For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನ ಲ್ಯಾವೆಲ್ಲೆ ರಸ್ತೆ ವಿಳಾಸದಲ್ಲಿ ಟೆಸ್ಲಾ ಕಂಪೆನಿ ನೋಂದಣಿ

By ಅನಿಲ್ ಆಚಾರ್
|

ಟೆಸ್ಲಾ ಇಂಡಿಯಾವು ಭಾರತದಲ್ಲಿ ಕಂಪೆನಿಯಾಗಿ ನೋಂದಣಿ ಆಗಿದೆ. ರಿಜಿಸ್ಟ್ರಾರ್ ಆಫ್ ಕಂಪೆನಿ (RoC) ವೆಬ್ ಸೈಟ್ ಪ್ರಕಾರ, ಟೆಸ್ಲಾ ಇಂಡಿಯಾ ಮೋಟಾರ್ಸ್ ಅಂಡ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಜನವರಿ 8, 2021ರಲ್ಲಿ ಇನ್ ಕಾರ್ಪೊರೇಟ್ ಆಗಿದೆ. ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ನೋಂದಾಯಿತ ವಿಳಾಸ ಇದೆ.

 

5 ವರ್ಷ ಕರ್ನಾಟಕ ನಡೆಸುವಷ್ಟು ಹಣ ಇರುವ ಮಸ್ಕ್ ಈಗ ವಿಶ್ವದ ನಂ. 1 ಶ್ರೀಮಂತ

ಹೊಸದಾಗಿ ಇನ್ ಕಾರ್ಪೊರೇಟ್ ಆದ ಕಂಪೆನಿಯಲ್ಲಿ ಟೆಸ್ಲಾ ಮುಖ್ಯ ಲೆಕ್ಕಾಧಿಕಾರಿ ವೈಭವ್ ತನೇಜಾ, ಜಾಗತಿಕ ವ್ಯವಹಾರ ಮತ್ತು ಹೊಸ ಮಾರುಕಟ್ಟೆಯ ಹಿರಿಯ ನಿರ್ದೇಶಕ ಡೇವಿಡ್ ಫೈನ್ ಸ್ಟೀನ್ ಅವರನ್ನು ನಿರ್ದೇಶಕರಾಗಿ ಹೆಸರಿಸಲಾಗಿದೆ. ಕಳೆದ ತಿಂಗಳ ಆರಂಭದಲ್ಲಿ ಎಲಾನ್ ಮಸ್ಕ್ ಘೋಷಣೆ ಮಾಡಿದಂತೆ, 2021ರಲ್ಲಿ ಭಾರತದಲ್ಲಿ ಟೆಸ್ಲಾ ಕಾರ್ಯಾರಂಭ ಮಾಡಲಿದೆ.

ಬೆಂಗಳೂರಿನ ಲ್ಯಾವೆಲ್ಲೆ ರಸ್ತೆ ವಿಳಾಸದಲ್ಲಿ ಟೆಸ್ಲಾ ಕಂಪೆನಿ ನೋಂದಣಿ

ಈ ಮಧ್ಯೆ ಟಾಟಾ ಮೋಟಾರ್ಸ್ ಮತ್ತು ಟೆಸ್ಲಾ ಮಧ್ಯೆ ಎಲೆಕ್ಟ್ರಿಕ್ ಕಾರು ತಯಾರಿಕೆ ಒಪ್ಪಂದ ಆಗಬಹುದು ಎಂಬ ಸುದ್ದಿ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಟಾಟಾ ಮೋಟಾರ್ಸ್ ಕಂಪೆನಿ ಷೇರಿನ ಬೆಲೆಯಲ್ಲಿ ಭರ್ಜರಿ ಏರಿಕೆ ಆಗುತ್ತಿದೆ. ಸಿಎನ್ ಬಿಸಿ- ಟಿವಿ18 ವರದಿ ಪ್ರಕಾರ, ಕರ್ನಾಟಕದಲ್ಲಿ ಉತ್ಪಾದನಾ ಘಟಕ ಆರಂಭಿಸುವಂತೆ ವಿವಿಧ ಸ್ಥಳಗಳ ಆಫರ್ ಮಾಡಲಾಗಿದೆ. ಜತೆಗೆ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಮತ್ತು ಆಂಧ್ರಪ್ರದೇಶ ಸರ್ಕಾರದ ಜತೆಗೂ ಟೆಸ್ಲಾ ಸಂಪರ್ಕದಲ್ಲಿದೆ.

English summary

Tesla Commences India's Operation; Registered With Bengaluru Address

World's leading electric car manufacturer Tesla commences India's operation and Registered as company in Bengaluru address.
Story first published: Tuesday, January 12, 2021, 23:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X