For Quick Alerts
ALLOW NOTIFICATIONS  
For Daily Alerts

ಯು.ಕೆ. ವಿಮಾನಗಳ ತಾತ್ಕಾಲಿಕ ಅಮಾನತು ಜನವರಿ 7ರ ತನಕ ವಿಸ್ತರಣೆ

|

ಯುನೈಟೆಡ್ ಕಿಂಗ್ ಡಮ್ ಗೆ ವಿಮಾನದ ತಾತ್ಕಾಲಿಕ ಅಮಾನತನ್ನು ಜನವರಿ 7ನೇ ತಾರೀಕಿನ ತನಕ ಭಾರತ ಸರ್ಕಾರ ವಿಸ್ತರಣೆ ಮಾಡಿದೆ ಎಂದು ವಿಮಾನಯಾನ ಖಾತೆ ಸಚಿವ ಹರ್ದೀಪ್ ಸಂಗ್ ಪುರಿ ಬುಧವಾರ ಹೇಳಿದ್ದಾರೆ. "ಯುನೈಟೆಡ್ ಕಿಂಗ್ ಡಮ್ ನಿಂದ ಭಾರತಕ್ಕೆ ಬರುವ ಮತ್ತು ಇಲ್ಲಿಂದ ತೆರಳುವ ವಿಮಾನಗಳನ್ನು ಜನವರಿ 7, 2021ರ ತನಕ ಅಮಾನತು ಮಾಡಲಾಗಿದೆ," ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

 

"ಆ ನಂತರ ಕಠಿಣವಾದ ನಿರ್ಬಂಧಗಳೊಂದಿಗೆ ಪುನರಾರಂಭವನ್ನು ಮಾಡಲಾಗುವುದು. ಆ ಬಗ್ಗೆ ಮಾಹಿತಿಗಳನ್ನು ಶೀಘ್ರವಾಗಿ ಹಂಚಿಕೊಳ್ಳಲಾಗುವುದು," ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಡಿಸೆಂಬರ್ 31ರ ತನಕ ಯು.ಕೆ.- ಭಾರತ ಮಧ್ಯೆ ವಿಮಾನ ಹಾರಾಟ ಅಮಾನತು

ಕಳೆದ ವಾರ ಭಾರತ ಸರ್ಕಾರವು ಯು.ಕೆ.ಗೆ ತೆರಳುವ ಮತ್ತು ಅಲ್ಲಿಂದ ಬರುವ ಎಲ್ಲ ವಿಮಾನಗಳನ್ನು ಡಿಸೆಂಬರ್ 31ರ ತನಕ ಅಮಾನತು ಮಾಡಿತ್ತು. ಹೊಸ ಬಗೆಯ ಕೊರೊನಾ ವೈರಸ್ ಹಬ್ಬುವುದನ್ನು ತಡೆಗಟ್ಟಬೇಕು ಎಂಬ ಉದ್ದೇಶದಿಂದ ಈ ತೀರ್ಮಾನಕ್ಕೆ ಬರಲಾಗಿತ್ತು. ಈಚೆಗೆ ಯು.ಕೆ.ಯಿಂದ ಬಂದ ಆರು ಪ್ರಯಾಣಿಕರಲ್ಲಿ ಹೊಸ ಬಗೆಯ ಕೊರೊನಾ ಕಾಣಿಸಿಕೊಂಡಿತ್ತು. ಆ ಕಾರಣಕ್ಕೆ ಈಗಿನ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.

ಯು.ಕೆ. ವಿಮಾನಗಳ ತಾತ್ಕಾಲಿಕ ಅಮಾನತು ಜನವರಿ 7ರ ತನಕ ವಿಸ್ತರಣೆ

ಭಾರತವೊಂದೇ ಅಲ್ಲ, ವಿಶ್ವದ ಹಲವು ರಾಷ್ಟ್ರಗಳು ಯುನೈಟೆಡ್ ಕಿಂಗ್ ಡಮ್ ನಿಂದ ವಿಮಾನಗಳು ಬರುವುದಕ್ಕೆ ಹಾಗೂ ಅಲ್ಲಿಗೆ ತೆರಳುವುದಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಿವೆ. ಯುನೈಟೆಡ್ ಕಿಂಗ್ ಡಮ್ ನಲ್ಲಿ ಹೊಸ ಬಗೆಯ ಕೊರೊನಾ ಕಾಣಿಸಿಕೊಂಡಿದ್ದು, ಅದು ಶೇಕಡಾ 70ರಷ್ಟು ವೇಗವಾಗಿ ಸೋಂಕು ಹರಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ.

English summary

UK To And From Flight Temporary Suspension Extend By Govt Till January 7, 2021

UK to and from flight temporary flight suspension extend by Indian govt till January 7, 2021 on Wednesday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X