For Quick Alerts
ALLOW NOTIFICATIONS  
For Daily Alerts

ಜಾಗತಿಕ ಮಟ್ಟದಲ್ಲಿ ಚಿನ್ನದ ದರ ಏರಿಕೆ; ಭಾರತದಲ್ಲಿ ಮಾತ್ರ ಇಳಿಕೆ

|

ಜಾಗತಿಕವಾಗಿ ಚಿನ್ನದ ದರ ಸ್ವಲ್ಪ ಮಟ್ಟಿಗೆ ಏರಿಕೆ ಕಂಡರೂ ಸೋಮವಾರ (ಸೆಪ್ಟೆಂಬರ್ 21, 2020) ಭಾರತದಲ್ಲಿ ಇಳಿಕೆ ಕಂಡಿತು. MCXನಲ್ಲಿ ಪ್ರತಿ 10 ಗ್ರಾಮ್ ಗೆ 81 ರುಪಾಯಿ ಇಳಿಕೆ ಕಂಡು, 51,634 ರುಪಾಯಿಗೆ ವಹಿವಾಟು ನಡೆಸಿತು. ಅದೇ ರೀತಿಯಲ್ಲಿ ಬೆಳ್ಳಿಯ ದರದಲ್ಲೂ ಕುಸಿತವಾಗಿ ಪ್ರತಿ ಕೇಜಿಗೆ 67,679ರಂತೆ ವಹಿವಾಟು ನಡೆಸಿತು.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎತ್ತರದ ಕಡೆಗೆ ಸಾಗುವುದು ಮುಂದುವರಿಸಿದೆ. ಡಾಲರ್ ಮೌಲ್ಯ ದುರ್ಬಲವಾಗಿದೆ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಆರ್ಥಿಕ ಚೇತರಿಕೆ ಶೀಘ್ರವಾಗಿ ಆಗಬಹುದು ಎಂಬ ಭರವಸೆಗೆ ಪೆಟ್ಟು ಬಿದ್ದು, ಚಿನ್ನದ ಬೇಡಿಕೆ ಹೆಚ್ಚುವಂತೆ ಮಾಡಿದೆ. ಸ್ಪಾಟ್ ಚಿನ್ನವು ಔನ್ಸ್ ಗೆ (28.3495 ಗ್ರಾಮ್) $ 1954.65 ತಲುಪಿದೆ. ಇನ್ನು ಯುಎಸ್ ಗೋಲ್ಡ್ ಫ್ಯೂಚರ್ಸ್ ಔನ್ಸ್ ಗೆ $ 1959.90ಗೆ ತಲುಪಿದೆ.

 

ಚಿನ್ನದ ದರ ಗರಿಷ್ಠ ಮಟ್ಟದಿಂದ 4500 ರು. ಇಳಿಕೆ; ಬೇಡಿಕೆ ಕುದುರದೆ ಡಿಸ್ಕೌಂಟ್ ಮಾರಾಟ

ಈ ಮಧ್ಯೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಸೇರಿದಂತೆ ಯುರೋಪ್ ನ ಕೆಲವು ನಗರಗಳಲ್ಲಿ ಹೊಸದಾಗಿ ನಿರ್ಬಂಧವನ್ನು ಹೇರಲಾಗುತ್ತಿದೆ. ಇತ್ತ ಯುಎಸ್ ನಿಂದ ಫೆಡ್ ನ ಜೆರೋಮ್ ಪೊವೆಲ್ ಈ ವಾರ ಹಣದುಬ್ಬರ ಸೇರಿ ಮತ್ತಿತರ ವಿಚಾರಗಳಿಗೆ ಏನು ಮಾತನಾಡಬಹುದು ಎಂದು ಎದುರು ನೋಡಲಾಗುತ್ತಿದೆ.

ಜಾಗತಿಕ ಮಟ್ಟದಲ್ಲಿ ಚಿನ್ನದ ದರ ಏರಿಕೆ; ಭಾರತದಲ್ಲಿ ಮಾತ್ರ ಇಳಿಕೆ

ಭಾರತದಲ್ಲಂತೂ ಕೊರೊನಾ ಆತಂಕ ಮುಂದುವರಿದಿದ್ದರೂ ಚಿನ್ನದ ಫಿಸಿಕಲ್ ಬೇಡಿಕೆ ಕಡಿಮೆ ಆಗಿದೆ. ಮುಂಬರುವ ನವರಾತ್ರಿ ಹೊತ್ತಿಗೆ ಮತ್ತೆ ಚಿನ್ನಕ್ಕೆ ಬೇಡಿಕೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಆಭರಣ ವರ್ತಕರಿದ್ದಾರೆ. ಗ್ರಾಹಕರನ್ನು ಸೆಳೆಯಬೇಕು ಎಂಬ ಕಾರಣಕ್ಕೆ ರಿಯಾಯಿತಿ ನೀಡುತ್ತಿದ್ದಾರೆ. ಚಿನ್ನದ ದರವು ಪ್ರತಿ ಹತ್ತು ಗ್ರಾಮ್ ಗೆ 22 ಕ್ಯಾರಟ್ 50,490 ರುಪಾಯಿ ಇದ್ದರೆ, 24 ಕ್ಯಾರಟ್ ದರವು 51,490 ರುಪಾಯಿ ಇದೆ.

English summary

Today Gold Price Globally Increased, But Decreased In India

Today gold price in India MCX down, but global gold price increased. Here is the analysis of gold price.
Company Search
COVID-19