For Quick Alerts
ALLOW NOTIFICATIONS  
For Daily Alerts

ವಿಜಯ್ ಮಲ್ಯ ವಂಚನೆ ಪ್ರಕರಣ: 5800 ಕೋಟಿ ರೂ. ಮೌಲ್ಯದ ಯುಬಿ ಷೇರುಗಳ ಮಾರಾಟ

|

ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಇಂಗ್ಲೆಂಡ್‌ಗೆ ಪರಾರಿಯಾಗಿರುವ ವಿಜಯ್ ಮಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲ ಮರುಪಡೆಯುವಿಕೆ ನ್ಯಾಯಮಂಡಳಿ (ಡಿಆರ್‌ಟಿ) ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ (ಯುಬಿಎಲ್) ನ 5,800 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದೆ.

 

ಷೇರುಗಳ ಮಾರಾಟದಿಂದ 800 ಕೋಟಿ ರೂ.ಗಳ ಹೆಚ್ಚಿನ ಹಣವನ್ನು ಜೂನ್ 25 ರೊಳಗೆ ನಿರೀಕ್ಷಿಸಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ. ಈ ಹಿಂದೆ ಹಣ ವರ್ಗಾವಣೆ ವಿರೋಧಿ ಕಾನೂನಿನಡಿಯಲ್ಲಿ ಈ ಮಾರಾಟವನ್ನ ಲಗತ್ತಿಸಲಾಗಿದೆ.

ವಿಜಯ್ ಮಲ್ಯ ಪ್ರಕರಣ: 5800 ಕೋಟಿ ರೂ. ಮೌಲ್ಯದ ಯುಬಿ ಷೇರುಗಳ ಮಾರಾಟ

ಮುಂಬೈನ ವಿಶೇಷ ಮನಿ ಲಾಂಡರಿಂಗ್ ಕಾಯ್ದೆ (ಪಿಎಂಎಲ್‌ಎ) ಯ ಆದೇಶದ ಪ್ರಕಾರ ಸಂಸ್ಥೆ ತನ್ನೊಂದಿಗೆ ಲಗತ್ತಿಸಲಾದ ಷೇರುಗಳನ್ನು (ಸುಮಾರು 6,600 ಕೋಟಿ ರೂ.) ಎಸ್‌ಬಿಐ ನೇತೃತ್ವದ ಒಕ್ಕೂಟಕ್ಕೆ ವರ್ಗಾಯಿಸಿದೆ ಎಂದು ಇತ್ತೀಚೆಗೆ ಅದು ಹೇಳಿದೆ.

"ಇಂದು, ಎಸ್‌ಬಿಐ ನೇತೃತ್ವದ ಒಕ್ಕೂಟದ ಪರವಾಗಿ ಡಿಆರ್‌ಟಿ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್‌ನ ಷೇರುಗಳನ್ನು 5824.50 ಕೋಟಿ ರೂ.ಗಳಿಗೆ ಮಾರಾಟ ಮಾಡಿದೆ" ಎಂದು ಜಾರಿ ನಿರ್ದೇಶನಾಲಯ ಬುಧವಾರ ತಿಳಿಸಿದೆ.

ಈಗಾಗಲೇ ವಿಜಯ್ ಮಲ್ಯ ಇಂಗ್ಲೆಂಡ್‌ನಿಂದ ಭಾರತಕ್ಕೆ ಹಸ್ತಾಂತರಿಸುವ ವಿರುದ್ಧ ಪ್ರಕರಣದಲ್ಲಿ ಸೋಲನ್ನ ಕಂಡಿದ್ದಾರೆ. ಯುಕೆ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವರಿಗೆ ಅನುಮತಿ ನಿರಾಕರಿಸಲಾಗಿದೆ.

English summary

UBL Shares Worth Rs 5800 Crore Sold In Vijay Mallya Case: ED

The debts recovery tribunal (DRT) has sold shares worth over Rs 5,800 crore of United Breweries Limited (UBL) : ED
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X