್ನು ಬಿಟ್‌ಕಾಯಿನ್ ಮೂಲಕ ಖರೀದಿಸಬಹುದು!

ಇದೀಗ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಕಂಪನಿಯು ತನ್ನ ಎಲೆಕ್ಟ್ರಿಕ್ ಕಾರುಗಳಿಗೆ ಪಾವತಿಯಾಗಿ ಬಿಟ್‌ಕಾಯಿನ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದೆ ಎಂದು ಘೋಷಿಸಿದರು. 'ನೀವು ಈಗ ಟೆಸ್ಲಾ ಕಾರುಗಳನ್ನು ಬಿಟ್‌ಕಾಯಿನ್‌ನೊಂದಿಗೆ ಖರೀದಿಸಬಹುದು' ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ಮಸ್ಕ್ ಬಿಟ್‌ಕಾಯಿನ್ ಪಾವತಿಯನ್ನು ಅಮೆರಿಕಾ ಹೊರಗಿನ ಗ್ರಾಹಕರಿಗೆ ಸಹ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. ಪಾವತಿಗಾಗಿ ಕಂಪನಿಯು ಆಂತರಿಕ ಮತ್ತು ಮುಕ್ತ ಸಾಫ್ಟ್‌ವೇರ್ ಅನ್ನು ಮಾತ್ರ ಬಳಸುತ್ತದೆ.

ಟೆಸ್ಲಾ ಸೇರಿದಂತೆ ಹಲವಾರು ಕಂಪನಿಗಳು ಬಿಟ್‌ಕಾಯಿನ್ ಅನ್ನು ಡಿಜಿಟಲ್ ಕರೆನ್ಸಿಯಾಗಿ ಅನುಮೋದಿಸಿವೆ. ಟೆಸ್ಲಾ ಮಾತ್ರವಲ್ಲದೆ, ದೈತ್ಯ ವಿಮಾ ಕಂಪನಿ ಮಾಸ್-ಮ್ಯೂಚುಯಲ್, ಗ್ಯಾಲಕ್ಸಿ ಡಿಜಿಟಲ್ ಹೋಲ್ಡಿಂಗ್, ಟ್ವಿಟರ್ ಸಿಇಒ ಜಾಕ್ ಡಾರ್ಸಿಯ ಪಾವತಿ ಕಂಪನಿ ಸ್ಕ್ವೈರ್ ಸಹ ಬಿಟ್‌ಕಾಯಿನ್‌ನಲ್ಲಿ ದೊಡ್ಡ ಹೂಡಿಕೆ ಮಾಡಿದೆ.

English summary

Tesla Cars Can Now Be Bought Using Bitcoin: Elon Musk

Tesla CEO Elon Musk said on Wednesday the company's electric vehicles can now be bought using bitcoin and the option will be available outside the United States later this year.
Story first published: Thursday, March 25, 2021, 12:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X