For Quick Alerts
ALLOW NOTIFICATIONS  
For Daily Alerts

ಗಮನಿಸಿ: ಡಿ. 1 ರಿಂದ ಅಡುಗೆ ಅನಿಲ ಸೇರಿ ಇವುಗಳ ಮೇಲೆ ಹೊಸ ನಿಯಮ ಜಾರಿ

|

ದೇಶದಲ್ಲಿ ಡಿಸೆಂಬರ್‌ 1 ರಿಂದ ಹೊಸ ನಿಯಮಗಳು ಜಾರಿಗೆ ಬರಲಿದೆ. ಈ ನಿಯಮವು ಗ್ರಾಹಕರ ಮೇಲೆ ಪರಿಣಾಮವನ್ನು ಬೀರಲಿದೆ. ನಿಮ್ಮ ಗ್ಯಾಸ್‌ ಸಿಲಿಂಡರ್‌, ಪಿಎಫ್‌ ಸೇರಿದಂತೆ ಕ್ರೆಡಿಟ್‌ ಕಾರ್ಡ್‌ಗಳಲ್ಲಿ ಬದಲಾವಣೆ ಆಗಲಿದೆ.

 

ಸಿಲಿಂಡರ್‌ ದರದ ಪರಿಷ್ಕರಣೆ ಆಗಲಿದೆ. ಕ್ರೆಡಿಟ್‌ ಕಾರ್ಡ್ ಶುಲ್ಕವು ಅಧಿಕವಾಗಲಿದೆ. ಇನ್ನು ಈ ಹಿಂದೆಯೇ ಹೇಳುತ್ತಾ ಬರುತ್ತಿರುವಂತೆ ಫಿಎಫ್‌ಗೆ ಆಧಾರ್‌ ಕಾರ್ಡ್ ಅನ್ನು ಲಿಂಕ್‌ ಮಾಡುವುದು ಕಡ್ಡಾಯ ಆಗಿದೆ. ಬೆಂಕಿ ಪೊಟ್ಟಣ, ಉಳಿತಾಯ ಖಾತೆ ಬಡ್ಡಿ ವಿಚಾರದಲ್ಲಿ ಬದಲಾವಣೆಗಳು ಆಗಿದೆ.

ಟೊಮೆಟೊ ದರ ಇನ್ನೂ 2 ತಿಂಗಳು ಇಳಿಕೆಯಾಗಲ್ಲ: Crisil ಸಂಶೋಧನೆ

ಕೇಂದ್ರ ಸರ್ಕಾರ ಪ್ರಾವಿಡೆಂಟ್ ಫಂಡ್ (PF) ಖಾತೆಯನ್ನು ಹೊಂದಿರುವ ಎಲ್ಲಾ ಉದ್ಯೋಗಿಗಳಿಗೆ ಹೊಸ ನಿಯಮವನ್ನು ಪರಿಚಯಿಸಲಾಗಿದೆ.

 ಸಿಲಿಂಡರ್‌ ದರ ಇಳಿಕೆ ಸಾಧ್ಯತೆ

ಸಿಲಿಂಡರ್‌ ದರ ಇಳಿಕೆ ಸಾಧ್ಯತೆ

ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ಹಲವಾರು ಅಗತ್ಯ ವಸ್ತುಗಳ ಬೆಲೆಯು ಏರಿಕೆ ಆಗುತ್ತಿದೆ. ಅಡುಗೆ ಅನಿಲ ದರವೂ ಕೂಡಾ ನಿರಂತರವಾಗಿ ಏರಿಕೆ ಕಂಡಿತ್ತು. ಸಬ್ಸಿಡಿಯನ್ನು ಕೂಡಾ ರದ್ದು ಮಾಡಲಾಗಿತ್ತು. ಇದರಿಂದಾಗಿ ಜನರಿಗೆ ಸಂಕಷ್ಟ ಉಂಟಾಗಿತ್ತು. ಅಡುಗೆ ಅನಿಲ ಸಿಲಿಂಡರ್‌ ದರದ ಪರಿಷ್ಕರಣೆ ಪ್ರತಿ ತಿಂಗಳ ಮೊದಲ ದಿನವೇ ಮಾಡಲಾಗುತ್ತದೆ. ಜಾಗತಿಕ ಮಾರುಕಟ್ಟೆಯ ಬೆಳವಣಿಗೆ ಆಧಾರದಲ್ಲಿ ಸಿಲಿಂಡರ್‌ ದರ ಏರಿಳಿತ ಆಗುತ್ತದೆ. ಇತ್ತೀಚೆಗೆ ಸಬ್ಸಿಡಿಯನ್ನು ಮತ್ತೆ ಆರಂಭ ಮಾಡಲಾಗಿದೆ. ಇನ್ನು ಅಡುಗೆ ಅನಿಲ ದರವೂ ಕೂಡಾ ಇಳಿಕೆ ಆಗುವ ಸಾಧ್ಯತೆ ಇದೆ.

 ಬೆಂಕಿಪೊಟ್ಟಣ ಬೆಲೆ ಏರಿಕೆ

ಬೆಂಕಿಪೊಟ್ಟಣ ಬೆಲೆ ಏರಿಕೆ

ಸುಮಾರು 14 ವರ್ಷಗಳ ನಂತರ ಬೆಂಕಿ ಪೊಟ್ಟಣಗಳ ಬೆಲೆಯು ಏರಿಕೆ ಆಗಿದೆ. ಈವರೆಗ ಬೆಂಕಿ ಪೊಟ್ಟಣಕ್ಕೆ ಒಂದು ರೂಪಾಯಿ ಆಗಿತ್ತು. ಆದರೆ 14 ವರ್ಷಗಳ ನಂತರ ಬೆಂಕಿ ಪೊಟ್ಟಣಗಳ ಬೆಲೆಯು ಏರಿಕೆ ಆಗಿದ್ದು, ಮುಂದಿನ ತಿಂಗಳ ಆರಂಭದಿಂದ ಬೆಂಕಿಪೊಟ್ಟಣ ಬೆಲೆಯು ಎರಡು ರೂಪಾಯಿ ಆಗಲಿದೆ. 2007 ಬೆಂಕಿಪೊಟ್ಟಣದ ಬೆಲೆಯನ್ನು ಏರಿಕೆ ಮಾಡಲಾಗಿತ್ತು. ಐವತ್ತು ಪೈಸೆಯಿಂದ ಒಂದು ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಈಗ ಬೆಂಕಿಪೊಟ್ಟಣ ಬೆಲೆಯನ್ನು ಏರಿಕೆ ಮಾಡಲಾಗುತ್ತದೆ ಎಂದು ಕಂಪನಿಗಳು ತಿಳಿಸಿದೆ.

 ಉಳಿತಾಯ ಖಾತೆ ಬಡ್ಡಿ ಇಳಿಕೆ
 

ಉಳಿತಾಯ ಖಾತೆ ಬಡ್ಡಿ ಇಳಿಕೆ

ಡಿಸೆಂಬರ್‌ 1 ರಿಂದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಬಡ್ಡಿ ದರ ಇಳಿಕೆ ಕಾಣಲಿದೆ. ಪ್ರಸ್ತುತ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಬಡ್ಡಿ ದರ ಶೇಕಡ 2.90 ಆಗಿದೆ. ಇದನ್ನು ಶೇಕಡ 2.80 ಗೆ ಇಳಿಕೆ ಮಾಡಲಾಗುತ್ತದೆ.

 ಕ್ರೆಡಿಟ್‌ ಕಾರ್ಡ್ ಶುಲ್ಕ ಏರಿಕೆ

ಕ್ರೆಡಿಟ್‌ ಕಾರ್ಡ್ ಶುಲ್ಕ ಏರಿಕೆ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಕ್ರೆಡಿಟ್‌ ಕಾರ್ಡ್ ಬಳಕೆದಾರರಿಗೆ ಡಿಸೆಂಬರ್‌ 1 ರಿಂದ ಶುಲ್ಕವನ್ನು ವಿಧಿಸಲಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಕ್ರೆಡಿಟ್‌ ಕಾರ್ಡ್ ಮೂಲಕ ವಸ್ತುಗಳನ್ನು ಖರೀದಿ ಮಾಡಿದಾಗ ಪ್ರಸ್ತುತ ಇರುವ ಬಡ್ಡಿಯ ಜೊತೆಗೆ ಸಂಸ್ಕರಣೆ ಶುಲ್ಕವನ್ನು ಕೂಡಾ ಪಾವತಿ ಮಾಡಬೇಕಾಗಿದೆ. ಹಾಗೆಯೇ ಇಎಂಐ ಯೋಜನೆಯಡಿಯಲ್ಲಿ ಪ್ರತಿ ಖರೀದಿಗೆ 99 ರೂಪಾಯಿ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕು.

 ಪಿಎಫ್‌ ಖಾತೆಗೆ ಆಧಾರ್‌ ಲಿಂಕ್‌:

ಪಿಎಫ್‌ ಖಾತೆಗೆ ಆಧಾರ್‌ ಲಿಂಕ್‌:

ಡಿಸೆಂಬರ್‌ 1 ರಿಂದ ಜಾರಿಗೆ ಬರಲಿರುವ ಹೊಸ ನಿಯಮದ ಪ್ರಕಾರ ನವೆಂಬರ್‌ 30 ರ ಒಳಗೆ ಎಲ್ಲಾ ಪಿಎಫ್‌ ಚಂದಾದಾರರು ತಮ್ಮ ಪಿಎಫ್‌ ಖಾತೆಗೆ ಕಡ್ಡಾಯವಾಗಿ ಆಧಾರ್‌ ಅನ್ನು ಲಿಂಕ್‌ ಮಾಡಿಕೊಂಡಿರಬೇಕು. ಒಂದು ವೇಳೆ ಲಿಂಕ್‌ ಮಾಡದಿದ್ದರೆ, ಡಿಸೆಂಬರ್‌ 1 ರಿಂದ ಪಿಎಫ್‌ ಮೊತ್ತ ಖಾತೆಗೆ ಜಮೆ ಆಗುವುದಿಲ್ಲ ಎಂದು ವರದಿಗಳು ಉಲ್ಲೇಖ ಮಾಡಿದೆ. ಹಾಗೆಯೇ ಪಿಎಫ್‌ ಖಾತೆಯಲ್ಲಿ ಬೇರೆ ಸಮಸ್ಯೆಗಳು ಉಂಟಾಗಲಿದೆ.

 ಗೃಹ ಸಾಲ ಬಡ್ಡಿ ಪಾವತಿ

ಗೃಹ ಸಾಲ ಬಡ್ಡಿ ಪಾವತಿ

ಡಿಸೆಂಬರ್‌ ಒಂದರಿಂದ ಹೊಸದಾಗಿ ಗೃಹ ಸಾಲವನ್ನು ಪಡೆಯುವ ಗ್ರಾಹಕರು ಅಧಿಕ ಬಡ್ಡಿಯನ್ನು ಪಾವತಿ ಮಾಡಬೇಕಾಗುತ್ತದೆ. ಬಡ್ಡಿ ಕಡಿತ ಸೇರಿ ಹಲವು ಗೃಹ ಸಾಲದ ಕೊಡುಗೆಯನ್ನು ನೀಡಿದ್ದ ಬ್ಯಾಂಕುಗಳು ಗೃಹ ಸಾಲದ ಮೇಲಿನ ಈ ಎಲ್ಲಾ ಆಫರ್‌ಗಳನ್ನು ನವೆಂಬರ್‌ 30 ರಿಂದ ಸ್ಥಗಿತ ಮಾಡಲಾಗಿದೆ.

ಕಳೆದ ವಾರದ ಟಾಪ್ 10 ಮೌಲ್ಯ: 9 ಸಂಸ್ಥೆಗೆ ನಷ್ಟ, ಏರ್‌ಟೆಲ್‌ಗೆ ಲಾಭ

English summary

These Rules Will Change From December 1, Know In Details in Kannada

These Rules Will Change From December 1, Know In Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X