For Quick Alerts
ALLOW NOTIFICATIONS  
For Daily Alerts

ಟೊಯೊಟಾದಿಂದ ಭಾರತದಲ್ಲಿ ಕಾರು ಲೀಸಿಂಗ್, ಸಬ್ ಸ್ಕ್ರಿಪ್ಷನ್ ಆರಂಭ

|

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನಿಂದ (TKM) ಮಂಗಳವಾರ ಕಾರು ಲೀಸಿಂಗ್ ಮತ್ತು ಸಬ್ ಸ್ಕ್ರಿಪ್ಷನ್ ಕಾರ್ಯಕ್ರಮವನ್ನು ಭಾರತದಲ್ಲಿ ಮಂಗಳವಾರ ಆರಂಭಿಸಲಾಗಿದೆ. ಕಂಪೆನಿಯು 'KINTO' ಎಂಬ ಅದರದೇ ಬ್ರ್ಯಾಂಡ್, ALD ಆಟೋಮೋಟಿವ್ ಇಂಡಿಯಾ ಮತ್ತು SMAS ಆಟೋ ಲೀಸಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವ ವಹಿಸಿದೆ.

ಆರಂಭದಲ್ಲಿ ಇದು ದೆಹಲಿ- ಎನ್ ಸಿಆರ್, ಬೆಂಗಳೂರು ಮತ್ತು ಮುಂಬೈನಲ್ಲಿ ಆರಂಭಿಸಿದ್ದು, ಮೊದಲ ವರ್ಷದಲ್ಲಿ ನಿಧಾನವಾಗಿ ಹತ್ತಕ್ಕೂ ಹೆಚ್ಚು ನಗರಗಳಲ್ಲಿ ವಿಸ್ತರಣೆ ಮಾಡಲಿದೆ. ಟೊಯೊಟಾ ಮೊಬಿಲಿಟಿ ಸರ್ವೀಸಸ್ (TMS) ಗ್ಲ್ಯಾಂಜಾಗೆ ಒಂದು ತಿಂಗಳಿಗೆ 21,000 ರುಪಾಯಿಯಿಂದ ಆರಂಭವಾಗುತ್ತದೆ.

ಟೊಯೊಟಾದಿಂದ ಕಾರು ಖರೀದಿಗೆ ಅಷ್ಟೇ ಅಲ್ಲ, ಸರ್ವೀಸ್ ಗೂ ಇಎಂಐ

 

ಈ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಲು ಆರ್ಥಿಕವಾಗಿ ಹೊರೆ ಆಗದಂಥ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಆದ್ದರಿಂದ ತಮಗೆ ಎಷ್ಟು ಅವಧಿಗೆ ವಾಹನದ ಅಗತ್ಯ ಇದೆಯೋ ಅಷ್ಟು ಸಮಯಕ್ಕೆ ಮಾತ್ರ ಹಣ ಪಾವತಿಸಿ, ಚಂದಾದಾರರಾಗಬಹುದು. ಲೀಸ್ ಗೆ ಹಾಕಿಕೊಳ್ಳಬಹುದು. ಅವರ ಅಗತ್ಯಗಳನ್ನು ಪೂರೈಸುವುದು ನಮ್ಮ ಉದ್ದೇಶ ಎಂದು ಕಂಪೆನಿ ಮೂಲಗಳು ತಿಳಿಸಿವೆ.

ಟೊಯೊಟಾದಿಂದ ಭಾರತದಲ್ಲಿ ಕಾರು ಲೀಸಿಂಗ್, ಸಬ್ ಸ್ಕ್ರಿಪ್ಷನ್ ಆರಂಭ

ಈ ಯೋಜನೆ ಅಡಿಯಲ್ಲಿ ಗ್ರಾಹಕರು ಮೂರರಿಂದ ಐದು ವರ್ಷದ ಅವಧಿಗೆ ನಿಶ್ಚಿತ ತಿಂಗಳ ಶುಲ್ಕಕ್ಕೆ, ತಮಗೆ ಬೇಕಾದ ಕಾರನ್ನು ಆಯ್ಕೆ ಮಾಡಿಕೊಳ್ಳಬಹುದು. ಲೀಸ್ ನಲ್ಲಿ ವಾಹನ ನಿರ್ವಹಣೆ, ಇನ್ಷೂರೆನ್ಸ್, ರಸ್ತೆ ಬದಿ ನೆರವು ಒಳಗೊಂಡಿರುತ್ತದೆ. ಗ್ರಾಹಕರು ಇಪ್ಪತ್ನಾಲ್ಕರಿಂದ ನಲವತ್ತೆಂಟು ತಿಂಗಳ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಗ್ಲಾಂಜಾ, ಯಾರೀಸ್, ಇನ್ನೋವಾ ಕ್ರಿಸ್ಟಾ, ಫಾರ್ಚೂನರ್ ಹೀಗೆ ತಮ್ಮ ಆಯ್ಕೆಯಂತೆ ಕಾರನ್ನು ಲೀಸ್- ಬಾಡಿಗೆಗೆ ಪಡೆಯಬಹುದು. ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಲೀಸಿಂಗ್ ಮತ್ತು ಸಬ್ ಸ್ಕ್ರಿಪ್ಷನ್ ನಲ್ಲಿ ಮಹತ್ತರವಾದ ಬೆಳವಣಿಗೆ ಸಾಧಿಸಬಹುದು ಎಂಬ ನಿರೀಕ್ಷೆ ಇದೆ.

English summary

Toyota Kirloskar Motors Launched Car Leasing, Subscription Program In India

Toyota Kirloskar Motors (TKM) launched car leasing, subscription program on Tuesday in India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X