For Quick Alerts
ALLOW NOTIFICATIONS  
For Daily Alerts

ಬೆಂಗಳೂರು ಸೇರಿದಂತೆ 3 ಪ್ರಮುಖ ನಗರಗಳಲ್ಲಿ ಟೆಸ್ಲಾ ಶೋ ರೂಂಗಾಗಿ ಸ್ಥಳ ಹುಡುಕಾಟ

|

ಜಗತ್ತಿನ ಅತಿದೊಡ್ಡ ಎಲೆಕ್ಟ್ರಿಕ್ ಕಾರುಗಳ ಉತ್ಪಾದಕ ಟೆಸ್ಲಾ ಇಂಕ್‌ ಮೂರು ಭಾರತೀಯ ನಗರಗಳಲ್ಲಿ ಶೋ ರೂಂಗಳನ್ನು ತೆರೆಯಲು ಸ್ಥಳ ಹುಡುಕಾಟ ನಡೆಸುತ್ತಿದೆ ಎಂದು ಮೂಲಗಳು ರಾಯಿಟರ್ಸ್‌ಗೆ ತಿಳಿಸಿದೆ.

 

ಭಾರತಕ್ಕೆ ತನ್ನ ಯೋಜಿತ ಪ್ರವೇಶಕ್ಕೂ ಮುಂಚಿತವಾಗಿ ತನ್ನ ಲಾಬಿ ಮತ್ತು ವ್ಯವಹಾರ ಪ್ರಯತ್ನಗಳನ್ನು ಮುನ್ನಡೆಸಲು ಕಾರ್ಯನಿರ್ವಾಹಕನನ್ನು ನೇಮಿಸಿಕೊಂಡಿದೆ ಎಂದು ವರದಿಯಾಗಿದೆ.

ಟೆಸ್ಲಾ ಶೋ ರೂಂಗಾಗಿ ಬೆಂಗಳೂರಿನಲ್ಲಿ ಸ್ಥಳ ಹುಡುಕಾಟ

ಜನವರಿಯಲ್ಲಿ ಎಲೆಕ್ಟ್ರಿಕ್ ಕಾರು ತಯಾರಕರು ಭಾರತದಲ್ಲಿ ಸ್ಥಳೀಯ ಕಂಪನಿಯನ್ನು ನೋಂದಾಯಿಸಿಕೊಂಡರು. ಮಾರುಕಟ್ಟೆ ಬಂಡವಾಳೀಕರಣದ ಮೂಲಕ ವಿಶ್ವದ ಅತ್ಯಮೂಲ್ಯ ವಾಹನ ತಯಾರಕರಾದ ಟೆಸ್ಲಾ, ರಾಜಧಾನಿ ನವದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಶೋ ರೂಂಗಳು ಮತ್ತು ಸೇವಾ ಕೇಂದ್ರಗಳನ್ನು ತೆರೆಯಲು ತಲಾ 20,000 ರಿಂದ 30,000 ಚದರ ಅಡಿಗಳಷ್ಟು ದೊಡ್ಡದಾದ ವಾಣಿಜ್ಯ ಆಸ್ತಿಗಳನ್ನು ಹುಡುಕುತ್ತಿದೆ ಎನ್ನಲಾಗಿದೆ.

ಪ್ರತ್ಯೇಕವಾಗಿ, ಟೆಸ್ಲಾ ಭಾರತದ ಹೂಡಿಕೆ ಪ್ರಚಾರ ಸಂಸ್ಥೆ ಇನ್ವೆಸ್ಟ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಮನುಜ್ ಖುರಾನಾ ಅವರನ್ನು ದೇಶದಲ್ಲಿ ತನ್ನ ನೀತಿ ಮತ್ತು ವ್ಯವಹಾರ ಅಭಿವೃದ್ಧಿ ಪ್ರಯತ್ನಗಳನ್ನು ಮುನ್ನಡೆಸುವ ವ್ಯಕ್ತಿಯಾಗಿ ಆಯ್ಕೆ ಮಾಡಿಕೊಂಡಿದೆ.

ಭಾರತದಲ್ಲಿ ವಾಯು ಮಾಲಿನ್ಯ ಪ್ರಮಾಣ ತಗ್ಗಿಸಲು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದ್ದು, ಟೆಸ್ಲಾ ಆರ್ & ಡಿ ಕೇಂದ್ರದಿಂದ ದೊಡ್ಡ ಪ್ರಭಾವವನ್ನು ಪಡೆಯಬಹುದು.

English summary

Tesla Looks For Showroom Space In Bengaluru

Tesla Inc is scouting for locations to open showrooms in three Indian cities and has hired an executive to lead its lobbying and business efforts ahead of its planned entry into the country
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X