For Quick Alerts
ALLOW NOTIFICATIONS  
For Daily Alerts

ಕರ್ನಾಟಕದಲ್ಲಿ ಇಳಿಕೆ ಕಂಡ ನಿರುದ್ಯೋಗ ದರ; ಮೇನಲ್ಲಿ 20.4 ಪರ್ಸೆಂಟ್

|

ಕರ್ನಾಟಕದಲ್ಲಿ ನಿರುದ್ಯೋಗ ದರವು ಮೇ 2020ರಲ್ಲಿ 9.4 ಪರ್ಸೆಂಟ್ ಇಳಿಕೆ ಕಂಡು, 20.4 ಪರ್ಸೆಂಟ್ ತಲುಪಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಕಳೆದ ವರ್ಷದ ನವೆಂಬರ್ ನಲ್ಲಿ ಈ ದರವು 2.2 ಪರ್ಸೆಂಟ್ ಇತ್ತು. ಅಲ್ಲಿಂದ ಸದ್ಯದ ಮಟ್ಟಕ್ಕೆ ಬಂದು ತಲುಪಿದೆ.

 

ಭಾರತದ ಕಾಲು ಭಾಗದಷ್ಟು ಉದ್ಯೋಗಿಗಳಿಗೆ ನಿರುದ್ಯೋಗ ಬಿಕ್ಕಟ್ಟು ಸೃಷ್ಟಿ :CMIE

ಕರ್ನಾಟಕದಲ್ಲಿನ ನಿರುದ್ಯೋಗ ಪ್ರಮಾಣವು ರಾಷ್ಟ್ರೀಯ ಮಟ್ಟದ ಸರಾಸರಿಯಾದ 23.5%ಗಿಂತ ಕಡಿಮೆ ಇದೆ. ಜಾರ್ಖಂಡ್, ಬಿಹಾರ ಮತ್ತು ಬಿಹಾರದಲ್ಲಿ ನಿರುದ್ಯೋಗ ಪ್ರಮಾಣವು ವಿಪರೀತ ಹೆಚ್ಚಾಗಿದೆ. ಕ್ರಮವಾಗಿ 59.2%, 46.2% ಹಾಗೂ 44.9% ಇದೆ. ಇನ್ನು ಉತ್ತರಾಖಂಡ್, ಅಸ್ಸಾಂ ಮತ್ತು ಒಡಿಶಾದಲ್ಲಿ 8.0%, 9.6% ಹಾಗೂ 9.6% ಮೂಲಕ ಅತ್ಯಂತ ಕಡಿಮೆ ಇದೆ.

ಕರ್ನಾಟಕದಲ್ಲಿ ಇಳಿಕೆ ಕಂಡ ನಿರುದ್ಯೋಗ ದರ; ಮೇನಲ್ಲಿ 20.4 ಪರ್ಸೆಂಟ್

ಭಾರತದಲ್ಲಿ ಕಾರ್ಮಿಕರ ಮಾರ್ಕೆಟ್ ಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಲು CMIE ನಿರುದ್ಯೋಗ ಸಮೀಕ್ಷೆಯನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅದರಲ್ಲೂ ಅಸಂಘಟಿತ ವಲಯದಲ್ಲಿ ಸ್ಥಿತಿ ಹೇಗಿದೆ ಎಂದು ತಿಳಿಯಲು ನೆರವಾಗಿದೆ. ಅಂದ ಹಾಗೆ ಈ ಸಮೀಕ್ಷೆ ನಡೆಸಲಿ 43,600 ಕುಟುಂಬಗಳನ್ನು ಒಂದು ತಿಂಗಳಿಗೆ ಸ್ಯಾಂಪಲ್ ಎಂಬಂತೆ ಪರಿಗಣಿಸಲಾಗಿತ್ತು. ಭೌಗೋಳಿಕವಾಗಿ ವೈವಿಧ್ಯತೆಯಿಂದ ಇರುವಂತೆ, ಅಂದರೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲೂ ಸಮೀಕ್ಷೆ ನಡೆಸಲಾಗಿದೆ.

ಈ ದತ್ತಾಂಶವನ್ನು CMIE ವೆಬ್ ಸೈಟ್ ನಿಂದ ತೆಗೆದುಕೊಳ್ಳಲಾಗಿದೆ.

English summary

Unemployment Rate In Karnataka For May Month Decreased By 9 Percent

According to CMIE survey, unemployment rate in Karnataka decreased by 9.4% and reached 20.4% for the month of May.
Story first published: Monday, June 1, 2020, 8:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X