For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ 2022: ಆದಾಯ ತೆರಿಗೆ ಮಿತಿ ಹೆಚ್ಚಳ ಸಾಧ್ಯತೆ ಕಡಿಮೆ

|

ನವದೆಹಲಿ, ಜನವರಿ 28: ಕೇಂದ್ರ ಬಜೆಟ್ ಮಂಡನೆಗೆ ಕೇವಲ ಎರಡು ದಿನಗಳಷ್ಟೇ ಬಾಕಿ ಇದ್ದು, ಆದಾಯ ತೆರಿಗೆಗೆ ಸಂಬಂಧಿಸಿದಂತೆ ಹೆಚ್ಚು ಬದಲಾವಣೆಗಳಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ.

 

ಸರ್ಕಾರದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿಲ್ಲ, ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಮೂಲ ವೆಚ್ಚವನ್ನು ಹೆಚ್ಚಿಸಬೇಕಾಗಿದೆ. ಇದರ ಹೊರತಾಗಿ ಕಲ್ಯಾಣ ಮತ್ತು ಆರೋಗ್ಯ ರಕ್ಷಣೆಯ ಕ್ರಮಗಳನ್ನು ಆಶ್ರಯಿಸಬೇಕಾಗಿದೆ ಇದಕ್ಕೆ ಸರ್ಕಾರವನ್ನು ನಿರಂತರವಾಗಿ ವೆಚ್ಚ ಮಾಡಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಲಾಭ ಸಿಗುವುದು ಅನುಮಾನ, ಕೆಲವು ವಿಶ್ಲೇಷಕರು ಪ್ರಮಾಣಿತ ಕಡಿತದಲ್ಲಿ ಸ್ವಲ್ಪ ಹೆಚ್ಚಳವಾಗಬಹುದು ಎಂದು ಹೇಳಿದ್ದಾರೆ.
ಕೇರ್ ಎಡ್ಜ್‌ ಸಮೀಕ್ಷೆಯ ಪ್ರಕಾರ, ಶೇ.53ರಷ್ಟು ಮಂದಿ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದೇ ಹೇಳಿದ್ದಾರೆ.

ಕೇಂದ್ರ ಬಜೆಟ್ 2022: ಆದಾಯ ತೆರಿಗೆ ಮಿತಿ ಹೆಚ್ಚಳ ಸಾಧ್ಯತೆ ಕಡಿಮೆ

ವೈಯಕ್ತಿಕ ಆದಾಯಕ್ಕೆ ತೆರಿಗೆ ವಿಧಿಸುವುದು ದೇಶದಲ್ಲಿ ಚಾಲ್ತಿಯಲ್ಲಿರುವ ಪದ್ಧತಿ. ಆದರೆ ಆದಾಯದ ಬದಲಿಗೆ ಖರ್ಚು ವೆಚ್ಚದ ಮೇಲೆ ತೆರಿಗೆ ವಿಧಿಸುವ ಹೊಸ ಪದ್ಧತಿಗೆ ಬಜೆಟ್‌ನಲ್ಲಿ ಘೋಷಣೆಯಾಗಲಿದೆಯೇ ಎಂಬ ಕುತೂಹಲ ಉಂಟಾಗಿದೆ.

ಬಜೆಟ್‌ ಪೂರ್ವ ಸಮಾಲೋಚನೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ತೆರಿಗೆ ಸುಧಾರಣೆ ಬಗ್ಗೆಯೂ ಸಲಹೆಗಳನ್ನು ನಿರೀಕ್ಷಿಸಿದ್ದಾರೆ. ಈ ಸಂದರ್ಭ ಕೆಲವರು ಆದಾಯ ತೆರಿಗೆ ರದ್ದತಿಗೆ ಹಾಗೂ ವೆಚ್ಚದ ಮೇಲೆ ತೆರಿಗೆ ಸಂಗ್ರಹಿಸಲು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ವೆಚ್ಚ ತೆರಿಗೆ (ಎಕ್ಸ್‌ಪೆಂಡೀಚರ್‌ ಟ್ಯಾಕ್ಸ್‌) ಎನ್ನುವುದು ಕೂಡ ಆದಾಯ ತೆರಿಗೆಯಂತೆ ಒಂದು ತೆರಿಗೆ. ಆದರೆ ಇದು ವ್ಯಕ್ತಿಯ ಆದಾಯದ ಬದಲು ಆತನ ಖರ್ಚು ವೆಚ್ಚವನ್ನು ಅವಲಂಬಿಸಿದೆ.
ದೇಶದ 135 ಕೋಟಿ ಜನರಲ್ಲಿ ವೈಯಕ್ತಿಕ ಆದಾಯ ತೆರಿಗೆ ಪಾವತಿಸುವವರು ಕೇವಲ 6.32 ಕೋಟಿ ಜನ ಮಾತ್ರ. ಕಾರ್ಪೊರೇಟ್‌ ತೆರಿಗೆ ಮತ್ತು ಆದಾಯ ತೆರಿಗೆ ಸೇರಿ 10.80 ಲಕ್ಷ ಕೋಟಿ ರೂ. ಸಂಗ್ರಹವಾಗುತ್ತದೆ. ಆದರೆ ಆದಾಯ ತೆರಿಗೆ ರದ್ದುಪಡಿಸಿ ಆದಾಯಕ್ಕೆ ಬದಲು ವೆಚ್ಚದ ಮೇಲೆ ತೆರಿಗೆ ವಿಧಿಸಿದರೆ ಇದಕ್ಕಿಂತ ಹೆಚ್ಚು ತೆರಿಗೆ ಸಂಗ್ರಹಿಸಬಹುದು.

ಆದಾಯ ತೆರಿಗೆ ಸೋರಿಕೆಯ ಅಪಾಯಗಳು ಇರುವುದಿಲ್ಲ. ಜನತೆಗೆ ಆದಾಯ ತೆರಿಗೆ ಮತ್ತು ರಿಟರ್ನ್ಸ್‌ ಸಲ್ಲಿಸಬೇಕಾಗುವುದಿಲ್ಲ. ಜನರು ದುಂದು ವೆಚ್ಚ ಮಾಡಲು ಹೋಗುವುದಿಲ್ಲ. ಉಳಿತಾಯದ ಪ್ರವೃತ್ತಿ ಬೆಳೆಯುತ್ತದೆ. ಇಲ್ಲಿ ಹೆಚ್ಚು ಖರ್ಚು ಮಾಡುವ ಶ್ರೀಮಂತರಿಗೆ ಹೆಚ್ಚು ತೆರಿಗೆ ವಿಧಿಸಬಹುದು. ಹೀಗಾಗಿ ಆದಾಯ ತೆರಿಗೆ ಬದಲು ವೆಚ್ಚದ ಮೇಲೆ ತೆರಿಗೆ ವಿಧಿಸುವುದು ಉತ್ತಮ ಎನ್ನುತ್ತಾರೆ ಅದರ ಪರ ಇರುವವರು.

 

ಅಧಿಕ ತೆರಿಗೆಯ ಪರಿಣಾಮ ಜನರ ಉಳಿತಾಯ ಕುಸಿಯುತ್ತಿದೆ. ಇದರ ಪರಿಣಾಮ ಅವರ ವೆಚ್ಚ ಮತ್ತು ಹೂಡಿಕೆಯೂ ಕಡಿಮೆಯಾಗುತ್ತಿದೆ. ಸಾಲದ ಮೇಲಿನ ಬಡ್ಡಿ ದರ ಕೂಡ ಭಾರತದಲ್ಲಿ ಹೆಚ್ಚು. ಜನತೆ ಹೆಚ್ಚು ಹೂಡಿಕೆ ಮತ್ತು ಖರ್ಚು ಮಾಡಿದರೆ ಆರ್ಥಿಕತೆ ಚೇತರಿಸಬಹುದು.

ವಿರೋಧ ಏಕೆ?

*ಆದರೆ ಇದು ಪ್ರಾಥಮಿಕ ಹಂತದಲ್ಲಿರುವ ಪ್ರಸ್ತಾಪವಾಗಿದ್ದು, ಸಾಕಷ್ಟು ಚರ್ಚೆ, ಅಧ್ಯಯನ ಅಗತ್ಯ.
*ಆದಾಯ ತೆರಿಗೆಯನ್ನು ರದ್ದುಪಡಿಸಿ, ಖರ್ಚು ವೆಚ್ಚಗಳ ಮೇಲೆ ಅತ್ಯಲ್ಪ ಪ್ರಮಾಣದ ತೆರಿಗೆ ವಿಧಿಸುವುದರಿಂದ ದೊಡ್ಡ ಮೊತ್ತದ ತೆರಿಗೆ ಸಂಗ್ರಹವಾಗದು ಎಂಬ ವಾದವೂ ಇದೆ.
*ಜನತೆ ವೆಚ್ಚ ಮಾಡುವುದನ್ನೇ ಕಡಿಮೆ ಮಾಡಿದರೆ ಆರ್ಥಿಕ ಬೆಳವಣಿಗೆಗೂ ಅಡಚಣೆಯಾಗಬಹುದು. ಈ ತೆರಿಗೆಯನ್ನು ವಿಧಿಸುವ ಕ್ರಮ ಹೇಗೆ ಎಂಬುದೂ ಸ್ಪಷ್ಟವಾಗಿಲ್ಲ. ಜನತೆ ಕೆಲವೊಮ್ಮೆ ತಮಗೆ, ಮತ್ತೊಮ್ಮೆ ಬೇರೆಯವರಿಗಾಗಿ ಖರ್ಚು ಮಾಡುವುದೂ ಇದೆ.
*ಸಂಪೂರ್ಣ ನಗದು ರಹಿತ ಆರ್ಥಿಕ ವ್ಯವಸ್ಥೆ ಆದಾಗ ಇದನ್ನು ಜಾರಿಗೆ ತರಬಹುದು. ಇಲ್ಲದಿದ್ದರೆ ಖರ್ಚನ್ನೂ ತೋರಿಸದೆ ತೆರಿಗೆಯಿಂದ ತಪ್ಪಿಸುವ ಪ್ರವೃತ್ತಿ ಮುಂದುವರಿಯಬಹುದು.

English summary

Union Budget 2022: Income Tax Relief Remains Doubtful

Most analysts, rating agencies and individuals remain skeptical that there would be any income tax related benefits in the Union Budget 2022.
Story first published: Friday, January 28, 2022, 13:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X