For Quick Alerts
ALLOW NOTIFICATIONS  
For Daily Alerts

ಭಾರತದ ಆರ್ಥಿಕತೆಯು ಪುಟಿದೆದ್ದಿದೆ ಎಂದ ಯುಬಿಎಸ್ ವರದಿ

By ಅನಿಲ್ ಆಚಾರ್
|

ಕೊರೊನಾ ಬಿಕ್ಕಟ್ಟಿನ ಸಂದರ್ಭ ಹಾಗೂ ಆ ನಂತರದ ಲಾಕ್ ಡೌನ್ ನಿಂದಾಗಿ ಕುಸಿತ ಕಂಡಿದ್ದ ಭಾರತದ ಆರ್ಥಿಕತೆಯು ಪುಟಿದೆದ್ದಿದೆ. ಆದರೆ ಇದು ರಚನಾತ್ಮಕ ಸುಧಾರಣೆಯಾಗಿ, ಜಿಡಿಪಿಯು ನಿರ್ದಿಷ್ಟ ಮಟ್ಟದ ಆಚೆಗೆ ಒಯ್ಯುತ್ತದೆ.

ಭಾರತೀಯ ಆರ್ಥಿಕತೆಯು ಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯೆ ಇಪ್ಪತ್ತು ಲಕ್ಷ ಕೋಟಿ ರುಪಾಯಿ ಅಥವಾ ಜಿಡಿಪಿಯ 10.6% ಕಳೆದುಕೊಂಡಿರಬಹುದು. ಆರ್ಥಿಕ ಚಟುವಟಿಕೆ ನಿಧಾನಕ್ಕೆ ಕೊರೊನಾಕ್ಕೂ ಮುಂಚಿನ ಸ್ಥಿತಿಗೆ ಬರುತ್ತಿದ್ದರೂ ನಿಜವಾದ ಜಿಡಿಪಿ FY21ರಲ್ಲಿ 10.5 ಪರ್ಸೆಂಟ್ ಕುಸಿತ ಕಾಣಬಹುದು ಎಂದು ಯುಬಿಎಸ್ ವರದಿ ಹೇಳಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ತೀಕ್ಷ್ಣ ಏರಿಕೆ

ಈ ವರದಿಯಲ್ಲಿ ಹೇಳಿರುವ ಪ್ರಕಾರ, ಹಣದುಬ್ಬರವನ್ನು ದೇಶದಲ್ಲಿ ಚೆನ್ನಾಗಿ ನಿರ್ವಹಿಸಲಾಗಿದೆ. ನೀತಿ ನಿರೂಪಕರಿಗೆ ಇದರಿಂದಾಗಿ ಒಂದು ಸಮಸ್ಯೆ ಇಲ್ಲದಂತಾಗಿದೆ.

ಭಾರತದ ಆರ್ಥಿಕತೆಯು ಪುಟಿದೆದ್ದಿದೆ ಎಂದ ಯುಬಿಎಸ್ ವರದಿ

 

"FY22ರಲ್ಲಿ ಸರ್ಕಾರದಿಂದ ಖರ್ಚಿನ ಬಾಬ್ತು ನಿರ್ವಹಿಸುವ ನಿರೀಕ್ಷೆ ನಮಗಿದೆ. ಸಾರ್ವಜನಿಕ ಶಿಕ್ಷಣ, ಮೂಲಸೌಕರ್ಯದ ಮೇಲೆ ಖರ್ಚಿನ ಪ್ರಮಾಣದಲ್ಲಿ ಹೆಚ್ಚಳ ಮಾಡಿ, ಬೆಳವಣಿಗೆಗೆ ಬೆಂಬಲ ನೀಡಬೇಕು. ಖಾಸಗೀಕರಣದ ಮೇಲೆ ಹೆಚ್ಚು ಗಮನ ನೀಡುವುದರಿಂದ ಆರ್ಥಿಕತೆಯು ಇಳಿಜಾರಿನ ಹಾದಿಯಲ್ಲಿ ಸಾಗದಂತೆ ನೋಡಿಕೊಳ್ಳಲು ಸಹಾಯ ಆಗುತ್ತದೆ," ಎಂದು ವರದಿ ಆಗುತ್ತದೆ.

ಕಾರ್ಮಿಕ ಹಾಗೂ ಕೃಷಿ ವಲಯದಲ್ಲಿ ದೀರ್ಘ ಕಾಲದ ಸುಧಾರಣೆಗಳನ್ನು ಸರ್ಕಾರ ಘೋಷಣೆ ಮಾಡಿತು. ಉತ್ಪಾದನೆ ಉತ್ತೇಜನಕ್ಕೆ ಹಾಗೂ ವಿದೇಶ ನೇರ ಬಂಡವಾಳ ಆಕರ್ಷಣೆಗೆ ಕೂಡ ನಿಯಮಗಳನ್ನು ಘೋಷಿಸಲಾಗಿದೆ. ಮಧ್ಯಮಾವಧಿ ಬೆಳವಣಿಗೆಗೆ ಈ ಸುಧಾರಣೆಗಳು ಸಕಾರಾತ್ಮಕವಾಗಿದೆ. ಪರಿಣಾಮಕಾರಿ ಹಾಗೂ ದಕ್ಷ ಅನುಷ್ಠಾನ ಮುಖ್ಯವಾಗುತ್ತದೆ ಎಂದು ವರದಿಯಾಗಿದೆ.

English summary

UBS Report Said, Indian Economy Bouncing Back

Indian economy bouncing back, said UBS report. Indian economy The Indian economy may have lost close to Rs 20 lakh crore rupees between April to September 2020.
Story first published: Friday, November 27, 2020, 16:08 [IST]
Company Search
COVID-19