For Quick Alerts
ALLOW NOTIFICATIONS  
For Daily Alerts

ಕುಸಿಯುತ್ತಿರುವ ಆರ್ಥಿಕತೆ: ಹಣಕಾಸು ಇಲಾಖೆ ಸಭೆ ನಡೆಸಿದ ಪ್ರಧಾನಿ

|

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ಹಾನಿಗೊಳಗಾದ ಕ್ಷೇತ್ರ ಹಣಕಾಸು ಕ್ಷೇತ್ರ. ದೇಶದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ ಪ್ರಧಾನಿ ಮೋದಿ ಸೇರಿದಂತೆ ಹಣಕಾಸು ಸಚಿವರು ಚಿಂತಾಕ್ರಾಂತರಾಗಿದ್ದಾರೆ.

ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಣಕಾಸು ಇಲಾಖೆಯ ದೀರ್ಘವಾದ ಸಭೆಯನ್ನು ಸೋಮವಾರ ನಡೆಸಿದರು.

'ಕೇಂದ್ರದಿಂದ ನೇರ ಹಣಕಾಸು ಇಲ್ಲ; ಪ್ರಚಾರದಿಂದ ಹೊಟ್ಟೆ ತುಂಬಲ್ಲ''ಕೇಂದ್ರದಿಂದ ನೇರ ಹಣಕಾಸು ಇಲ್ಲ; ಪ್ರಚಾರದಿಂದ ಹೊಟ್ಟೆ ತುಂಬಲ್ಲ'

ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ಎಂಎಸ್‌ಎಂಇ ಹಾಗೂ ಸಮಾಜದ ಬಡ ವರ್ಗಗಳಿಗೆ ಸಹಾಯ ಮಾಡಲು 20 ಲಕ್ಷ ಕೋಟಿ ರೂ.ಗಳ ಆತ್ಮ ನಿರ್ಭರ ಭಾರತ್ ಅಭಿಯಾನ್ ಪ್ಯಾಕೇಜ್ ಅಡಿಯಲ್ಲಿ ಘೋಷಿಸಲಾದ ಹಲವಾರು ಕ್ರಮಗಳ ಪ್ರಗತಿಯನ್ನು ಅವರು ಪರಿಶೀಲಿಸಿದರು. ಆತ್ಮ ನಿರ್ಭರ ಭಾರತ್ ಅಭಿಯಾನ್ ಪ್ಯಾಕೇಜ್‌ನ್ನು ಸಮರ್ಪಕವಾಗಿ ಜಾರಿಗೆ ತರುವಂತೆ ನಿರ್ದೇಶನ ನೀಡಬೇಕು ಮತ್ತು ಇದರಲ್ಲಿ ರಾಜ್ಯಗಳನ್ನು ಸಮಾನದಾರ ಪಾಲುದಾರರಾಗಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ ಮೋದಿ.

ಹೆಚ್ಚಿನ ಸಭೆಗಳು ನಡೆಯಲಿವೆ

ಹೆಚ್ಚಿನ ಸಭೆಗಳು ನಡೆಯಲಿವೆ

ಹಣಕಾಸು ಕಾರ್ಯದರ್ಶಿ ಸೇರಿದಂತೆ ಇಲಾಖೆಯ ಎಲ್ಲ ಕಾರ್ಯದರ್ಶಿಗಳು ಸಭೆಯ ಭಾಗವಾಗಿದ್ದರು ಮತ್ತು ಬರುವ ವಾರದಲ್ಲಿ ಇಂತಹ ಹೆಚ್ಚಿನ ಸಭೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.

ವಿಶ್ವದ ಅತಿದೊಡ್ಡ ಬೂಸ್ಟಿಂಗ್ ಪ್ಯಾಕೇಜ್‌

ವಿಶ್ವದ ಅತಿದೊಡ್ಡ ಬೂಸ್ಟಿಂಗ್ ಪ್ಯಾಕೇಜ್‌

20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಅಡಿಯಲ್ಲಿ ಘೋಷಿಸಲಾದ ಹೆಚ್ಚಿನ ಕ್ರಮಗಳನ್ನು ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಜಾರಿಗೊಳಿಸುತ್ತಿವೆ. ಕೋವಿಡ್ -19 ಬಿಕ್ಕಟ್ಟನ್ನು ನಿಭಾಯಿಸಲು ಮತ್ತು ಆರ್ಥಿಕತೆಯ ಪುನರುಜ್ಜೀವನಕ್ಕೆ ಮಾರ್ಗಸೂಚಿಯನ್ನು ರೂಪಿಸುವ ಮೂಲಕ ವಿಶ್ವದ ಅತಿದೊಡ್ಡ ಬೂಸ್ಟಿಂಗ್ ಪ್ಯಾಕೇಜ್‌ ಒಂದನ್ನು ಸರ್ಕಾರ ಘೋಷಿಸಿತು.

ಹಸಿರು ಚಿಗುರು

ಹಸಿರು ಚಿಗುರು

ಕಳೆದ ತಿಂಗಳು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶವು ಕರೋನವೈರಸ್ ಲಾಕ್‌ಡೌನ್‌ನಿಂದ ಮುಕ್ತವಾಗುತ್ತಿದ್ದಂತೆಯೇ ಆರ್ಥಿಕತೆಯು "ಹಸಿರು ಚಿಗುರುಗಳನ್ನು" ತೋರಿಸುತ್ತಿದೆ ಮತ್ತು ಜೀವನ ಮತ್ತು ಜೀವನೋಪಾಯ ಎರಡರಲ್ಲೂ ಕೇಂದ್ರೀಕರಿಸುವ ಮಹತ್ವವನ್ನು ಒತ್ತಿಹೇಳಿದೆ ಎಂದು ಹೇಳಿದ್ದರು.

ವೈರಸ್‌ನ ಅಪಾಯ ಇನ್ನೂ ಮುಗಿದಿಲ್ಲ

ವೈರಸ್‌ನ ಅಪಾಯ ಇನ್ನೂ ಮುಗಿದಿಲ್ಲ

21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ವೈರಸ್‌ನ ಅಪಾಯ ಇನ್ನೂ ಮುಗಿದಿಲ್ಲ, ಮತ್ತು ಆರ್ಥಿಕತೆಯನ್ನು ಆರಂಭಿಸುವಾಗ ಜಾಗರೂಕರಾಗಿ ಉಳಿಯುವ ಅವಶ್ಯಕತೆಯಿದೆ ಎಂದು ಹೇಳಿದ್ದರು.

English summary

PM Modi Takes Stock of Financial Sector, Reviews Progress of Rs 20 Lakh Crore Stimulus Package

The Covid Economy Crisis: Prime Minister Modi Conducted Finance Department Meeting
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X