For Quick Alerts
ALLOW NOTIFICATIONS  
For Daily Alerts

ಟೆಸ್ಲಾ ಸಿಇಒ ಎಲಾನ್ ಮಸ್ಕ್ ಆಸ್ತಿ ಒಂದೇ ದಿನದಲ್ಲಿ 66,168 ಕೋಟಿ ರು. ಏರಿಕೆ

|

ಶ್ರೀಮಂತಿಕೆ ಲೆಕ್ಕಾಚಾರ ಈಗೆಲ್ಲ ದಿನದಿನಕ್ಕೂ, ಗಂಟೆಗಂಟೆಗೂ ಬದಲಾಗುವ ಹಾಗೆ ಆಗಿದೆ. ಮೊನ್ನೆ ಶುಕ್ರವಾರ (ಡಿಸೆಂಬರ್ 18, 2020) ಎಲಾನ್ ಮಸ್ಕ್ ಆಸ್ತಿ ಒಂದೇ ದಿನದಲ್ಲಿ 900 ಕೋಟಿ ಯುಎಸ್ ಡಿ (ಭಾರತದ ರುಪಾಯಿಗಳಲ್ಲಿ 66,168 ಕೋಟಿ) ಏರಿಕೆ ಕಂಡಿತು. ಅದಕ್ಕೆ ಕಾರಣ ಆಗಿದ್ದು ಟೆಸ್ಲಾ ಕಂಪೆನಿಯ ಷೇರು ಬೆಲೆ ಹೊಸ ಎತ್ತರಕ್ಕೆ ಏರಿದ್ದು. ಇನ್ನೇನು S&P 500 ಸೂಚ್ಯಂಕದಲ್ಲಿ ಟೆಸ್ಲಾ ಕಂಪೆನಿ ಷೇರು ಸೇರ್ಪಡೆ ಆಗಲಿರುವ ಹಿನ್ನೆಲೆಯಲ್ಲಿ 6% ಹೆಚ್ಚಳವಾಗಿ, $ 695 ತಲುಪಿತು.

 

ಎಲೆಕ್ಟ್ರಿಕಲ್ ಕಾರು ತಯಾರಿಕಾ ಕಂಪೆನಿಯಾದ ಟೆಸ್ಲಾದ ಷೇರು ಡಿಸೆಂಬರ್ 21ನೇ ತಾರೀಕಿಗೆ S&P 500 ಸೂಚ್ಯಂಕಕ್ಕೆ ಸೇರ್ಪಡೆ ಆಗಲಿದೆ. ಈ ಸೂಚ್ಯಂಕಕ್ಕೆ ಸೇರ್ಪಡೆ ಆಗುತ್ತಿರುವ ಅತ್ಯಂತ ಮೌಲ್ಯಯುತ ಸ್ಟಾಕ್ ಎಂಬ ಶ್ರೇಯ ಟೆಸ್ಲಾಗೆ ಸಿಗಲಿದೆ. ಇದೊಂದೇ ವರ್ಷದಲ್ಲಿ ಟೆಸ್ಲಾ ಕಂಪೆನಿ ಷೇರಿನ ಮೌಲ್ಯ 700%ಗೂ ಹೆಚ್ಚಾಗಿದೆ.

ಫಾರ್ಚೂನ್ 2020 ಉದ್ಯಮಿಗಳ ಪಟ್ಟಿಯಲ್ಲಿ ಎಲಾನ್ ಮಸ್ಕ್ ಟಾಪ್

ಈ ಮಧ್ಯೆ, ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಟೆಸ್ಲಾ ಸಿಇಒ ಎಲಾನ್ ಮಸ್ಕ್ ಆಸ್ತಿ ಮೌಲ್ಯ $ 167.3 ಬಿಲಿಯನ್ (12,29,989.6 ಕೋಟಿ ರುಪಾಯಿಗೂ ಹೆಚ್ಚು) ತಲುಪಿದೆ. ಈ ಪೈಕಿ $ 139.7 ಬಿಲಿಯನ್ ಆಸ್ತಿ ಇದೊಂದೇ ವರ್ಷದಲ್ಲಿ ಹೆಚ್ಚಳವಾಗಿದೆ. ಈಗ ವಿಶ್ವದ ಎರಡನೇ ಶ್ರೀಮಂತ ಎಂಬ ಕಿರೀಟ ಎಲಾನ್ ಮಸ್ಕ್ ಗೆ ಸೇರಿದೆ.

ಟೆಸ್ಲಾ ಸಿಇಒ ಎಲಾನ್ ಮಸ್ಕ್ ಆಸ್ತಿ ಒಂದೇ ದಿನ 66,168 ಕೋಟಿ ರು. ಏರಿಕೆ

ಅಮೆಜಾನ್ ಸಿಇಒ ಜೆಫ್ ಬೆಜೋಸ್ ವಿಶ್ವದ ಅತ್ಯಂತ ಸಿರಿವಂತರಾಗಿ ಮುಂದುವರಿದಿದ್ದು, ಶುಕ್ರವಾರದ ದಿನದ ಕೊನೆಗೆ ನಿವ್ವಳ ಆಸ್ತಿ $187 ಬಿಲಿಯನ್ ಆಸ್ತಿ ಹೊಂದಿದ್ದಾರೆ. ಮೂರನೇ ಸ್ಥಾನದಲ್ಲಿ ಬಿಲ್ ಗೇಟ್ಸ್ ಆಸ್ತಿ $ 131 ಬಿಲಿಯನ್, ನಾಲ್ಕನೇ ಸ್ಥಾನದಲ್ಲಿ ಬರ್ನಾರ್ಡ್ ಅರ್ನಾಲ್ಟ್ $ 110 ಬಿಲಿಯನ್, ಮಾರ್ಕ್ ಝುಕರ್ ಬರ್ಗ್ $ 105 ಬಿಲಿಯನ್ ಆಸ್ತಿ ಹೊಂದಿದ್ದಾರೆ.

English summary

Tesla CEO Elon Musk Wealth Increased By Rs 66168 Crore In One Day

Tesla company share hit new record on Friday (December 18, 2020), Elon Musk wealth 9 billion USD (Rs 66168 Crore) in one day.
Story first published: Sunday, December 20, 2020, 11:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X