For Quick Alerts
ALLOW NOTIFICATIONS  
For Daily Alerts

ಫೇರ್ ಅಂಡ್ ಲವ್ಲಿ ಕ್ರೀಮ್ ಹೆಸರು ಬದಲಿಸಲಿದೆ ಯುನಿಲಿವರ್

|

ಯುನಿಲಿವರ್ ನಿಂದ ಫೇರ್ ಅಂಡ್ ಲವ್ಲಿ ಮುಖದ ಕ್ರೀಮ್ ಹೆಸರು ಬದಲಿಸಲು ಯೋಜನೆ ರೂಪಿಸಲಾಗಿದೆ. ಮೆಲನಿನ್ ಅಂಶವನ್ನು ತಡೆಯುವ ಮುಖದ ಕ್ರೀಮ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತದೆ. ಮೈ ಬಣ್ಣದ ವಿಚಾರಕ್ಕೆ ನಡೆಯುವ ನಿಂದನೆಗೆ ಯು.ಎಸ್.ನ ಆಚೆಗೂ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದರಿಂದ ಬ್ರ್ಯಾಂಡ್ ಮೇಲೆ ಪರಿಣಾಮ ಆಗುತ್ತಿದೆ.

 

ಆಂಗ್ಲೋ- ಡಚ್ ಕಂಪೆನಿಯಾದ ಯುನಿಲಿವರ್ ಈ ಬ್ರ್ಯಾಂಡ್ ಗೆ ಭಾರತವೊಂದರಿಂದಲೇ 50 ಕೋಟಿ ಅಮೆರಿಕನ್ ಡಾಲರ್ ಗೂ ಹೆಚ್ಚು ವಾರ್ಷಿಕ ಆದಾಯ ಬರುತ್ತದೆ. ಇದೀಗ ಫೇರ್ ಅಂಡ್ ಲವ್ಲಿ ಪ್ಯಾಕೇಜಿಂಗ್ ಮತ್ತು ಮಾರ್ಕೆಟಿಂಗ್ ಪ್ರಚಾರದಿಂದ ಫೇರ್, ವೈಟನಿಂಗ್ ಹಾಗೂ ಲೈಟನಿಂಗ್ ಎಂಬ ಪದಗಳನ್ನು ಸಹ ತೆಗೆಯಲಾಗುತ್ತದೆ.

ಹಾರ್ಲಿಕ್ಸ್, ಬೂಸ್ಟ್ ಇನ್ಮುಂದೆ ಹಿಂದೂಸ್ತಾನ್ ಯುನಿಲಿವರ್ ಪಾಲು

ಈ ಫೇರ್ ಅಂಡ್ ಲವ್ಲಿ ಬ್ರ್ಯಾಂಡ್ ಅನ್ನು ಬಾಂಗ್ಲಾದೇಶ್, ಇಂಡೋನೇಷ್ಯಾ, ಥಾಯ್ಲೆಂಡ್, ಪಾಕಿಸ್ತಾನ ಹಾಗೂ ಏಷ್ಯಾದ ಮತ್ತಿತರ ದೇಶಗಳಲ್ಲೂ ಮಾರಾಟ ಮಾಡಲಾಗುತ್ತದೆ. ಏಷ್ಯಾದಲ್ಲಿ ಬಿಳಿಯ ಚರ್ಮವನ್ನು ಶ್ರೀಮಂತಿಕೆ ಮತ್ತು ಸ್ಥಾನಮಾನಗಳ ಜತೆಗೆ ತಳುಕು ಹಾಕಿದಂತೆ ಆಗುತ್ತದೆ.

ಫೇರ್ ಅಂಡ್ ಲವ್ಲಿ ಕ್ರೀಮ್ ಹೆಸರು ಬದಲಿಸಲಿದೆ ಯುನಿಲಿವರ್

ಕಪ್ಪು ವರ್ಣೀಯರು, ಕಪ್ಪು ವರ್ಣೀಯರ ಬದುಕಿನ ಮೇಲೆ ಪೊಲೀಸರ ಕ್ರೌರ್ಯದ ಘಟನೆಗಳು ವಿಶ್ವದಾದ್ಯಂತ ಸದ್ದು ಮಾಡುತ್ತಿವೆ. ಆ ಕಾರಣಕ್ಕೆ ಕಂಪೆನಿಗಳು ತಮ್ಮ ಬಿಜಿನೆಸ್ ಮಾಡೆಲ್ ಗಳನ್ನು ಬೇರೆ ರೀತಿ ನೋಡಲು ಆರಂಭಿಸಿವೆ. ತಾರತಮ್ಯ ಇಲ್ಲದಂತೆ ಎಂಬ ಸಂದೇಶ ರವಾನಿಸುವಂತೆ ನಡೆದುಕೊಳ್ಳಲು ಆರಂಭಿಸಿವೆ.

ಕಳೆದ ವಾರ ಜಾನ್ಸನ್ ಅಂಡ್ ಜಾನ್ಸನ್ ಕಂಪೆನಿಯು ಚರ್ಮ ಬಿಳಿ ಮಾಡುವ ವ್ಯವಹಾರಗಳಿಂದ ಹೊರಬರುವುದಾಗಿ ಹೇಳಿದೆ. ಅದರ ಬದಲಿಗೆ ಕ್ಲೀನ್ ಅಂಡ್ ಕ್ಲಿಯರ್ ಫೇಸ್ ನೆಸ್ ಬ್ರ್ಯಾಂಡ್ ಅನ್ನು ಭಾರತದಲ್ಲಿ ಮತ್ತು ಅದರ ನ್ಯೂಟ್ರೋಜೆನಾ ಫೈನ್ ಫೇರ್ ನೆಸ್ ಅನ್ನು ಏಷ್ಯಾ ಹಾಗೂ ಮಧ್ಯಪ್ರಾಚ್ಯದಲ್ಲಿ ಸೇರಿಸಿಕೊಳ್ಳುವುದಾಗಿ ಹೇಳಿದೆ.

English summary

Unilever Will Change Skin Lightening Cream Fair And Lovely Brand Name

Fair and Lovely skin lightening cream brand name will be changed by Unilever. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X