For Quick Alerts
ALLOW NOTIFICATIONS  
For Daily Alerts

ವಿಶ್ವದ ದೈತ್ಯ ಟೆಕ್ ಕಂಪನಿಗಳು: ಹಲವು ದೇಶಗಳಿಗಿಂತ ಈ ಕಂಪನಿಗಳೇ ಹೆಚ್ಚು ಶ್ರೀಮಂತವಾಗಿವೆ!

|

ವಿಶ್ವದಲ್ಲಿ ಅನೇಕ ದೈತ್ಯ ಟೆಕ್ ಕಂಪನಿಗಳು ದಶಕಗಳಿಂದ ತಮ್ಮ ಪ್ರಾಬಲ್ಯವನ್ನು ಬೆಳೆಸಿಕೊಂಡು ಬಂದಿವೆ. ಅದರಲ್ಲೂ ಕೆಲವು ಸಂಸ್ಥೆಗಳು ನೂರಾರು ವರ್ಷಗಳಿಂದ ಭದ್ರವಾಗಿ ನೆಲೆಯೂರಿವೆ. ಜಗತ್ತಿನ ಟಾಪ್ ಟೆಕ್‌ ಕಂಪನಿಗಳನ್ನು ನಾವು ಅಮೆರಿಕಾದಲ್ಲಿ ಕಾಣಬಹುದು.

 

ಜನಪ್ರಿಯ ಐಫೋನ್ ತಯಾರಿಕಾ ಸಂಸ್ಥೆ ಆಪಲ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ನಂತರದಲ್ಲಿ ಇ-ಕಾಮರ್ಸ್‌ ದಿಗ್ಗಜ ಅಮೆಜಾನ್, ಸತ್ಯ ನಾಡೆಲ್ಲಾ ನೇತೃತ್ವದ ಮೈಕ್ರೋಸಾಫ್ಟ್, ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್ ಹೀಗೆ ಜಗತ್ತಿನ ಟಾಪ್ ಟೆಕ್ ಕಂಪನಿಗಳು ಅಮೆರಿಕಾದಿಂದ ಪ್ರಾರಂಭವಾಗಿ ವಿಶ್ವದಾದ್ಯಂತ ತಮ್ಮ ಪ್ರಾಬಲ್ಯ ಮೆರೆದಿವೆ.

ವಿಶೇಷ ಏನಂದ್ರೆ ಈ ದೈತ್ಯ ಟೆಕ್‌ ಕಂಪನಿಗಳ ಮೌಲ್ಯ ಎಷ್ಟಿದೆ ಅಂದ್ರೆ ಹಲವು ದೇಶಗಳ ಜಿಡಿಪಿಗಿಂತಲೇ ಹೆಚ್ಚಿದ್ದು, ಶ್ರೀಮಂತ ಕಂಪನಿಗಳು ಎನಿಸಿಕೊಂಡಿವೆ. ಹಾಗಿದ್ರೆ ಯಾವೆಲ್ಲಾ ರಾಷ್ಟ್ರಗಳಿಗಿಂತ ಈ ಕಂಪನಿಗಳು ಹೆಚ್ಚು ಮೌಲ್ಯಯುತವಾಗಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಮಾಹಿತಿ ಓದಿ

ಆಪಲ್ ಕಂಪನಿ ನಿವ್ವಳ ಮೌಲ್ಯ:  $2.2 ಲಕ್ಷ ಕೋಟಿ

ಆಪಲ್ ಕಂಪನಿ ನಿವ್ವಳ ಮೌಲ್ಯ: $2.2 ಲಕ್ಷ ಕೋಟಿ

ಜಗತ್ತಿನ ಜನಪ್ರಿಯ ಮೊಬೈಲ್ ಹಾಗೂ ಇತರ ಪರಿಕರಗಳ ತಯಾರಕ ಆಪಲ್‌ ಕಂಪನಿಯು ವಿಶ್ವದಲ್ಲಿ ಅತಿದೊಡ್ಡ ಮೌಲ್ಯಯುತ ಕಂಪನಿಯಾಗಿದೆ. ಕಳೆದ ವರ್ಷ ಆಪಲ್ ಕಂಪನಿಯು 2 ಟ್ರಿಲಿಯನ್ ಡಾಲರ್ (ಎರಡು ಲಕ್ಷ ಕೋಟಿ ಡಾಲರ್) ಮಾರುಕಟ್ಟೆ ಮೌಲ್ಯವನ್ನು ತಲುಪಿದ ಅಮೆರಿಕಾದ ಮೊದಲ ಕಂಪನಿಯಾಗಿ ಹೊರಹೊಮ್ಮಿತು. ಕೇವಲ ಎರಡು ವರ್ಷಗಳಲ್ಲಿ ಆಪಲ್ ಬಂಡವಾಳ ಮಾರುಕಟ್ಟೆ ಮೌಲ್ಯಮಾಪನವು ದ್ವಿಗುಣಗೊಂಡಿದೆ.

ಆಪಲ್ ಕಂಪನಿಯ ಮೌಲ್ಯವು ಎಷ್ಟಿದೆ ಅಂದರೆ, ಜಗತ್ತಿನ ಕೇವಲ 7 ರಾಷ್ಟ್ರಗಳು ಮಾತ್ರ ಆಪಲ್‌ನ ಒಟ್ಟು ಮೌಲ್ಯಗಿಂತ ಹೆಚ್ಚಿನ ಜಿಡಿಪಿಯನ್ನು ಹೊಂದಿವೆ. ಜಗತ್ತಿನ ಶೇಕಡಾ 96ರಷ್ಟು ರಾಷ್ಟ್ರಗಳಿಗಿಂತ ಶ್ರೀಮಂತವಾಗಿದೆ.

ಆಪಲ್‌ನ ನಿವ್ವಳ ಆಸ್ತಿ ಮೌಲ್ಯಕ್ಕೆ ಸಮೀಪದಲ್ಲಿ ಜಿಡಿಪಿ ದರ ಹೊಂದಿರುವ ರಾಷ್ಟ್ರಗಳು (ಏಪ್ರಿಲ್ 14ರ ಮಾಹಿತಿ ಪ್ರಕಾರ)

ಇಟಲಿ: $2 ಲಕ್ಷ ಕೋಟಿ

ಬ್ರೆಜಿಲ್: $1.8 ಲಕ್ಷ ಕೋಟಿ

ಕೆನಡಾ: $1.7 ಲಕ್ಷ ಕೋಟಿ

ರಷ್ಯಾ: $1.6 ಲಕ್ಷ ಕೋಟಿ

ದಕ್ಷಿಣ ಕೊರಿಯಾ: $1.6 ಲಕ್ಷ ಕೋಟಿ

ಆಸ್ಟ್ರೇಲಿಯಾ: $1.3 ಲಕ್ಷ ಕೋಟಿ

ಸ್ಪೇನ್: $1.3 ಲಕ್ಷ ಕೋಟಿ

ಮೆಕ್ಸಿಕೊ: $1.2 ಲಕ್ಷ ಕೋಟಿ

ಇಂಡೋನೇಷಿಯಾ: $1.1 ಲಕ್ಷ ಕೋಟಿ

ನೆದರ್ಲೆಂಡ್: $907 ಬಿಲಿಯನ್

ಅಮೆಜಾನ್ ನಿವ್ವಳ ಮೌಲ್ಯ: $1.6 ಲಕ್ಷ ಕೋಟಿ
 

ಅಮೆಜಾನ್ ನಿವ್ವಳ ಮೌಲ್ಯ: $1.6 ಲಕ್ಷ ಕೋಟಿ

ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್ ಬೇಜೋಸ್ ನೇತೃತ್ವದ ಅಮೆಜಾನ್ ವಿಶ್ವದ ದೈತ್ಯ ಕಂಪನಿಗಳಲ್ಲಿ ಒಂದಾಗಿದ್ದು, ವಿಶ್ವದ ಶೇಕಡಾ 92ರಷ್ಟು ರಾಷ್ಟ್ರಗಳಿಗಿಂತ ಹೆಚ್ಚು ಶ್ರೀಮಂತವಾಗಿದೆ.

ಅಮೆಜಾನ್‌ನ ನಿವ್ವಳ ಆಸ್ತಿ ಮೌಲ್ಯಕ್ಕೆ ಸಮೀಪದಲ್ಲಿ ಜಿಡಿಪಿ ದರ ಹೊಂದಿರುವ ರಾಷ್ಟ್ರಗಳು (ಏಪ್ರಿಲ್ 14ರ ಮಾಹಿತಿ ಪ್ರಕಾರ)

ದಕ್ಷಿಣ ಕೊರಿಯಾ: $1.6 ಲಕ್ಷ ಕೋಟಿ

ಆಸ್ಟ್ರೇಲಿಯಾ: $1.3 ಲಕ್ಷ ಕೋಟಿ

ಸ್ಪೇನ್: $1.3 ಲಕ್ಷ ಕೋಟಿ

ಮೆಕ್ಸಿಕೊ: $1.2 ಲಕ್ಷ ಕೋಟಿ

ಇಂಡೋನೇಷಿಯಾ: $1.1 ಲಕ್ಷ ಕೋಟಿ

ನೆದರ್ಲೆಂಡ್: $907 ಬಿಲಿಯನ್

ಸೌದಿ ಅರೇಬಿಯಾ: $792 ಬಿಲಿಯನ್

ಟರ್ಕಿ: $761 ಬಿಲಿಯನ್

ಸ್ವಿಟ್ಜರ್ಲೆಂಡ್: $703 ಬಿಲಿಯನ್

ಪೋಲೆಂಡ್: $595 ಬಿಲಿಯನ್

ಮೈಕ್ರೋಸಾಫ್ಟ್‌ ನಿವ್ವಳ ಮೌಲ್ಯ: $1.9 ಲಕ್ಷ ಕೋಟಿ

ಮೈಕ್ರೋಸಾಫ್ಟ್‌ ನಿವ್ವಳ ಮೌಲ್ಯ: $1.9 ಲಕ್ಷ ಕೋಟಿ

ಜಗತ್ತಿನ ಅಗ್ರ ಸಾಫ್ಟ್‌ವೇರ್‌ ಕಂಪನಿಯಾದ ಮೈಕ್ರೋಸಾಫ್ಟ್‌ ಶ್ರೀಮಂತ ಸಂಸ್ಥೆಗಳಲ್ಲಿ ಒಂದಾಗಿದ್ದು, ಮೈಕ್ರೋಸಾಫ್ಟ್‌ನ ನಿವ್ವಳ ಆಸ್ತಿ ಮೌಲ್ಯಕ್ಕಿಂತ ಜಗತ್ತಿನಲ್ಲಿ ಕೇವಲ 9 ರಾಷ್ಟ್ರಗಳ ಜಿಡಿಪಿ ಹೆಚ್ಚಿದೆ.

1.9 ಲಕ್ಷ ಕೋಟಿ ಡಾಲರ್ ಮೌಲ್ಯಯುತ ಸಂಸ್ಥೆಯಾಗಿರುವ ಮೈಕ್ರೋಸಾಫ್ಟ್‌ ಕೆನಡಾದಂತಹ ಶ್ರೀಮಂತ ರಾಷ್ಟ್ರದ ಜಿಡಿಪಿಗಿಂತ ಹೆಚ್ಚಿನ ಶ್ರೀಮಂತವಾಗಿದೆ.

ಮೈಕ್ರೋಸಾಫ್ಟ್‌ ನಿವ್ವಳ ಆಸ್ತಿ ಮೌಲ್ಯಕ್ಕೆ ಸಮೀಪದಲ್ಲಿ ಜಿಡಿಪಿ ದರ ಹೊಂದಿರುವ ರಾಷ್ಟ್ರಗಳು (ಏಪ್ರಿಲ್ 14ರ ಮಾಹಿತಿ ಪ್ರಕಾರ)

ಕೆನಡಾ: $1.7 ಲಕ್ಷ ಕೋಟಿ

ರಷ್ಯಾ: $1.6 ಲಕ್ಷ ಕೋಟಿ

ದಕ್ಷಿಣ ಕೊರಿಯಾ: $1.6 ಲಕ್ಷ ಕೋಟಿ

ಆಸ್ಟ್ರೇಲಿಯಾ: $1.3 ಲಕ್ಷ ಕೋಟಿ

ಸ್ಪೇನ್: $1.3 ಲಕ್ಷ ಕೋಟಿ

ಮೆಕ್ಸಿಕೊ: $1.2 ಲಕ್ಷ ಕೋಟಿ

ಇಂಡೋನೇಷ್ಯಾ: $1.1 ಲಕ್ಷ ಕೋಟಿ

ನೆದರ್ಲೆಂಡ್: $907 ಬಿಲಿಯನ್

ಸೌದಿ ಅರೇಬಿಯಾ: $792 ಬಿಲಿಯನ್

ಟರ್ಕಿ: $761 ಬಿಲಿಯನ್

ಫೇಸ್‌ಬುಕ್‌ ನಿವ್ವಳ ಮೌಲ್ಯ: $860 ಬಿಲಿಯನ್

ಫೇಸ್‌ಬುಕ್‌ ನಿವ್ವಳ ಮೌಲ್ಯ: $860 ಬಿಲಿಯನ್

ಜಗತ್ತಿನ ಅಗ್ರ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಕೂಡ ಜಗತ್ತಿನ ಟಾಪ್ ಟೆಕ್‌ ಕಂಪನಿಗಳಲ್ಲಿ ಒಂದಾಗಿದೆ. ಈ ದಿಗ್ಗಜ ಸಂಸ್ಥೆಯು ಜಗತ್ತಿನಲ್ಲಿ 150 ರಾಷ್ಟ್ರಗಳಿಗಿಂತ ಹೆಚ್ಚು ಶ್ರೀಮಂತವಾಗಿದೆ.

ಫೇಸ್‌ಬುಕ್ ನಿವ್ವಳ ಮೌಲ್ಯವು ತೈಲ ಸಂಪದ್ಬರಿತ ರಾಷ್ಟ್ರ ಸೌದಿ ಅರೇಬಿಯಾದ ಜಿಡಿಪಿಗಿಂತಲೂ ಬಹಳ ಹೆಚ್ಚಾಗಿದೆ.

ಫೇಸ್‌ಬುಕ್‌ ನಿವ್ವಳ ಆಸ್ತಿ ಮೌಲ್ಯಕ್ಕೆ ಸಮೀಪದಲ್ಲಿ ಜಿಡಿಪಿ ದರ ಹೊಂದಿರುವ ರಾಷ್ಟ್ರಗಳು (ಏಪ್ರಿಲ್ 14ರ ಮಾಹಿತಿ ಪ್ರಕಾರ)

ಸೌದಿ ಅರೇಬಿಯಾ: $792 ಬಿಲಿಯನ್

ಟರ್ಕಿ: $761 ಬಿಲಿಯನ್

ಸ್ವಿಟ್ಜರ್ಲೆಂಡ್: $703 ಬಿಲಿಯನ್

ಪೋಲೆಂಡ್: $595 ಬಿಲಿಯನ್

ಥೈಲ್ಯಾಂಡ್: $543 ಬಿಲಿಯನ್

ಬೆಲ್ಜಿಯಂ: $533 ಬಿಲಿಯನ್

ಸ್ವೀಡನ್: $530 ಬಿಲಿಯನ್

ನೈಜೀರಿಯಾ: $448 ಬಿಲಿಯನ್

ಅರ್ಜೆಂಟೀನಾ: $445 ಬಿಲಿಯನ್

ಆಸ್ಟ್ರೀಯಾ: $445 ಬಿಲಿಯನ್

English summary

These Tech Giants Are Richer Than Several Countries:Details Here

Here the details of worl'd most richer and stronger tech giants which are richer than several countries
Story first published: Friday, April 16, 2021, 9:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X