For Quick Alerts
ALLOW NOTIFICATIONS  
For Daily Alerts

ಹೆಚ್ಚುತ್ತಿದೆ ಚಿನ್ನವನ್ನು ಅಡವಿಟ್ಟು ಸಾಲ ತೆಗೆದುಕೊಳ್ಳುವ ಪ್ರವೃತ್ತಿ

|

ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ವೇಗವಾಗಿ ಏರುತ್ತಿರುವುದು ಕೂಡ ಬಂಗಾರದ ಸಾಲಕ್ಕೆ ಬೇಡಿಕೆ ಹೆಚ್ಚಲು ಕಾರಣವಾಗಿದೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹಣಕಾಸು ಸಮಸ್ಯೆ ಎದುರಿಸುತ್ತಿರುವ ಜನರು, ತಮ್ಮ ಬಳಿ ಇರುವ ಚಿನ್ನವನ್ನು ಅಡವಿಟ್ಟು ಸಾಲ ತೆಗೆದುಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ.

ಬ್ಯಾಂಕ್‌ಗಳು ಕೂಡ ಚಿನ್ನದ ಸಾಲದ ವಿತರಣೆ ಬಗ್ಗೆ ಉತ್ಸುಕವಾಗಿದ್ದು, ಗ್ರಾಹಕರನ್ನು ಸೆಳೆಯಲು ಮುಂದಾಗಿವೆ.

Gold, Silver: ಚಿನ್ನ ಗ್ರಾಮ್ ಗೆ 6 ಸಾವಿರದತ್ತ, ಬೆಳ್ಳಿ ಕೇಜಿಗೆ 71,500

ಹಣಕಾಸು ಸಂಸ್ಥೆ ಹಾಗೂ ಬ್ಯಾಂಕ್‌ ವಲಯದಲ್ಲಿಬಂಗಾರದ ಸಾಲ ನೀಡಲು ಪೈಪೋಟಿ ಸೃಷ್ಟಿಯಾಗಿರುವುದರಿಂದ ಚಿನ್ನದ ಸಾಲದ ಬಡ್ಡಿ ದರ ಗ್ರಾಹಕರಿಗೆ ಅಗ್ಗವಾಗುವ ನಿರೀಕ್ಷೆ ಇದೆ. ಬ್ಯಾಂಕ್‌ಗಳಿಗೂ ಚಿನ್ನದ ಸಾಲದ ಯೋಜನೆಗಳು ಸುರಕ್ಷಿತವಾಗಿವೆ.

112 ಲಕ್ಷ ಕೋಟಿ ರೂ ಮೌಲ್ಯದ ಚಿನ್ನ
 

112 ಲಕ್ಷ ಕೋಟಿ ರೂ ಮೌಲ್ಯದ ಚಿನ್ನ

ವರ್ಲ್ಡ್ ಗೋಲ್ಡ್‌ ಕೌನ್ಸಿಲ್‌ ಪ್ರಕಾರ ಭಾರತೀಯರು 1.5 ಲಕ್ಷ ಕೋಟಿ ಡಾಲರ್‌(ಅಂದಾಜು 112 ಲಕ್ಷ ಕೋಟಿ ರೂ.) ಮೌಲ್ಯದ ಚಿನ್ನವನ್ನು ತಮ್ಮ ಬಳಿ ಹೊಂದಿದ್ದಾರೆ. ಇದರಲ್ಲಿ ಬಹುಪಾಲು ಬಂಗಾರ ಆಭರಣಗಳ ರೂಪದಲ್ಲಿಇದೆ.

ಭದ್ರತೆ ಮಾತ್ರ ತುಸು ಸವಾಲಿನದ್ದು

ಭದ್ರತೆ ಮಾತ್ರ ತುಸು ಸವಾಲಿನದ್ದು

ಚಿನ್ನದ ಸಾಲದಲ್ಲಿ ಬಂಗಾರದ ಗುಣಮಟ್ಟ ಪರಿಶೀಲನೆ, ಅದರ ಭದ್ರತೆ ಮಾತ್ರ ತುಸು ಸವಾಲಿನದ್ದು. ಹೀಗಾಗಿ ಬ್ಯಾಂಕ್‌ ಚಿನ್ನದ ಮೌಲ್ಯದ 75 ಪರ್ಸೆಂಟಿಗಿಂತ ಹೆಚ್ಚು ಸಾಲ ಕೊಡುವುದಿಲ್ಲ.

ಡಿಮ್ಯಾಂಡ್‌ ಏಕೆ?

ಡಿಮ್ಯಾಂಡ್‌ ಏಕೆ?

ಕೋವಿಡ್‌ ಬಿಕ್ಕಟ್ಟಿನ ಪರಿಣಾಮ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಬಹಳ ಮಂದಿಯ ಆದಾಯ ಇಳಿಕೆಯಾಗಿದೆ. ವೇತನ ಕಡಿತವಾಗಿದೆ. ಈ ಹಿನ್ನೆಲೆಯಲ್ಲಿ ದೈನಂದಿನ ವೆಚ್ಚ, ಮಕ್ಕಳ ಶಿಕ್ಷಣ ಖರ್ಚು ವೆಚ್ಚಗಳನ್ನು ಪೂರೈಸಲು ಜನ ತಮ್ಮ ಬಳಿ ಇರುವ ಬಂಗಾರವನ್ನು ಅಡಮಾನ ಇಟ್ಟು ಸಾಲ ತೆಗೆದುಕೊಳ್ಳುತ್ತಿದ್ದಾರೆ.

ಮನೆ ಬಾಗಿಲಿಗೇ ಚಿನ್ನದ ಸಾಲ
 

ಮನೆ ಬಾಗಿಲಿಗೇ ಚಿನ್ನದ ಸಾಲ

ಮಣಪ್ಪುರಂ ಫೈನಾನ್ಸ್‌ ಗ್ರಾಹಕರ ಮನೆ ಬಾಗಿಲಿಗೇ ಚಿನ್ನದ ಸಾಲ ಯೋಜನೆಯನ್ನು ಒದಗಿಸುತ್ತದೆ. ಕೊರೊನಾ ವೈರಸ್‌ ಸೋಂಕು ಹೆಚ್ಚಿರುವುದರಿಂದ ಗ್ರಾಹಕರು ಮನೆ ಬಿಟ್ಟು ಹೊರಗೆ ಹೊರಡಲು ಬಯಸುತ್ತಿಲ್ಲ. ಹೀಗಾಗಿ ಅವರ ಮನೆ ಬಾಗಿಲಿಗೇ ನಮ್ಮ ಪ್ರತಿನಿಧಿಗಳು ಬಂದು ಸಾಲದ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ.

Read more about: gold loan ಚಿನ್ನ ಸಾಲ
English summary

RBI pushes loans against gold to 90% of value amid Covid-19 crisis

There Is A Growing Trend Of Borrowing To Cover Gold
Company Search
COVID-19