For Quick Alerts
ALLOW NOTIFICATIONS  
For Daily Alerts

ಕಿಂಗ್‌ಫಿಶರ್ ಅಲ್ಟ್ರಾ ವಿಟ್‌ಬಿಯರ್ ಬಿಡುಗಡೆ ಮಾಡಿದ UB

|

ಬಿಯರ್ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್.. ಯುನೈಟೆಡ್ ಬ್ರೂವರೀಸ್ ಕಂಪನಿಯು ಮೊದಲ ಕ್ರಾಫ್ಟ್ ಬಿಯರ್ ಕಿಂಗ್‌ಫಿಶರ್ ಅಲ್ಟ್ರಾ ವಿಟ್‌ಬಿಯರ್ ಅನ್ನು ಬುಧವಾರ ಬಿಡುಗಡೆ ಮಾಡಿದೆ. ಮೊದಲಿಗೆ ಕರ್ನಾಟಕ ಹಾಗೂ ಗೋವಾದಲ್ಲಿ ಈ ಅಲ್ಟ್ರಾ ವಿಟ್‌ಬಿಯರ್ ಬಿಡುಗಡೆಯಾಗಿದ್ದು, ಕಿಂಗ್‌ಫಿಶರ್‌ನ ಮೊದಲ ಲಾಗರ್ ಅಲ್ಲದ ಬಿಯರ್ ಆಗಿದೆ.

 

ದೇಶದ ಅತಿದೊಡ್ಡ ಬಿಯರ್ ಉತ್ಪಾದಕ ಸಂಸ್ಥೆಯಾದ ಯುಬಿ 3 ಮಾದರಿಯಲ್ಲಿ ಅಲ್ಟ್ರಾ ವಿಟ್‌ಬಿಯರ್ ಬಿಡುಗಡೆ ಮಾಡಿದೆ. 330 ಎಂಎಲ್ ಬಾಟಲ್, 500 ಎಂಎಲ್ ಕ್ಯಾನ್, ಮತ್ತು 650 ಎಂಎಲ್ ಬಾಟಲಿಗಳಲ್ಲಿ ಇದು ಲಭ್ಯವಿದೆ. ಕರ್ನಾಟಕದಲ್ಲಿ ಕ್ರಮವಾಗಿ 110, 150 ಮತ್ತು 185 ರುಪಾಯಿ ಬೆಲೆಯಿದೆ.

ಕಿಂಗ್‌ಫಿಶರ್ ಅಲ್ಟ್ರಾ ವಿಟ್‌ಬಿಯರ್ ಬಿಡುಗಡೆ ಮಾಡಿದ UB

ಯುಬಿ ಕಂಪನಿಯು ಮುಂದಿನ ದಿನಗಳಲ್ಲಿ ಇದನ್ನು ಮಹಾರಾಷ್ಟ್ರ, ದೆಹಲಿ, ಮತ್ತು ಹರಿಯಾಣಗಳಲ್ಲಿ ಮಾರಾಟ ಮಾಡಲಿದೆ. ಕಳೆದ 18 ರಿಂದ 24 ತಿಂಗಳುಗಳಲ್ಲಿ ಹೊಸ ರೀತಿಯ ಬಿಯರ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು, ಅಲ್ಟ್ರಾ ವಿಟ್‌ಬಿಯರ್ ತನ್ನ ಬ್ರ್ಯಾಂಡ್‌ನೊಂದಿಗೆ ಆಕರ್ಷಿಸುತ್ತಿದೆ.

ಪ್ರಸ್ತುತ ಯುಬಿ ಕಂಪನಿಯ ಕರ್ನಾಟಕದಲ್ಲಿ ಸಾರಾಯಿ ತಯಾರಿಕೆಯಲ್ಲಿ ಕಿತ್ತಳೆ, ಕೊತ್ತಂಬರಿ, ಬೆಲ್ಜಿಯಂನಿಂದ ಆಮದು ಮಾಡಿಕೊಂಡ ಮಸಾಲೆಗಳಿಂದ ತನ್ನ ಬ್ರ್ಯಾಂಡ್ ತಯಾರಿಸುತ್ತದೆ. ಇದರ ಆಲ್ಕೋಹಾಲ್ ಪ್ರಮಾಣ 5ಕ್ಕಿಂತ ಕಡಿಮೆ.

English summary

UB Launches First Craft Beer Kingfisher Ultra Witbier

India's Largest brewer, United breweries wednesday announced the speciality beer ultra witbier under kingfisher brand.
Story first published: Wednesday, December 4, 2019, 18:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X