For Quick Alerts
ALLOW NOTIFICATIONS  
For Daily Alerts

ಜನವರಿ 2022ರಿಂದ ಟೊಯೊಟಾ ವಾಹನಗಳ ಬೆಲೆ ಏರಿಕೆ

|

ಜಪಾನ್‌ನ ಖ್ಯಾತ ವಾಹನಗಳ ತಯಾರಕ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಲಿಮಿಟೆಡ್ ಭಾರತದಲ್ಲಿ ತನ್ನ ಉತ್ಪನ್ನಗಳ ಮೇಲಿನ ಬೆಲೆ ಏರಿಕೆಗೆ ಮುಂದಾಗಿದೆ. ಟೊಯೊಟಾ ಕಿರ್ಲೋಸ್ಕರ್ ಮೋಟರ್(ಟಿಕೆಎಂ) ತನ್ನ ಎಲ್ಲಾ ಮಾದರಿ ವಾಹನಗಳ ಮೇಲಿನ ಬೆಲೆಯನ್ನು ಜನವರಿ 2022ರಿಂದ ಏರಿಕೆ ಮಾಡುವುದಾಗಿ ಘೋಷಿಸಿದೆ. ಆದರೆ, ಎಷ್ಟು ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂಬುದು ಸ್ಪಷ್ಟವಾಗಿಲ್ಲ.

 

ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಗ್ಲಾಂಜಾ, ಅರ್ಬನ್ ಕ್ರೂಸರ್, ಇನ್ನೋವಾ ಕ್ರಿಸ್ಟಾ, ಮತ್ತು ಫಾರ್ಚ್ಯೂನರ್ ಸೇರಿದಂತೆ ಹಲವಾರು ಮಾದರಿಗಳನ್ನು ಮಾರಾಟ ಮಾಡುತ್ತದೆ.

"ಕಚ್ಚಾ ಸಾಮಗ್ರಿಗಳು ಸೇರಿದಂತೆ ಇನ್‌ಪುಟ್ ವೆಚ್ಚದಲ್ಲಿ ನಿರಂತರ ಹೆಚ್ಚಳದ ಹಿನ್ನೆಲೆಯಲ್ಲಿ ಬೆಲೆ ಮರುಹೊಂದಿಕೆ ಅಗತ್ಯವಾಗಿದೆ. ವೆಚ್ಚದ ಹೆಚ್ಚಳದ ಪರಿಣಾಮವು ನಮ್ಮ ಗೌರವಾನ್ವಿತ ಗ್ರಾಹಕರ ಮೇಲೆ ಕನಿಷ್ಠ ಪರಿಣಾಮ ಬೀರುತ್ತದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ" ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟರ್ ಹೇಳಿಕೆಯಲ್ಲಿ ತಿಳಿಸಿದೆ.

ಜನವರಿ 2022ರಿಂದ ಟೊಯೊಟಾ ವಾಹನಗಳ ಬೆಲೆ ಏರಿಕೆ

''ಇದು ನಮಗೆ ಪರೀಕ್ಷೆಯ ಸಮಯ, ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ನಾವು ಹೆಚ್ಚಿನ ಹೊರೆಯನ್ನು ಗ್ರಾಹಕರ ಮೇಲೆ ಹಾಕಲು ಬಯಸುವುದಿಲ್ಲ, ಅಲ್ಪ ಪ್ರಮಾಣದಲ್ಲಿ ಬೆಲೆ ಏರಿಕೆ ಅನಿವಾರ್ಯ'' ಎಂದು ಟಿಕೆಎಂ ಹೇಳಿದೆ.

ಈಗಾಗಲೇ, ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಹೋಂಡಾ ಕಾರ್ಸ್ ಸೇರಿದಂತೆ ವಿವಿಧ ಕಂಪನಿಗಳು ಮುಂದಿನ ತಿಂಗಳಿನಿಂದ ಬೆಲೆಗಳನ್ನು ಹೆಚ್ಚಿಸುವುದಾಗಿ ಸೂಚಿಸಿವೆ. ಉಕ್ಕು, ತಾಮ್ರ, ಅಲ್ಯೂಮಿನಿಯಂ ಮತ್ತು ಅಮೂಲ್ಯ ಲೋಹಗಳಂತಹ ವಿವಿಧ ಅಗತ್ಯ ವಸ್ತುಗಳ ಬೆಲೆ ಕಳೆದ ಒಂದು ವರ್ಷದಲ್ಲಿ ಹೆಚ್ಚಾಗಿದೆ.

ಉಕ್ಕು, ಅಲ್ಯುಮಿನಿಯಂ ಬೆಲೆ ಏರಿಕೆಯಿಂದ ಆಟೋಮೊಬೈಲ್ ಉತ್ಪಾದನಾ ವೆಚ್ಚ ಕೂಡಾ ಹೆಚ್ಚಾಗುತ್ತಿದ್ದು ,ಅನೇಕ ಕಂಪನಿಗಳು ಬೆಲೆ ಏರಿಕೆ ಹಾದಿ ಹಿಡಿದಿವೆ.

ಇಂಧನ ದರ ಏರಿಕೆ ಒತ್ತಡದಲ್ಲಿರುವ ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ಪಾದನಾ ವೆಚ್ಚ ಹೊಸ ಹೊರೆಯಾಗುತ್ತಿದೆ.

ಟೊಯೋಟಾ ಉದ್ಯೋಗಿಗಳಿಗೆ ಮತ್ತು ನಮ್ಮ ಡೀಲರ್ ಸಿಬ್ಬಂದಿಗೆ ಲಸಿಕೆ ಹಾಕುವತ್ತ ಗಮನ ಹರಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಉದ್ಯೋಗಿಗಳು ಸುರಕ್ಷಿತವಾಗಿರಬೇಕು ಎಂದು ಬಯಸಲಾಗುತ್ತಿದೆ.

ಗ್ರಾಹಕರ ಅಗತ್ಯಗಳನ್ನು ಶೀಘ್ರವಾಗಿ ಪೂರೈಸಲು ಉತ್ಪದನಾ ಹೆಚ್ಚಳದತ್ತ ಗಮನಹರಿಸಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.

English summary

Toyota Kirloskar to hike vehicle prices from January 2022

Toyota Kirloskar Motor (TKM) on Wednesday said it will increase prices across its entire product portfolio from January, in order to offset the impact of rise in input costs.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X