For Quick Alerts
ALLOW NOTIFICATIONS  
For Daily Alerts

ಸ್ಕೋಡಾದಿಂದ1 ಬಿಲಿಯನ್ ಯುರೋ ಹೂಡಿಕೆ, ಹೊಸ ಸ್ಲಾವಿಯಾ ಘೋಷಣೆ

|

ಬೆಂಗಳೂರು, ಅಕ್ಟೋಬರ್ 27: ಕುಶಾಕ್ ಬಿಡುಗಡೆಯ ನಂತರ, ಸ್ಕೋಡಾ ಈ ವರ್ಷದ ಕೊನೆಯಲ್ಲಿ ಭಾರತೀಯ ಮಾರುಕಟ್ಟೆಗೆ ತನ್ನ ಉತ್ಪನ್ನ ಪ್ರಚಾರದಲ್ಲಿ ಎರಡನೇ ಹಂತವನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಜೆಕ್ ಕಾರು ತಯಾರಕ ಕಂಪನಿಯ ಇತ್ತೀಚಿನ ಮಾದರಿ ಸ್ಲಾವಿಯಾ, ಸೆಡಾನ್ ಶ್ರೇಣಿಗಳನ್ನು ಪೂರ್ಣಗೊಳಿಸುತ್ತದೆ ಮತ್ತು ಬ್ರ್ಯಾಂಡ್‌ಗೆ ಪೂರಕವಾದ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ. ಮಧ್ಯಮ ಗಾತ್ರದ ಪ್ರೀಮಿಯಂ ಸೆಡಾನ್ ಅನ್ನು ಎರಡು ಶಕ್ತಿಶಾಲಿ ಮತ್ತು ಪರಿಣಾಮಕಾರಿ ಟಿಎಸ್‌ಐ ಎಂಜಿನ್‌ಗಳ ಆಯ್ಕೆಯೊಂದಿಗೆ ನೀಡಲಾಗುವುದು. ಜೊತೆಗೆ ಆರು ಏರ್‌ಬ್ಯಾಗ್‌ಗಳು ಮತ್ತು ಹಲವಾರು ಅಸಿಸ್ಟೆನ್ಸ್‌ ಸಿಸ್ಟಮ್‌ಗಳನ್ನು ಒಳಗೊಂಡಿರುವ ಸಮಗ್ರ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಸ್ಕೋಡಾ ಆಟೋ ನೇತೃತ್ವದ ಇಂಡಿಯಾ 2.0 ಯೋಜನೆಯಲ್ಲಿ ವೋಕ್ಸ್‌ವ್ಯಾಗನ್ ಗ್ರೂಪ್ ಒಂದು ಬಿಲಿಯನ್ ಯುರೋಗಳನ್ನು ಹೂಡಿಕೆ ಮಾಡುತ್ತಿದೆ.

 

ಸ್ಕೋಡಾ ಆಟೋ ಸಿಇಒ ಥಾಮಸ್ ಶಾಫರ್ ಹೇಳುವಂತೆ "ನಮ್ಮ ಕಾಂಪ್ಯಾಕ್ಟ್ ಎಸ್‌ಯುವಿ ಕುಶಾಕ್‌ನ ಯಶಸ್ವಿ ಬಿಡುಗಡೆಯ ನಂತರ, ನಾವು ಈಗ ಈ ಇತ್ತೀಚಿನ ಮಾದರಿಯಾದ ಸ್ಕೋಡಾ ಸ್ಲಾವಿಯಾಗೆ ಸಿದ್ಧವಾಗುತ್ತಿದ್ದೇವೆ. ಈ ಮಧ್ಯಮ ಗಾತ್ರದ ಪ್ರೀಮಿಯಂ ಸೆಡಾನ್ ಭಾರತದಲ್ಲಿನ ಹೊಸ ಗ್ರಾಹಕರನ್ನು ಆಕರ್ಷಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಸ್ಕೋಡಾ ಆಟೋವನ್ನು ಭಾರತದಲ್ಲಿ ಪ್ರಮುಖ ಯುರೋಪಿಯನ್ ಕಾರು ತಯಾರಕ ಕಂಪನಿಯನ್ನಾಗಿ ಅಭಿವೃದ್ಧಿಪಡಿಸುವ ನಮ್ಮ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವತ್ತ ನಾವು ಮುಂದಿನ ಹೆಜ್ಜೆಯನ್ನು ಇಡುತ್ತಿದ್ದೇವೆ.

ಸ್ಕೋಡಾ ಆಟೋ ಇಂಡಿಯಾದ ಬ್ರ್ಯಾಂಡ್ ಡೈರೆಕ್ಟರ್ ಝಾಕ್ ಹೋಲಿಸ್ ಹೇಳುವಂತೆ "ನಮ್ಮ ಹೊಸ ಸ್ಲಾವಿಯಾದೊಂದಿಗೆ, ನಾವು ಅತ್ಯುತ್ತಮವಾದ ವಿನ್ಯಾಸ, ನಿರ್ಮಾಣ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಡ್ರೈವಿಂಗ್ ಡೈನಾಮಿಕ್ಸ್ ಅನ್ನು ನೀಡುವ ವೈಶಿಷ್ಟ್ಯ ಒಳಗೊಂಡ ವಾಹನವನ್ನು ಪ್ರಾರಂಭಿಸುತ್ತಿದ್ದೇವೆ. ಮಧ್ಯಮ ಗಾತ್ರದ ಪ್ರೀಮಿಯಂ ಸೆಡಾನ್‌ನ ಪ್ರಯೋಜನಗಳನ್ನು ಸ್ಕೋಡಾದ ಭಾವನಾತ್ಮಕ ವಿನ್ಯಾಸ ಭಾಷೆ, ಆಧುನಿಕ ತಂತ್ರಜ್ಞಾನ ಮತ್ತು ಅತ್ಯಾಧುನಿಕ ನೆರವು ವ್ಯವಸ್ಥೆಗಳೊಂದಿಗೆ ಸ್ಲಾವಿಯಾ ಅನ್ನು ಸಂಯೋಜಿಸುತ್ತದೆ.

ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ

ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ

ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಗುರುಪ್ರತಾಪ್ ಬೋಪರಾಯ್ ವಿವರಿಸುವಂತೆ "ಹೊಸ ಸ್ಕೋಡಾ ಸ್ಲಾವಿಯಾದೊಂದಿಗೆ, ನಾವು ಇಂಡಿಯಾ 2.0 ಯೋಜನೆಯಡಿಯಲ್ಲಿ ನಮ್ಮ ಮಾಡೆಲ್ ಅಭಿಯಾನವನ್ನು ಮುಂದುವರಿಸುತ್ತಿದ್ದೇವೆ. ದೃಢವಾದ ನಿರ್ಮಾಣ, ಸುರಕ್ಷತೆ, ಉತ್ತಮ ಗುಣಮಟ್ಟ ಮತ್ತು ಹಣಕ್ಕೆ ಉತ್ತಮ ಮೌಲ್ಯದಿಂದಾಗಿ ಭಾರತೀಯ ಗ್ರಾಹಕರಿಂದ ಹೆಚ್ಚು ಮೆಚ್ಚುಗೆ ಪಡೆದಿರುವ ಕುಶಾಕ್‌ಗೆ ಪೂರಕವಾಗಿ, ಸ್ಲಾವಿಯಾ ಈ ಎಲ್ಲಾ ಅಂಶಗಳನ್ನು ಒದಗಿಸುತ್ತದೆ ಮತ್ತು ಈ ವಿಭಾಗದಲ್ಲಿ ವಿನ್ಯಾಸ ಮತ್ತು ಕಾರ್ಯಕ್ಷಮತೆಗಾಗಿ ಹೊಸ ಮಾನದಂಡಗಳನ್ನು ನಿಗದಿಸುತ್ತದೆ. ಭಾರತ ಮತ್ತು ವಿಶ್ವಕ್ಕಾಗಿ ಭಾರತದಲ್ಲಿ ನಿರ್ಮಿಸಲಾಗಿರುವ ನಮ್ಮ ಇತ್ತೀಚಿನ ಮಾಡೆಲ್, ಜಾಗತಿಕ ತಂಡದ ಸಹಯೋಗದೊಂದಿಗೆ ಅದರ ಅಭಿವೃದ್ಧಿಗೆ ಗಣನೀಯವಾಗಿ ಕೊಡುಗೆ ನೀಡಿದ ನಮ್ಮ ಸ್ಥಳೀಯ ಎಂಜಿನಿಯರ್‌ಗಳ ಕೌಶಲ್ಯ ಮತ್ತು ಪರಿಣತಿಯನ್ನು ವಿವರಿಸುತ್ತದೆ.

ಹೊಚ್ಚಹೊಸ ಸ್ಲಾವಿಯಾ: ಸ್ಕೋಡಾ ಆಟೋ ಪರಂಪರೆಗೆ ಗೌರವ

ಹೊಚ್ಚಹೊಸ ಸ್ಲಾವಿಯಾ: ಸ್ಕೋಡಾ ಆಟೋ ಪರಂಪರೆಗೆ ಗೌರವ

ಮಧ್ಯಮ ಗಾತ್ರದ ಈ ಪ್ರೀಮಿಯಂ ಸೆಡಾನ್‌ನ ಮಾಡೆಲ್‌ ಹೆಸರು ಮ್ಲಾಡಾ ಬೋಲೆಸ್ಲಾವ್‌ನಲ್ಲಿ ಲಾರಿನ್ ಮತ್ತು ಕ್ಲೆಮೆಂಟ್‌ನಲ್ಲಿ ಸ್ಕೋಡಾದ ಆರಂಭವನ್ನು ನೆನಪಿಸುತ್ತದೆ. ಕಂಪನಿಯು ಸ್ಥಾಪನೆಯಾದ ಕೇವಲ ಒಂದು ವರ್ಷದ ನಂತರ, 1896 ರಲ್ಲಿ, ವ್ಯಾಕ್ಲಾವ್ ಲಾರಿನ್ ಮತ್ತು ವ್ಯಾಕ್ಲಾವ್ ಕ್ಲೆಮೆಂಟ್ ತಮ್ಮ ಮೊದಲ ಬೈಸಿಕಲ್‌ಗಳನ್ನು ಸ್ಲಾವಿಯಾ ಎಂಬ ಬ್ರಾಂಡ್ ಹೆಸರಿನಲ್ಲಿ ಯಶಸ್ವಿಯಾಗಿ ಮಾರಾಟ ಮಾಡಿದರು. ಸ್ಕೋಡಾ ಸ್ಲಾವಿಯಾ ಈಗ ಹೊಸ ಯುಗಕ್ಕೆ ಸಜ್ಜಾಗಿದೆ. ಈ ಬಾರಿ ಭಾರತೀಯ ಮಾರುಕಟ್ಟೆಯಲ್ಲಿ ಈ ಮಾಡೆಲ್‌ ಹೆಸರು ಕಂಪನಿಯ ಆರಂಭದ ದಿನಗಳನ್ನು ನೆನಪಿಸುತ್ತದೆ.

ಹಲವಾರು ಸಹಾಯ ವ್ಯವಸ್ಥೆಗಳು
 

ಹಲವಾರು ಸಹಾಯ ವ್ಯವಸ್ಥೆಗಳು

ಸ್ಲಾವಿಯಾ 4,541 ಮಿ.ಮೀ* ಉದ್ದ, 1,752 ಮಿ.ಮೀ* ಅಗಲವಾಗಿದೆ ಮತ್ತು 1,487 ಮಿ.ಮೀ* ಎತ್ತರವನ್ನು ಹೊಂದಿದೆ; ವೀಲ್‌ಬೇಸ್ ಅಳತೆಯು 2,651 ಮಿ.ಮೀ* ಆಗಿದೆ. ಬಾಹ್ಯ ಆಯಾಮಗಳು ನಗರಗಳಿಗೆ ಪರಿಪೂರ್ಣ ಹೊಂದುವಂತಿದೆ. ಅಲ್ಲದೆ, ಈ ಹೊಚ್ಚಹೊಸ ಕಾರು ದೈನಂದಿನ ಕುಟುಂಬ ಬಳಕೆಗೆ ಸೂಕ್ತವಾಗಿದೆ.

ಹೆಚ್ಚಿನ ಸೌಕರ್ಯ ಮತ್ತು ಹೆಚ್ಚಿನ ಮಟ್ಟದ ಸುರಕ್ಷತೆಗಾಗಿ ಹಲವಾರು ಸಹಾಯ ವ್ಯವಸ್ಥೆಗಳು

ಹೊಚ್ಚಹೊಸ ಮಧ್ಯಮ ಗಾತ್ರದ ಪ್ರೀಮಿಯಂ ಸೆಡಾನ್ ಅತ್ಯುತ್ತಮ ಸಕ್ರಿಯ ಮತ್ತು ಪ್ಯಾಸಿವ್ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಚಾಲಕರಿಗೆ ಮತ್ತು ಮುಂಭಾಗದ ಪ್ರಯಾಣಿಕರಿಗೆ, ಹಾಗೆಯೇ ಐಚ್ಛಿಕ ಮುಂಭಾಗದ ಸೈಡ್ ಏರ್‌ಬ್ಯಾಗ್‌ಗಳು ಮತ್ತು ಹೆಡ್ ಕರ್ಟೈನ್ ಏರ್‌ಬ್ಯಾಗ್‌ಗಳು ಸೇರಿದಂತೆ ಪ್ರಯಾಣಿಕರನ್ನು ಆರು ಏರ್‌ಬ್ಯಾಗ್‌ಗಳಿಂದ ರಕ್ಷಿಸಲಾಗಿದೆ.

ಜಾಗತಿಕವಾಗಿ ಸಾಬೀತಾಗಿರುವ ಟಿಎಸ್‌ಐ ಎಂಜಿನ್‌

ಜಾಗತಿಕವಾಗಿ ಸಾಬೀತಾಗಿರುವ ಟಿಎಸ್‌ಐ ಎಂಜಿನ್‌

ಶಕ್ತಿಯುತ ಮತ್ತು ಪರಿಣಾಮಕಾರಿ, ಜಾಗತಿಕವಾಗಿ ಸಾಬೀತಾಗಿರುವ ಟಿಎಸ್‌ಐ ಎಂಜಿನ್‌ಗಳು

ಹೊಸ ಸ್ಕೋಡಾ ಸ್ಲಾವಿಯಾಕ್ಕೆ ಎರಡು ಶಕ್ತಿಶಾಲಿ ಮತ್ತು ಪರಿಣಾಮಕಾರಿ ಟಿಎಸ್‌ಐ ಎಂಜಿನ್‌ಗಳ ಆಯ್ಕೆ ಇದೆ. ಇದು ಉತ್ತಮ ಚಾಲನಾ ಕಾರ್ಯಕ್ಷಮತೆ ಮತ್ತು ಹೆಚ್ಚಿನ ಮಟ್ಟದ ದಕ್ಷತೆಯನ್ನು ನೀಡುತ್ತವೆ. ಪ್ರವೇಶ ಮಟ್ಟದ 1.0-ಲೀಟರ್ ಟಿಎಸ್‌ಐ, ತನ್ನ ಮೂರು ಸಿಲಿಂಡರ್‌ಗಳಿಂದ 85 ಕಿ.ವ್ಯಾ (115 ಪಿಎಸ್‌)* ಅನ್ನು ಒದಗಿಸುತ್ತದೆ. ಆದರೆ ನಾಲ್ಕು-ಸಿಲಿಂಡರ್ 1.5-ಲೀಟರ್ ಟಿಎಸ್‌ಐ 110 ಕಿ.ವ್ಯಾ (150 ಪಿಎಸ್‌)* ಉತ್ಪಾದನೆಯನ್ನು ಹೊಂದಿದೆ. ಎರಡೂ ಎಂಜಿನ್‌ಗಳು ತಮ್ಮ ಶಕ್ತಿಯನ್ನು ಮುಂಭಾಗದ ವೀಲ್‌ಗಳಿಗೆ ವರ್ಗಾಯಿಸುತ್ತವೆ. 1.5-ಲೀಟರ್ ಎಂಜಿನ್ ಅನ್ನು ಸಕ್ರಿಯ ಸಿಲಿಂಡರ್ ತಂತ್ರಜ್ಞಾನದೊಂದಿಗೆ (ಂಅಖಿ) ನೀಡಲಾಗುತ್ತದೆ. ಎಂಜಿನ್ ಲೋಡ್ ಕಡಿಮೆಯಾದಾಗ ಆಕ್ಟ್‌ ಸ್ವಯಂಚಾಲಿತವಾಗಿ ಎರಡು ಸಿಲಿಂಡರ್‌ಗಳನ್ನು ಸ್ಥಗಿತಗೊಳಿಸುತ್ತದೆ, ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ. ಸ್ಲಾವಿಯಾ ಆರು-ವೇಗದ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಪ್ರಮಾಣಿತವಾಗಿ ಬರುತ್ತದೆ. ಆರು-ವೇಗದ ಸ್ವಯಂಚಾಲಿತ ಪ್ರಸರಣವು 1.0-ಲೀಟರ್ ಟಿಎಸ್‌ಐಗೆ ಐಚ್ಛಿಕವಾಗಿರುತ್ತದೆ. ಆದರೆ, 1.5-ಲೀಟರ್ ಟಿಎಸ್‌ಐ ಅನ್ನು ಏಳು-ವೇಗದ ಡಿಎಸ್‌ಜಿಯೊಂದಿಗೆ ಜೋಡಿಸಬಹುದು.

"ಕಾಮೋಫ್ಲಾಜ್ ವಿತ್ ಸ್ಕೋಡಾ" ವಿನ್ಯಾಸ ಸ್ಪರ್ಧೆ

"ಕಾಮೋಫ್ಲಾಜ್ ವಿತ್ ಸ್ಕೋಡಾ" ವಿನ್ಯಾಸ ಸ್ಪರ್ಧೆಯ ವಿಜೇತರು ವಿಶೇಷ ಕವರ್ಡ್ ಡ್ರೈವ್ ಕಾಮೋಫ್ಲಾಜ್ ಅನ್ನು ರಚಿಸಿದ್ದಾರೆ

'ಕವರ್ಡ್' ಸ್ಲಾವಿಯಾಗೆ ಕಾಮೋಫ್ಲಾಜ್‌ ಭಾರತೀಯ ವಿನ್ಯಾಸಕರ ಕೆಲಸವಾಗಿದೆ. ಸ್ಪರ್ಧೆಯ ಭಾಗವಾಗಿ 200 ಕ್ಕೂ ಹೆಚ್ಚು ಮೋಟಿಫ್‌ಗಳನ್ನು ಸ್ಕೋಡಾ ಆಟೋ ಇಂಡಿಯಾಗೆ ಸಲ್ಲಿಸಲಾಗಿತ್ತು ಮತ್ತು ಅಂತಿಮ ಸುತ್ತಿಗೆ ಐದು ರಚನೆಗಳನ್ನು ಆಯ್ಕೆ ಮಾಡಲಾಯಿತು. ಪರುಗ್ವೆಗೆ ಪ್ರವಾಸ ಮತ್ತು ಒಲಿವರ್ ಸ್ಟೆಫಾನಿ ಜೊತೆಗೆ ಭೇಟಿ ಅವಕಾಶವನ್ನು ಗೆದ್ದ ಶ್ರೇಯಸ್ ಕರಂಬೇಕರ್‌ ರಚಿಸಿದ ವ್ರ್ಯಾಪ್‌ಗಳನ್ನು ತೀರ್ಪುಗಾರರಾದ ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಗುರುಪ್ರತಾಪ್ ಬೋಪರೈ, ಸ್ಕೋಡಾ ಆಟೋ ಇಂಡಿಯಾದ ಬ್ರ್ಯಾಂಡ್ ನಿರ್ದೇಶಕ ಝ್ಯಾಕ್ ಹಾಲಿಸ್ ಮತ್ತು ಸ್ಕೋಡಾ ಡಿಸೈನ್‌ನ ಮುಖ್ಯಸ್ಥ ಒಲಿವರ್ ಸ್ಟೆಫಾನಿ ಅವರು ಪರಿಶೀಲಿಸಿದ್ದಾರೆ.

* ಇದು ತಾತ್ಕಾಲಿಕ ಮಾಹಿತಿ - ಕಾರನ್ನು ಹೋಮೋಲೋಗೇಟ್ ಮಾಡಿದ ನಂತರ ಅಂತಿಮ ಡೇಟಾವನ್ನು ಪ್ರಕಟಿಸಲಾಗುತ್ತದೆ.

English summary

The brand-new ŠKODA SLAVIA: the next model of the INDIA 2.0 product campaign

Following the launch of the KUSHAQ, ŠKODA is set to unveil the second stage in its product campaign for the Indian market later this year. The Czech car manufacturer’s latest model, the SLAVIA, completes their range of saloons and offers generous amounts of space, as is typical of the brand.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X